‘ಫಾರ್ಚುನರ್‌’ನಲ್ಲಿ ದಿಗಂತ್ ಹಾಗು ಸೋನು ಗೌಡ..

ಹೊಸ ಚಿತ್ರವಾದ ಫಾರ್ಚುನರ್‌ ಮಂಜುನಾಥ್‌ ರವರ ನಿರ್ದೇಶನದಲ್ಲಿ ಮೂಡಿಬರಲಿದೆ. ಚಿತ್ರದ ಪ್ರಿ ಪ್ರೊಡಕ್ಷನ್‌ ಕೆಲಸ ಮುಗಿಸಿರುವ ನಿರ್ದೇಶಕ ಮಂಜುನಾಥ್‌ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ. ಕೆಲವೇ ದಿನಗಳಲ್ಲಿ ಶೂಟಿಂಗ್‌ ಪ್ರಾರಂಭವಾಗಲಿದೆ. ಚಿತ್ರವನ್ನು ಬೆಂಗಳೂರಿನಲ್ಲಿ ಶೂಟ್‌ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿದೆಯಂತೆ. ಹಾಡುಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸುವ ಆಲೋಚನೆ ಇದೆ ಎಂದಿದೆ ಚಿತ್ರತಂಡ.

Image result for sonu gowda and diganth

 

ಇತ್ತೀಚೆಗಷ್ಟೇ ಹ್ಯಾಪಿ ನ್ಯೂ ಇಯರ್‌ ಚಿತ್ರದಲ್ಲಿ ನಟಿ ಸೋನು ಗೌಡ ನಟಿಸಿದ್ದು, ಈಗ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಮೊದಲ ಬಾರಿಗೆ ದಿಗಂತ್‌ಗೆ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರಯಂತೆ. ದಿಗಂತ್‌ ಅಭಿನಯದ ಚೌಕ ಮತ್ತು ಹ್ಯಾಪಿ ನ್ಯೂ ಇಯರ್‌ನಲ್ಲಿ ನಟಿಸಿದ್ದು, ಈಗ ಫಾರ್ಚುನರ್‌ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಹೊಸ ಚಿತ್ರಕ್ಕೆ ಛಾಯಾಗ್ರಹಕನಾಗಿ ಮಧುಸೂದನ್‌ ಕಾರ್ಯ ನಿರ್ವಹಿಸಲಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಚಿತ್ರವಲ್ಲದೆ, ದಿಗಂತ್‌ ಇನ್ನೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.

Leave a Reply