ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯವನ್ನು ಟೀಕಿಸಿದ ಪರಮೇಶ್ವರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಂಗಳಾರತಿ ಮಾಡುತ್ತಿರುವ ಸಾರ್ವಜನಿಕರು  …

  ✍✍✍ವಿಜಯ್ ಒಳ್ಳೆ ಹುಡುಗ

ಗ್ರಾಮವಾಸ್ತವ್ಯ ಹೆಸರಲ್ಲಿ 42 ಕಡೆ ಮಲಗಿದ್ದೆ ಕುಮಾರಸ್ವಾಮಿಯವರ ದೊಡ್ಡ ಸಾಧನೆ — ಪರಮೇಶ್ವರ್ ಹೇಳಿಕೆ‌.
ಜನಸಾಮಾನ್ಯರಲ್ಲಿ ನನ್ನದೊಂದು ಪ್ರಶ್ನೆ..‌
◆ನಿಮ್ಮ ಊರಿನ ಯಾವನಾದರೂ ಒಬ್ಬ “ಗ್ರಾಮಪಂಚಾಯ್ತಿ ಸದಸ್ಯ” ಯಾವತ್ತಾದರೂ ನಿಮ್ಮ ಮನೆಗೆ ಬಂದು, ನಿಮ್ಮ ಜೊತೆ ಕೂತು ಬೋಜನ ಸವಿದಿದ್ದಾನಾ???
◆ಯಾರಾದರೂ “ತಾಲೋಕಿನ ಪಂಚಾಯಿತಿ ಸದಸ್ಯ ” ನಿಮ್ಮ ಮನೆಗೆ ಬಂದು ಯೋಗಕ್ಷೇಮ ವಿಚಾರಿಸಿದ್ದಾನ???
◆”ಜಿಲ್ಲಾ ಪಂಚಾಯಿತಿ ಸದಸ್ಯನಾಗಲಿ ಅಥವಾ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಲಿ” ನಿಮ್ಮ ಮನೆಗೆ ಬೇಟಿಕೊಟ್ಟು, ನಿಮ್ಮ ಕಣ್ಣೀರು ಓರೆಸಿದ್ದುಂಟಾ???
◆ನಿಮ್ಮ ಕ್ಷೇತ್ರದ ಶಾಸಕರಾದ ವ್ಯಕ್ತಿ ,ನಿಮ್ಮ ಮನೆಯ ದಾರಿಯನ್ನು ಯಾವತ್ತಾದರೂ ತುಳಿದಿದ್ದಾರಾ???
◆ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗೋಣ , ಯಾರಾದರೂ ಒಬ್ಬ ಮಿನಿಸ್ಟರ್ ನಿಮ್ಮ ಊರ ಕಡೆ ಬಂದಿದ್ದಾನಾ???
..ಇಲ್ಲ ..ಇವರ್ಯಾರು ಬರುವುದಕ್ಕೆ ಸಾಧ್ಯವೇ .‌.ಇಲ್ಲ…
ಅವರು ಬರುವುದು ಚುನಾವಣೆಯ ಸಮಯದಲ್ಲಿ ಮಾತ್ರ…

ಆಮೇಲೆ ನಾವೇ ಅವರನ್ನು ಹುಡುಕಿಕೊಂಡು ಊರು ಊರು  ಅಲೆಯಬೇಕು…

ಇಂಥ ರಾಜಕೀಯ ನಾಯಕರ ಮಧ್ಯೆ ,ಒಬ್ಬ ವಿಭಿನ್ನ ನಾಯಕ…
ಅವರು ಗ್ರಾಮ ಪಂಚಾಯ್ತಿ ಸದಸ್ಯನಲ್ಲ…
ಜಿಲ್ಲಾ ಪಂಚಾಯತ್ ಸದಸ್ಯನೂ ಅಲ್ಲ..‌‌.

ನಿಮ್ಮ ಕ್ಷೇತ್ರದ ಶಾಸಕರಂತೂ ಮೊದಲೇ ಅಲ್ಲ.‌‌..

ಅದೆಲ್ಲದಕ್ಕೂ ಮೇಲಿನ ದರ್ಜೆಯ ನಾಯಕ…

ದೇಶದಲ್ಲೇ ಮೊಟ್ಟಮೊದಲ ಭಾರಿಗೆ ಒಂದು ರಾಜ್ಯದ  ಮುಖ್ಯಮಂತ್ರಿ..‌‌
ಒಬ್ಬ ಸಾಮಾನ್ಯ ಕಡು ಬಡವನ ಮನೆಗೆ ಬಂದು..‌‌

ಆತನ ಮನೆಯಲ್ಲೇ ಊಟ ಮಾಡಿ…

ಅವರೊಂದಿಗೆ ಬೆರೆತು…

ರಾತ್ರಿಯಿಡಿ ಅಲ್ಲೇ ನಿದ್ರಿಸಿ… 

ಜನಸಾಮಾನ್ಯರ ಸಮಸ್ಯೆಯನ್ನು ಅರಿತು ಕೊಂಡು… ಅದಕ್ಕೆ ಪೂರಕವಾದಂತ ಯೋಜನೆಗಳನ್ನು ರೂಪಿಸಿದ ದೇಶದ ಏಕೈಕ ಮುಖ್ಯಮಂತ್ರಿ….

ಆ ಮುಖ್ಯಮಂತ್ರಿಯ ಈ ಒಂದು ಕಾರ್ಯ ದೇಶಾಧ್ಯಂತ ಭಾರಿ ಸಂಚಲನವನ್ನೇ ಮೂಡಿಸಿತ್ತು.‌‌‌..
ದೇಶದ ಸಾಕಷ್ಟು ರಾಜಕಾರಣಿಗಳು ಈ ಮುಖ್ಯಮಂತ್ರಿಯ ರೀತಿ ತಮ್ಮ ತಮ್ಮ ರಾಜ್ಯಗಳಲ್ಲೂ ಈ ರೀತಿ ಮಾಡಿದ್ದೂ ಉಂಟು…

ಮಾನ್ಯ ಪರಮೇಶ್ವರರೇ..‌‌.
ಈ ರೀತಿ ಕಾರ್ಯ ಮಾಡುವ ಸಾಮರ್ಥ್ಯ  ನಿಮ್ಮಲ್ಲಿದ್ದರೆ  ನೀವೂ ಮಾಡಿ..‌.

ನಿಮ್ಮ ಮುಖ್ಯಮಂತ್ರಿಗಳಿಂದಾನೂ ಮಾಡಿಸಿ…‌

ದಯವಿಟ್ಟು ಉಡಾಫೆಯಾಗಿ ಮಾತನಾಡಬೇಡಿ‌‌‌‌‌‌‌‌‌‌‌…
ನಮಗೆ ವಿಧಾನಸೌಧದಲ್ಲಿ ಕೂತು ಕೆಲಸ ಮಾಡುವವರು ಬೇಕಾಗಿಲ್ಲ…
ನಮಗೆ ಬೇಕಿರುವುದು ನಮ್ಮ ಜೊತೆ ಬೆರೆತು ಕೆಲಸ ಮಾಡುವ ವ್ಯಕ್ತಿ….

13 thoughts on “ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯವನ್ನು ಟೀಕಿಸಿದ ಪರಮೇಶ್ವರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಂಗಳಾರತಿ ಮಾಡುತ್ತಿರುವ ಸಾರ್ವಜನಿಕರು  …

 1. madhukbdsce@gmail.com says:

  He wast leader pareswara he want Cm post no more anything

 2. Manya Paramesh avare nivu Home minister agiddavaru nimma thavaru TUMAKUR Jillege henu koduge kottiddiri heli amele bereyavara bagge mathadi

 3. Shankaralingegowda says:

  For this only koratagere people send you to your home

 4. Bhargav Gowda says:

  ನಿನ್ನಿಂದ ಗ್ರಾಮವಾಸ್ತವ್ಯ ಮಾಡೋಕೆ ಆಗಲ್ಲ ಅಂದರೆ ಸುಮ್ಮನಿರು ಇನ್ನೊಬ್ಬರನ್ನು ಟೀಕಿಸಬೇಡ. ನಿನ್ನ ಸ್ವಕ್ಷೇತ್ರದಲ್ಲಿಯೇ ಶಾಸಕನಾಗೋ ಯೋಗ್ಯತೆ ಇಲ್ಲ ಇನ್ನೊಬ್ಬರ ಬಗ್ಗೆ ಮಾತನಾಡುತ್ತೀಯ

  1. ಸುನಿಲ್ says:

   100 ℅ ಸತ್ಯವಾದ ಮಾತು

 5. ನಮ್ಮ ಕುಮಾರಣ್ಣನ ಗ್ರಾಮ ವಾಸ್ತವ್ಯ ಫಲ ನಿಮ್ಮ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಗ್ರಾಮ ವಾಸ್ತವ್ಯದ ಕರ್ಮ.

 6. Kumarswamy t says:

  Riri paramesh madalu nim m l a ge eli nim a keshstrada jangle oleydana madalu

 7. Rangaswamy says:

  ಗ್ರಾಮ ವಾಸ್ತವ್ಯ ಮಾಡಿದ್ದರಿಂದ ಎಷ್ಟು ಅಭಿವೃದ್ಧಿಯಾಗಿದೆ ಎನ್ನುವುದಕ್ಕಿಂತ ಸರ್ಕಾರವೇ ಬಡವರ ಮನೆಗೆ ಬಂದಿದೆ ನಮ್ಮ ಕಷ್ಟದಲ್ಲಿ ಮುಖ್ಯಮಂತ್ರಿಗಳು ಬಾಗಿಯಾಗುತ್ತಾರೆ ಎನ್ನುವ ಆತ್ಮವಿಶ್ವಾಸ ಬಡವರಲ್ಲಿ ಮೂಡುತ್ತದೆ.ಅದು ABDUL KALAM SIR ರವರ ಕನಸು .ಅದನ್ನು ಅನುಷ್ಟಾನ ಮಾಡಿದ್ದು ಕುಮಾರಸ್ವಾಮಿ .ಅದನ್ನು ಟೀಕಿಸುವ ಪರಮೇಶ್ವರ್ ರವರನ್ನು ಏನೆನ್ನನಬೇಕು

 8. Useless Politicians..
  U R not even have quality to Speak about HDK.. He is like a God for Poor Humans..
  But U Mr. Parameshwar … only suitable to make some Big Scam’s..
  Shame on U Mr. Param

 9. ಚರಣ್ ಗೌಡ says:

  ಮಾನ್ಯ ಮಾಜಿ ಗ್ರುಹ ಮಂತ್ರಿಗಳು ಮಾತಾಡ್ತಾ ಇದರಲ ಅವ್ರಿಗೆ ಮತ್ತು ಅಧಿಕಾರ ದಲ್ಲಿ ಇರೊ ಅವರ ಕಾಂಗ್ರೆಸ್ ಸರ್ಕಾರ ಎನ್ ಸಾಧನೆ ಮಾಡಿದೆ ಅನ್ತ ಎಳಿ ಕುಮಾರ ಸ್ವಾಮಿ ಅವ್ರು ಕೆವಲ ೨೦ ತಿಂಗಳು ಅಧಿಕಾರ ಮಾಡಿ ದೇಶಕ್ಕೆ ಮಾದರಿ ಯಾದರು ಇವರು ಯಾವ್ ಸಾದನೆ ಮಾಡಿದರೆ ಸ್ವಾಮಿ ಒಬ್ಬ ವ್ಯಕ್ತಿ ಬಗ್ಗೆ ಮಾತಾದೊ ಮುಂಚೆ ತಮ್ಮ ಯೊಗ್ಯತೆ ಎನು ಅನ್ತ ತಿಳ್ಕೊಬೆಕು

 10. Krishnareddy says:

  ರಿ ನೀವು ಪರಮೇಶ್ವರ ಅಲ್ಲ ಸ್ವಾರ್ತೇಶ್ವರ ನಿನು ಕುಮಾರಣ್ಣನ ಬಗ್ಗೆ ಮಾತಾಡುವ ನೈತಿಕತೆಯನ್ನು ಕಳೆದುಕೊಂಡಿದ್ದೀರ

 11. Next election ge parameshwar avru dayavittu kshetra palayana maaduvude kshema koratagere inda spadre madidare dodda pavadave nedeyabeku ex (10 years before Agrahara tank tumdage)

Leave a Reply