ಹೊಸ ಟಿವಿ ಶೋ ಗೆ ಮತ್ತೆ ಪುನೀತ್???.

ಪುನೀತ್ ರಾಜ್ಕುಮಾರ್ ಕನ್ನಡ ಚಲನಚಿತ್ರೋದ್ಯಮದ ಅತಿದೊಡ್ಡ ನಕ್ಷತ್ರಗಳಲ್ಲಿ ಒಬ್ಬರು ಮತ್ತು ನಿಮಗೆ ತಿಳಿದಿರುವಂತೆ ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳು ಪವರ್ ಸ್ಟಾರ್ ಎಂದು ಕರೆಯುತ್ತಾರೆ. ಅವರ ಜನಪ್ರಿಯತೆ ಮತ್ತು ಸ್ಟಾರ್ ಪವರ್ ತುಂಬಾ ಹೆಚ್ಚಾಗಿದೆ ಮತ್ತು ಅವರು ಕನ್ನಡ ಚಲನಚಿತ್ರ ಉದ್ಯಮದಲ್ಲಿ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದಾರೆ.

Image result for power star puneeth rajkumar kotyadipathi

ಈ ಹಿಂದೆ ಪವರ್ ಸ್ಟಾರ್ ‘ಕನ್ನಡ ಕೋಟ್ಯಾಧಿಪತಿ’ ಎಂಬ ಗೇಮ್ ಶೋ ಮೂಲಕ ಚೊಚ್ಚಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದರು. ಈ ಶೋ ಎರಡು ವರ್ಷ (ಎರಡು ಸೀಸನ್ ) ನಡೆದಿದ್ದು , ಕರ್ನಾಟಕದ ಜನ ಮನ ತಲುಪಿತ್ತು. ಮತ್ತೆ ನಾಲ್ಕು ವರ್ಷದ ನಂತರ ಈಗ ಪುನೀತ್ ರಾಜ್ ಕುಮಾರ್ ಮತ್ತೆ ಟಿವಿ ಶೋ ನಡೆಸಿಕೊಡುತ್ತಿದ್ದಾರೆ. ಆದ್ರೆ, ಈ ಬಾರಿ ಕನ್ನಡದ ಕೋಟ್ಯಾಧಿಪತಿ ಅಲ್ಲ, ಹೊಸದೊಂದು ಟಾಕ್ ಶೋ.

 

ಹೊಸ ಶೋ ಬಗ್ಗೆ ಪುನೀತ್ ರಾಜಕುಮಾರ್ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದು ಹೀಗೆ ;
“ಇದೊಂದು ಫ್ಯಾಮಿಲಿ ಶೋ ಆಗಿರವುದರಿಂದ ನಮ್ಮ ಬಾಲ್ಯದ ನೆನಪು ನೆನಪಾಗುತ್ತೆ. ಒಂದು ಫ್ಯಾಮಿಲಿ ಅಂದ್ರೆ, ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ತಮ್ಮ, ಮಕ್ಕಳು ಹೀಗೆ ಎಲ್ಲರೂ ಒಟ್ಟಿಗೆ ಇರುವ ಫ್ಯಾಮಿಲಿ ಜೊತೆ ಒಂದು ಸಂವಾದ. ಇದೇ ಈ ಕಾರ್ಯಕ್ರಮ ಪರಿಕಲ್ಪನೆ”

Image result for puneeth rajkumar hosa tv show

ಪುನೀತ್ ನಡೆಸಿಕೊಡಲಿರುವ ಹೊಸ ಶೋ ಪ್ರೋಮೋ ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಟಿವಿ ಪ್ರೇಕ್ಷಕರು ಸಕತ್ ಖುಷಿಯಾಗಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದ್ದು, ಸದ್ಯಕ್ಕೆ ಸಮಯ ಹಾಗೂ ದಿನಾಂಕ ನಿಗದಿಯಾಗಿಲ್ಲ.

 

Leave a Reply