ದೇಶದ ಶ್ರೀಮಂತ ಪಕ್ಷ ಯಾವುದು ?.

ದೇಶದ ಶ್ರೀಮಂತ ಪಕ್ಷ ಯಾವುದು ಎಂಬ ನಿಮ್ಮಲ್ಲಿ ಕಾಡುವ ಪ್ರಶ್ನೆಗೆ ಈಗ ಅಸೋಷಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಎಆರ್) ಎಂಬ ಸಂಸ್ಥೆ ಉತ್ತರ ಬಹಿರಂಗಪಡಿಸಿದ 2015-16ನೇ ಸಾಲಿನಲ್ಲಿ ಪಕ್ಷಗಳ ಆಸ್ತಿಯ ಅಂಕಿ-ಅಂಶಗಳು ತಿಳಿಸುತ್ತದೆ.

Image result for BJP + congress symbol

ಸದ್ಯದಲ್ಲಿ ಆಡಳಿತಾರೂಢ ಬಿ ಜೆ ಪಿ ಒಟ್ಟು 894 ಕೋಟಿ ಆಸ್ತಿಯನ್ನು ಘೋಷಿಸುವ ಮೂಲಕ ಭಾರತದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಶೇಕಡಾ 44% ವೃದಿಯಾಗಿರುವುದು ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ.

೨ನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್:

Image result for BJP + congress symbol

ಕೇಂದ್ರದಲ್ಲಿ ಅತಿ ಹೆಚ್ಚು ಸಮಯ ಅಧಿಕಾರ ನೆಡಸಿರುವ ಕಾಂಗ್ರೆಸ್ನ ಒಟ್ಟು ಅಸ್ತಿ 759 ಕೋಟಿ.

ಆಗ್ರ ೫ ಪಕ್ಷಗಳ ಅಸ್ತಿ ವಿವರ ಇಂತಿದೆ:

೧) ಬಿ ಜೆ ಪಿ — 894 ಕೋಟಿ
೨) ಕಾಂಗ್ರೆಸ್ — 759 ಕೋಟಿ
೩) ಬಿ ಸ್ ಪಿ — 559 ಕೋಟಿ
೪) ಸಿ ಪಿ ಮ್ — 438 ಕೋಟಿ
೫) ಎ ಐ ಟಿ ಸಿ — 15 ಕೋಟಿ

ಸಾಲದ ಪ್ರಮಾಣ ಎಷ್ಟು?.

ಈ ವಿಷ್ಯಕ್ಕೆ ಬಂದಲ್ಲಿ ೩೩೦ ಕೋಟಿ ಸಾಲದೊಂದಿಗೆ ಕಾಂಗ್ರೆಸ್ ಮೊದಲ ಸ್ಥಾನದಲ್ಲಿ ಇದೆ. ಬಿ ಜೆ ಪಿ ೨೫ ಕೋಟಿ , ಎಐಟಿಸಿ ರೂ. 12.07 ಕೋಟಿ, ಸಿಪಿಐ ರೂ. 8.79 ಕೋಟಿ, ಸಿಪಿಐಎಂ ರೂ. 20.285 ಕೋಟಿ, ಬಿಎಸ್‍ಪಿ ರೂ. 1.63 ಕೋಟಿಯೊಂದಿಗೆ ನಂತರದ ಸ್ಥಾನದಲ್ಲಿ ಇದೆ.

ಪ್ರಮುಖ ಪಕ್ಷಗಳ ಆಸ್ತಿ ಹೋಲಿಕೆ :

Image result for BJP + congress symbol

2004-05ರ ಅವಧಿಯಲ್ಲಿ ಬಿಜೆಪಿ ರೂ. 123.93 ಕೋಟಿ ಆಸ್ತಿ ಹೊಂದಿತ್ತು. 11 ವರ್ಷದಲ್ಲಿ ಬಿಜೆಪಿ ಆಸ್ತಿ ಪ್ರಮಾಣ ರೂ. 893.88 ಕೋಟಿಗೆ ಹೆಚ್ಚಾಗಿದೆ. 2004-05ರ ಅವಧಿಯಲ್ಲಿ ಕಾಂಗ್ರೆಸ್ ಆಸ್ತಿ ಪ್ರಮಾಣ ರೂ. 167.35 ಕೋಟಿಯಷ್ಟಿತ್ತು. ಆದರೆ ಈಗ ರೂ. 758.79 ಕೋಟಿ ಏರಿಕೆ ಕಂಡಿದೆ. ಎರಡು ಪಕ್ಷಗಳ ಆದಾಯ ಗಣನೀಯವಾಗಿ ಹೆಚ್ಚಳವಾಗಿದೆ.

 

 

Leave a Reply