ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್ವುಡ್ನ ಪ್ರೇಮ ಪಕ್ಷಿಗಳು

ಬೆಂಗಳೂರು : ಇತೀಚಿಗೊಂದು ಕುತೂಹಲಕಾರಿ ಸುದ್ದಿಯೊಂದು ಸ್ಯಾಂಡಲ್ವುಡ್ನಲ್ಲಿ ಹರಿದಾಡುತ್ತಿದೆ ಅದು  ಸ್ಯಾಂಡಲ್‌ ವುಡ್‌ನ ಮತ್ತೊಂದು ಪ್ರೇಮ ಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ ಎಂಬುವುದು , ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಮದುವೆಯಾಗುತ್ತಿದ್ದಾರಂತೆ.

Image result for meghana raj and chiranjivi sarja

ಅಕ್ಟೋಬರ್‌ 22ರಂದು ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಚಿರು-ಮೇಘನಾ ನಿಶ್ಚಿತಾರ್ಥ ನೆಡಯಲಿದ್ದು , ಬರುವ ಡಿಸೆಂಬರ್‌ನಲ್ಲಿ ಈ ಸ್ಟಾರ್‌ ಜೋಡಿ ಸಪ್ತಪದಿ ತುಳಿಯಲಿದೆ ಎಂಬ ಮಾಹಿತಿ ದೊರೆತಿದೆ.
ಇನ್ನು ಮೇಘನಾ ರಾಜ್‌ ಮತ್ತು ಚಿರಂಜೀವಿ ಸರ್ಜಾ ‘ಆಟಗಾರ’ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ದ್ವಾರಕೀಶ್‌ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರ ಯಶಸ್ಸು ಕಂಡಿತ್ತು. ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಸುಮಾರು ದಿನಗಳಿಂದಲೂ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿತ್ತು.

ಆದರೆ ಈ ಬಗ್ಗೆ ಚಿರಂಜೀವಿ ಸರ್ಜಾ ಕುಟುಂಬ  ಹಾಗು ಮೇಘನಾ ಕುಟುಂಬ ಯಾವುದೇ ಮಾಹಿತಿ ನೀಡಿಲ್ಲ.  ಈ ಉಹಾ ಪೋಹಗಳಿಗೆ ಕುಟುಂಬಸ್ಥರು ಯಾವಾಗ ತೆರೆ ಎಳಯುವರು ಎಂದು ಕಾಯ್ದು ನೋಡಬೇಕು

Leave a Reply