ಬೇರೆ ಭಾಷೆಗಳ ಬೇಡಿಕೆಯತ್ತ ಕನ್ನಡದ ಕರಿಯ – 2

ಕರಿಯ-2′ ಚಿತ್ರ ಇದೇ ತಿಂಗಳಾದ ಅಕ್ಟೋಬರ್ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಗಣಪ ಖ್ಯಾತಿಯ ಸಂತೋಷ್ ಬಾಲರಾಜ್ ಹಾಗು ಮಯೂರಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಒಟ್ಟಿನಲ್ಲಿ ತುಂಬಾ ಬೇಡಿಕೆಯುಳ್ಳ ಕನ್ನಡ ಸಿನಿಮಾವೊಂದು ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿದೆ.

Image result for kariya 2

ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಹಾಡುಗಳು ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರದ ಟ್ರೈಲರ್ ಸಕತ್ ಭರ್ಜರಿಯಾಗಿದ್ದು, ಪರಭಾಷಾ ರಿಮೇಕ್ ಹಕ್ಕನ್ನು ಪಡೆಯಲು ಸಕತ್ ಬೇಡಿಕೆ ಬಂದಿದೆಯಂತೆ.

ಮುಂಬೈ ಸಂಸ್ಥೆಯೊಂದು ಕೇವಲ ಚಿತ್ರದ ಟ್ರೈಲರ್ ನೋಡಿಯೇ ರೀಮೇಕ್ ಮಾಡಲು ಮುಂದಾಗಿದ್ದು, ನಂತರ ನಿರ್ಮಾಪಕರಿಗೆ ಕರೆ ಮಾತನಾಡಿದ ಮುಂಬೈ ನಿರ್ಮಾಣ ಸಂಸ್ಥೆ ಅಗ್ರಿಮೆಂಟ್ ಕೂಡ ಹಾಕಿಕೊಂಡಿದೆಯಂತೆ.

ಮತ್ತೊಂದೆಡೆ ತಮಿಳು ಮತ್ತು ತೆಲುಗಿನಲ್ಲೂ ಕರಿಯ-2 ಚಿತ್ರವನ್ನ ರೀಮೇಕ್ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬಾರಿ ಬೇಡಿಕೆಯುಳ್ಳ ಹೊಸ ಕರಿಯನ ಬರುವಿಕೆಗೆ ಸ್ಯಾಂಡಲ್ ವುಡ್ ಸಜ್ಜಾಗಿದೆ.

Leave a Reply