ಪತ್ರಿಕೆಯಿಂದ ಪಾಲಿಟಿಕ್ಸ್ ಗೆ – ರಾಷ್ಟ್ರೀಯ ಪಕ್ಷಗಳ ಬಕೆಟ್   ಹಿಡಿಯುತ್ತಿದ್ದಾರೆ ಎನ್ನುತ್ತಿದೆ ಪತ್ರಕರ್ತ ಮೂಲಗಳು…!

  ಹೌದು..  ಕನ್ನಡ ಸುದ್ದಿ ಮಾಧ್ಯಮದ ಒಂದಿಷ್ಟು ಪತ್ರಕರ್ತರು ಹೇಗಾದ್ರೂ ಮಾಡಿ ರಾಷ್ಟ್ರೀಯ ಪಕ್ಷಗಳಿಗೆ ಬಕೆಟ್ ಹಿಡಿದು ೨೦೧೮ರ ಚುನಾವಣೆಯಲ್ಲಿ ಯಾವುದಾದ್ರೂ ಒಂದು ಕ್ಷೇತ್ರದ ಟಿಕೆಟ್ ಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ ಮತ್ತೊಂದಿಷ್ಟು ಪತ್ರಕರ್ತರನ್ನು ರಾಷ್ಟ್ರೀಯ ಪಕ್ಷಗಳೇ ಗಾಳ ಹಾಕಲು ಕಾಯುತ್ತಿವೆ. ಆ ಸರತಿಯಲ್ಲಿ ಪಬ್ಲಿಕ್ ಟಿವಿ ರಂಗಣ್ಣ ಹಾಗೂ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಬಿಜೆಪಿ ಗಾಳ ಹಾಕಿದೆ ಅನ್ನೋ ವಿಚಾರ ರಾಜಕೀಯ ಪಡಸಾಲೆಯ ಲೇಟೆಸ್ಟ್ ಸುದ್ದಿ. ಮತ್ತೊಂದು ಕಡೆ ಪಜ ಟಿವಿಯ ರವಿ ಗಾಣಿಗ ಹಾಗೂ ಬಿ-ಟಿವಿಯ ಕುಮಾರ್ ಕಾಂಗ್ರೆಸ್ ಟಿಕೆಟ್ಗೆ ಪ್ರಯತ್ನ ಪಡುತ್ತಿರುವ ಸುದ್ದಿ ಗುಟ್ಟಾಗೇನೂ ಉಳಿದಿಲ್ಲ. 

ಇದೇನಪ್ಪ ಈ ನಾಲ್ವರಿಗೆ ರಾಜಕೀಯ ಆಸೆ ತಕ್ಷಣ ಬಂತು ಅನ್ಕೋಬೇಡಿ. ಈ ನಾಲ್ಕೂ ಜನ ಇಷ್ಟು ದಿನ ಅವರ ಪತ್ರಿಕೆ ಹಾಗೂ ಚಾನಲ್ ಅಲ್ಲಿ ಬಿಜೆಪಿ/ಕಾಂಗ್ರೆಸ್ ಪಕ್ಷಗಳಿಗೆ ಬಕೆಟ್ ಹಿಡಿದಿದ್ದನ್ನು ಗಮನಿಸಿದ ಆಯಾ ಪಕ್ಷದ ನಾಯಕರು ಸುದ್ದಿ ಮಾಧ್ಯಮದ ಪ್ರಮುಖರನ್ನು ಪಕ್ಷಕ್ಕೆ ಕರೆತಂದ್ರೆ ಚುನಾವಣಾ ಸಮಯದಲ್ಲಿ ತಮ್ಮ ಪಕ್ಷದ ಪರ ಸುದ್ದಿ ಬಿತ್ತರಿಸಲು ಅನುಕೂಲವಾಗುತ್ತೆ ಅನ್ನೋದು ಇದರ ಹಿಂದಿನ ಮಾಸ್ಟರ್ ಪ್ಲಾನ್. 
ಅಂದಹಾಗೆ ಇವ್ರೆಲ್ಲಾ ಯಾವ ಕ್ಷೇತ್ರಕ್ಕೆ ಕಣ್ಣಿಟ್ಟಿದ್ದಾರೆ ಅನ್ನೋ ಕುತೂಹಲ ಇದೆ ಅಲ್ವಾ. ರಂಗಣ್ಣ ಅವರನ್ನು ಹಳೆ ಮೈಸೂರು ಭಾಗದ ಯಾವುದಾದರೊಂದು ಕ್ಷೇತ್ರ ಹಾಗೂ  ವಿಶ್ವೇಶ್ವರ ಭಟ್ಟರಿಗೆ ಉತ್ತರ ಕನ್ನಡ ಜಿಲ್ಲೆಯ ಅಥವಾ ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದಲ್ಲಿ ಟಿಕೆಟ್ ಕೊಡಲು ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆ. 
ಪ್ರಜಾ ಟಿವಿಯ ರವಿ ಗಾಣಿಗ ಅವರು ಕಾಂಗ್ರೆಸ್ಸ್ನಿಂದ ಮಂಡ್ಯ ಕ್ಷೇತ್ರಕ್ಕೆ ಕಣ್ಣಿಟ್ಟಿದ್ದಾರೆ ಹಾಗೂ ಬಿಟಿವಿಯ ಕುಮಾರ್ ಅವ್ರು ಇನ್ನೂ ಕ್ಷೇತ್ರ ಸಿಕ್ಕಿಲ್ಲ  ಮಾಡಿಕೊಂಡಿಲ್ಲ ಆದ್ರೆ ಅವಾಗವಾಗ ಕಾಂಗ್ರೆಸ್ ಪರ ಸುದ್ದಿ ಪ್ರಕಟಿಸಿ ಕಾಂಗ್ರೆಸ್ ನಾಯಕರ ಕೃಪಾಕಟಾಕ್ಷಕ್ಕೆ ಭಾಳ ಸರ್ಕಸ್ ಮಾಡ್ತಾ ಇದ್ದಾರೆ. 

ಕನ್ನಡ ನಾಡಿನ ಜನ ನೈಜ ಸುದ್ದಿ ನೋಡೋಕೆ ನ್ಯೂಸ್ ಚಾನಲ್ ಹಾಗೂ ಪತ್ರಿಕೆಯಲ್ಲಿ ಇದಾವೆ ಅಂತಾ ನಂಬಿದ್ದರು ಆದ್ರೆ ಈ ಸುದ್ದಿ ಮಾಧ್ಯಮದ ಪ್ರಮುಖರು ರಾಜಕೀಯ ಪಕ್ಷಗಳೊಂದಿಗೆ ಅಡ್ಜಸ್ಟ್ ಮಾಡಿಕೊಂಡು ಮಾಧ್ಯಮವನ್ನು ಪಕ್ಷದ ಪರ ಪ್ರಚಾರಕ್ಕೆ ಬಳಸಿಕೊಳ್ಳುವ ಅನೈತಿಕ ಬುದ್ದಿಗೆ ಬೇಸತ್ತು ಪತ್ರಿಕೋದ್ಯಮಕ್ಕೆ ಇರುವ ನೈತಿಕತೆಯನ್ನೇ ಪ್ರಶ್ನೆ ಮಾಡುತ್ತಿದ್ದಾರೆ.

Leave a Reply