ದೇಶದ ಮೊದಲ ಗ್ರಾಮ ವಾಸ್ತವ್ಯ ಮಾಡಿದ ಮುಖ್ಯಮಂತ್ರಿ ಎಂದರೆ ಕುಮಾರಸ್ವಾಮಿ ಮತ್ತು ದೇಶದ ಮೊದಲ ಅಧಿಕಾರಿ ಎಂದರೆ ಎಸ್ಪಿ ರವಿ ಡಿ ಚನ್ನಣ್ಣನವರ್….

ದೂರು ಇದ್ದಲ್ಲಿ ದೊರೆ

ದೂರು ಇದ್ದಲ್ಲಿ ದೊರೆ ಇರಬೇಕು ಎಂಬ ಅತ್ಯಂತ ಪರಿಣಾಮಕಾರಿಯಾದ ಯೋಜನೆ ಜಾರಿ ಮಾಡಿದ್ದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು..

ಈ ಕಾರ್ಯಕ್ರಮದಿಂದ ಅವರು ಅತ್ಯಂತ ಜನಪ್ರಿಯರಾಗಿ ಕರ್ನಾಟಕದಲ್ಲಿ ಬೆಳೆಯಲು ಸಹಾಯವಾಯ್ತು ನಂತರ ಇದನ್ನು ದೇಶದಾದ್ಯಂತ ವಿವಿಧ ರಾಜಕಾರಣಿಗಳು ಅನುಸರಿಸಿದರು ಆದರೆ ಯಾರು ಈ ಕಾರ್ಯಕ್ರಮವನ್ನು ಕುಮಾರಸ್ವಾಮಿ ಅವರಂತೆ ಅಷ್ಟೊಂದು ಪರಿಣಾಮಕಾರಿಯಾಗಿ ಮಾಡಲಿಲ್ಲ …..

ದೇಶದ ಮೊದಲ ಅಧಿಕಾರಿಗ್ರಾಮವಾಸ್ತವ್ಯಕ್ಕೆ ಮುನ್ನುಡಿ ಬರೆದ ಮೈಸೂರು ಎಸ್ಪಿ ರವಿ ಡಿ ಚನ್ನಣ್ಣನವರ್

ಮೈಸೂರು, ಅಕ್ಟೋಬರ್ 7 : ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ಕರ್ತವ್ಯದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಎಸ್ಪಿ ರವಿ ಡಿ ಚನ್ನಣ್ಣನವರ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದೆ.
ಸಮುದಾಯದತ್ತ ಪೊಲೀಸ್‌
ಸ್ವತಃ ಎಸ್‌ಪಿ ನಮ್ಮ ಸಮಸ್ಯೆಯನ್ನ ಕೇಳಲು ಬಂದಿದ್ದಾರೆ ಎಂದು ತಿಳಿದ ಗ್ರಾಮದ ಜನರ ಗುಂಪುಗುಂಪಾಗಿ ಆಗಮಿಸಿ, ತಮ್ಮ ಅಳಲು ತೋಡಿಕೊಂಡರು. ರಾತ್ರಿ ಇಡೀ ಗ್ರಾಮದ ಸಮಸ್ಯೆಗಳನ್ನ ಆಲಿಸಿದ ರವಿ.ಡಿ.ಚನ್ನಣ್ಣನವರ್ ಖಾಕಿ ಭಯ ಮುಕ್ತಿಗೆ ಗ್ರಾಮ ವಾಸ್ತವ್ಯ ಸಹಕಾರಿಯಾಗಲಿದೆ ಎಂದು ಹೇಳಿದರು. ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ ‘ಸಮುದಾಯದತ್ತ ಪೊಲೀಸ್‌’ ವ್ಯವಸ್ಥೆಯನ್ನು ರೂಪಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸರು ಗ್ರಾಮ ವಾಸ್ತವ್ಯ ಆರಂಭಿಸಿದ್ದಕ್ಕಾಗಿ ಇಲ್ಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

Leave a Reply