ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪನವರಿಗೆ ಒಂದು ಬಹಿರಂಗ ಪತ್ರ 

*ಯಡಿಯ್ಯೂರಪ್ಪರವರಿಗೆ ಮತದಾರನ ಬಹಿರಂಗ ಪತ್ರ*

ಮಾನ್ಯ ಯಡಿಯೂರಪ್ಪನವರೆ,
ನೀವೇ ಹೇಳಿರುವಂತೆ ನಿಮಗೆ  60ವರ್ಷಕ್ಕೂ ಹೆಚ್ಚು, ಸಧ್ಯ ನಿಮಗೆ 75 ವರ್ಷ ವಯಸ್ಸಾಗಿದೆ. ನಿಮ್ಮ  ಮನೆಯಿಂದ ಕೇವಲ 6km ದೂರ ಇರುವ ಪೋಲಿಸ್ ಠಾಣೆಗೆ ತನಿಖೆಗಾಗಿ  ಹಾಜರಾಗಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂಬ ನಿಮ್ಮ ಮಾತನ್ನು ಯಾರೇ ಆಗಲಿ ಸಹಾನುಭೂತಿಯಿಂದ ಪರಿಗಣಿಸಬೇಕು. ಆದ್ದರಿಂದಲೇ, ಕಾನೂನಿನ ಪ್ರಕಾರ  ಸೆಕ್ಷನ್ 160 Crpc ಪ್ರಕಾರ 60 ವರ್ಷಕ್ಕೂ ಮೆಲ್ಪಟ್ಟ ಹಿರಿಯರು, ಕೈ ಕಾಲು ಬಿದ್ದು ಹೋಗಿರುವಂತವರೂ, ಅರಳು-ಮರಳು ಇರುವಂತವರೂ, ಮನೆ ಬಿಟ್ಟು ಎಲ್ಲೂ ಹೊರಗಡೆ ಹೋಗಲು ಸಾಧ್ಯವೇ ಇಲ್ಲದವರಿಗೆ ನೀಡಲಾಗಿರುವ ವಿನಾಯಿತಿಯನ್ನು ನೀವು ಸದ್ಬಳಕೆ ಮಾಡಿಕೊಂಡಿದ್ದೀರಿ.

ಆದರೆ ಕರ್ನಾಟಕದ ಮತದಾರರಾದ ನಮಗೆ ಈಗ ಒಂದು ಜಟಿಲ ಪ್ರಶ್ನೆ ಎದುರಾಗಿದೆ. *75 ವರ್ಷ ವಯಸ್ಸು ತುಂಬಿ ಮುದಿಯಾಗಿ, ಪೊಲೀಸ್ ಠಾಣೆಗೆ ಕೇವಲ 6 KM ಪ್ರಯಾಣಿಸಲೂ ಸಾಧ್ಯವಿಲ್ಲದ ನಿಮ್ಮನ್ನು ಆರಿಸಿ, ಶಾಸಕರನ್ನಾಗಿ ಮಾಡುವುದು ಹೇಗೆ?* ಎಂಬುದೇ ಆ ಪ್ರಶ್ನೆ. ಮೇಲಾಗಿ ನಾನೇ ಮುಂದಿನ ಮುಖ್ಯಮಂತ್ರಿ ಅಂತ ಬೇರೆ ಹೇಳಿಕೊಂಡು ಓಡಾಡ್ತಾ ಇದೀರಿ. 

ಹಾಂ… ಮರೆತಿದ್ದೆ ನೋಡಿ… 

1) ನೀವು ಅಧಿಕಾರ ಹಿಡಿಯಲಿಕ್ಕಾಗಿ ಪುರಸೊತ್ತು ಇಲ್ಲದೆ ಇಡಿ ರಾಜ್ಯ ಸುತ್ತುವುದಕ್ಕೆ

  ನಿಮಗೆ ವಯಸ್ಸಾಗಿಲ್ಲ…

02) ನಿಮ್ಮ ಹೈಕಮಾಂಡ್ ಅನ್ನು ತೃಪ್ತಿಪಡಿಸಲು ಪದೇಪದೇ ದೆಹಲಿಗೆ ಹೋಗುವಾಗ ನಿಮಗೆ
      ವಯಸ್ಸಾಗಿಲ್ಲ…

03) ಮಾಟ ಮಂತ್ರ ಮಾಡಿಸೋಕೆ ಕೇರಳಕ್ಕೆ  ಹೋಗುವುದಕ್ಕೆ ವಯಸ್ಸಾಗಿಲ್ಲ…
*ಡಾಲರ್ಸ ಕಾಲೊನಿ ಮನೆ ಯಿಂದ ಮಲ್ಲೇಶ್ವರಂ ACP ಕಚೇರಿಗೆ 6 KM  ಪ್ರಯಾಣ ಮಾಡಲಿಕ್ಕೆ  ಮಾತ್ರ  ವಯಸ್ಸಾಗಿದೆ!!!   ಯಾರ ಕಿವಿಗೆ ಹೂ ಇಡ್ತಾ ಇದೀರಿ ಸ್ವಾಮಿ…. ಸ್ವಲ್ಪ ಹಿಂತಿರುಗಿ ನೋಡಿ ಸ್ವಾಮಿ* 
A) ನಿಮಗೆ 60 ವರ್ಷ ಆದ ಮೇಲೆಯೇ ರಾಜ್ಯದ ಜನ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು,
😎 60 ವರ್ಷ ಆದ ಮೇಲೆ ನೀವು ಭೂ ಅಕ್ರಮದಲ್ಲಿ ಸಿಲುಕಿ ವಿಧಾನಸೌಧದಿಂದ ನೇರವಾಗಿ ಜೈಲಿಗೆ ಹೋಗಿದ್ದು..
C) 60 ವರ್ಷ ಆದ ಮೇಲೆಯೇ ನೀವು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಇಡೀ ರಾಜ್ಯ ಸುತ್ತಾಡಿದ್ದು..
D) 60 ವರ್ಷ ಆದ ಮೇಲೆಯೇ ಮತ್ತೆ ಬಿಜೆಪಿ ಗೆ ಬಂದು ಶಿವಮೊಗ್ಗದಿಂದ MP ಯಾಗಿರೋದು.
ಆವಾಗ ನೆನಪಾಗದ್ದಿದ್ದ ವಯಸ್ಸು ಇವಾಗ ನೆನಪಾಯಿತು ನಿಮಗೆ….. 
*ರಾಜ್ಯದ ಜನತೆಯನ್ನು  ಮೂರ್ಖರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿದ್ದೀರಿ ಸ್ವಾಮಿ ನೀವು….*
ಹೋಗಲಿ,  ಇನ್ನಾದರೂ ರಾಜಕೀಯ ನಿವೃತ್ತಿ ತೆಗೆದುಕೊಂಡು ಮೊಮ್ಮಕ್ಕಳ ಜೊತೆ ಆಟವಾಡಿಕೊಂಡಿರಿ…. *ಭ್ರಷ್ಟಾಚಾರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು,  ವಿಧಾನಸೌಧದಿಂದ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಕರ್ನಾಟಕಕ್ಕೆ ಕಳಂಕ ತಂದ ನಿಮ್ಮನ್ನು ಮತ್ತೆ ವಿಧಾನಸೌಧದಲ್ಲಿ ನೋಡಬೇಕಾದ ಕರ್ಮ ಈ ನಾಡಿಗೆ ತಪ್ಪಿದಂತಾಗುತ್ತದೆ…*
ನಿಮ್ಮ  ವಯಸ್ಸಿಗೂ ಗೌರವ ಸಿಗುತ್ತೆ… ಮತ್ತೆ ಹೊಸ ವೇಷ ಹಾಕುತ್ತಾ, ಹೊಸ ನಾಟಕ ಮಾಡುತ್ತಾ ಮತದಾರರೆದುರು ನೀವು ಬರುವುದಿಲ್ಲ  ಎಂಬ ನಿರೀಕ್ಷೆಯೊಂದಿಗೆ,    

ಇಂತಿ ನೊಂದ  

*ಕರ್ನಾಟಕ ಮತದಾರರಲ್ಲಿ ನಾನೂ ಒಬ್ಬ* 

••••••••••••••••••••••••••••••••••••••••••••••

Leave a Reply