ಹಾಡುಗಳಿಂದ ಅಬ್ಬರಿಸುತ್ತಿರುವ ತಾರಕ್‌

ಸಣ್ಣ ಟೀಸರ್‌ ಮೂಲಕ ಸಖತ್‌ ಸೌಂಡ್‌ ಮಾಡ್ದಿದ್ದ ತಾರಕ್‌ ಸಿನಿಮಾ ಇದೀಗ ತನ್ನ ಹಾಡುಗಳ ಮೂಲಕವೇ ದರ್ಶನ್‌ ಅಭಿಮಾನಿಗಳನ್ನು ಮಾತ್ರವಲ್ಲದೆ, ಸಂಗೀತ ಪ್ರಿಯರನ್ನೂ ಮೋಡಿ ಮಾಡಿದೆ.

ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದು, ವಿ.ನಾಗೇಂದ್ರ ಪ್ರಸಾದ್‌, ಜಯಂತ್‌ ಕಾಯ್ಕಿಣಿ ಹಾಗೂ ಹರಿ ಸಂತೋಷ್‌ ತಲಾ ಎರಡೆರಡು ಹಾಡುಗಳನ್ನು ಬರೆದಿದ್ದಾರೆ.

ತಾರಕ್‌ ಸಿನಿಮಾ ಹಾಡುಗಳಿಗೆ ಮ್ಯೂಸಿಕ್‌ ಕಂಪೋಸ್‌ ಮಾಡುವುದು ನಿಜಕ್ಕೂ ಚಾಲೆಂಜಿಂಗ್‌ ಆಗಿತ್ತು ಎನ್ನುವ ಅರ್ಜುನ್‌, ಇಷ್ಟು ದಿನ ದರ್ಶನ್‌ ಸಿನಮಾಗಳ ಸಂಗೀತಕ್ಕೂ ತಾರಕ್‌ ಸಂಗೀತಕ್ಕೂ ಬಹಳ ವ್ಯತ್ಯಾಸವಿದೆ ಎನ್ನುತ್ತಾರೆ.

‘ಈ ಸಿನಿಮಾದ ಇಂಟ್ರಡಕ್ಷನ್‌ ಹಾಡಿನಿಂದ ಹಿಡಿದು, ಎಲ್ಲವೂ ಬದಲಾಗಿದೆ. ಬೇರೆ ತರಹದ ಮ್ಯೂಸಿಕ್‌, ಗೀತೆ, ಗಾಯಕರು ಹೀಗೆ ಎಲ್ಲವೂ ವಿಭ್ನಿವಾಗಿದೆ. ಮಾಸ್‌ ಹಾಡುಗಳನ್ನು ಸಹ ಸ್ಟೈಲಿಶ್‌ ಆಗಿ ಮಾಡಿದ್ದೇವೆ. ದರ್ಶನ್‌ ಅವರ ಹಳೇ ಸಿನಿಮಾಗಳಲ್ಲಿದ್ದ, ಮೆಲೋಡಿ ತಾರಕ್‌ನಲ್ಲಿ ಇಲ್ಲ, ಇಲ್ಲಿ ಬೇರೆ ರೀತಿಯದ್ದೇ ಮೆಲೋಡಿ ಇದೆ. ಅಲ್ಲದೆ ದರ್ಶನ್‌ ಅವರ ಕಾಯಂ ಗಾಯಕರನ್ನು ಸಹ ಈ ಬಾರಿ ಬದಲಿಸಲಾಗಿದೆ. ಅರ್ಮನ್‌ ಮಲ್ಲಿಕ್‌ ಧ್ವನಿಯಲ್ಲಿ ಎರಡು ರೊಮ್ಯಾಂಟಿಕ್‌ ಹಾಡುಗಳು ಮೂಡಿ ಬಂದಿದೆ. ಗಾಯಕ ವ್ಯಾಸ್‌ ಎರಡು ಹಾಡು ಹಾಡಿದ್ದಾರೆ. ವಿಜಯ ಪ್ರಕಾಶ್‌ ಕೂಡ ಒಂದು ಸೂಪರ್‌ ಹಾಡಿಗೆ ಧ್ವನಿಯಾಗಿದ್ದಾರೆ. ಇವರು ಜೊತೆ ಶ್ರೇಯಾ ಘೋಷಲ್‌, ಇಂದು ನಾಗರಾಜ…, ನೀತಿ ಮೋಹನ್‌ ಹಾಡಿದ್ದಾರೆ. ಒಟ್ಟಿನಲ್ಲಿ ಇಲ್ಲಿಯವರೆಗೆ ದರ್ಶನ್‌ ಅವರ ಸಿನಿಮಾದ ಮ್ಯೂಸಿಕ್‌ಗೂ ತಾರಕ್‌ ಸಂಗೀತಕ್ಕೂಬಹಳ ವ್ಯತ್ಯಾಸವಿದೆ’ ಎನ್ನುತ್ತಾರೆ ಅರ್ಜುನ್‌ ಜನ್ಯ.

ಈ ಚಿತ್ರದ ಎಲ್ಲ ಹಾಡುಗಳು ನನ್ನ ಫೇವರಿಟ್‌ಅಂತೆ. ಈ ಚಿತ್ರಕ್ಕೆ ಸಂಗೀತ ನೀಡಿದ್ದು ಮತ್ತು ರೀ ರೆಕಾರ್ಡಿಂಗ್‌ ಮಾಡಿದ್ದು ದೊಡ್ಡ ಚಾಲೆಂಜ್‌ ಆಗಿತ್ತು. ಈ ಸಿನಿಮಾದ ‘ಕುಡಿ ಮಗಾ..’ ಹಾಡು ದರ್ಶನ್‌ ಅವರಿಗೆ ಫೇವರಿಟ್‌ ಆಗಿಬಿಟ್ಟಿದೆ. ಅವರು ಬಹಳ ಇಷ್ಟಪಟ್ಟು ಅವರ ಸ್ನೇಹಿತರಿಗೆಲ್ಲ ಈ ಹಾಡನ್ನು ಕೇಳಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

Leave a Reply