ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಗೆ ಸಿಲುಕಿದ ಕಿರುತೆರೆಯ ‘ಪುಟ್ಟ ಗೌರಿ ಮದುವೆ’

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತಿರುವ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಗೊತ್ತೇ ಇದೆ. ಎಂತಹದೇ ಕಷ್ಟದ ಹಾಗು ತುರ್ತು ಪರಿಸ್ಥಿತಿಯಲ್ಲಿ ಇದ್ದರು ಪುಟ್ಟಗೌರಿ ಸಾಯುತ್ತಿಲ್ಲ. ಅಂದರೆ ನಿರ್ದೇಶಕರು ಪುಟ್ಟಗೌರಿಯನ್ನು ಸಾಯಿಸದೆ ವೀಕ್ಷಕರನ್ನು ಸತಾಯಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ದಯವಿಟ್ಟು ಪುಟ್ಟಗೌರಿಗೆ ದಯಾಮರಣ ಕೊಡಿಸಿ ಎಂದು ವಿನಂತಿಸಿಕೊಂಡಿದ್ದರು ಟ್ರೋಲಿಗರು.

Image result for puttagowri maduve with snake

ಪುಟ್ಟಗೌರಿಯನ್ನು ಬೆಟ್ಟದಿಂದ ದೂಡಿದರೂ ಸಾಯಲಿಲ್ಲ,ಸ್ವಲ್ಪವೂ ಮೇಕಪ್ ಹಾಳಾಗಲ್ಲ, ಹಾವು, ಹುಲಿ ಸಹ ಏನೂ ಮಾಡಲಿಲ್ಲ, ಈ ಬಗ್ಗೆ ಏನು ಹೇಳುತ್ತೀರ ಎಂದಿರುವುದಕ್ಕೆ ರಾಮ್ ಜಿ ಮಾತನಾಡುತ್ತಾ, ‘ಇದೊಂದು ದೃಶ್ಯ ಮಾಧ್ಯಮ. ನಾಯಕಿಯನ್ನು ಚೆಂದ ತೋರಿಸಬೇಕಾಗುತ್ತದೆ. ಈ ಧಾರಾವಾಹಿಯನ್ನು ಹೊರಗಡೆ ಚಿತ್ರೀಕರಿಸುವುದರಿಂದ ಸೀರೆ ಹಾಳಾಗದಂತೆ ಎಚ್ಚರ ವಹಿಸಿ ಚಿತ್ರೀಕರಿಸಬೇಕಾಗುತ್ತದೆ. ಅದನ್ನು ಸ್ವಚ್ಛಗೊಳಿಸುವುದು ಇದೆಲ್ಲಾ ಆಗದ ಕೆಲಸ. ಹಾಗಾಗಿ ನಾಯಕಿಗೆ ಮೇಕಪ್ ಹಾಳಾಗದಂತೆ ತೋರಿಸಬೇಕಾಗುತ್ತದೆ’ ಎಂದಿದ್ದಾರೆ.

Image result for puttagowri maduve in jungle

ರಾಮ್ ಜಿ ಯವರಿಗೆ ತಮ್ಮ ಧಾರಾವಾಹಿಯನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ಅವರಿಗೇನು ಬೇಸರ ಇಲ್ಲವಂತೆ. ಪುಟ್ಟಗೌರಿಯನ್ನು ಟ್ರೋಲ್ ಮಾಡುತ್ತಿರುವುದು ಇದೇ ಮೊದಲಲ್ಲ, ಇದು ನಾಲ್ಕನೇ ಸಲ ಈ ರೀತಿ ಮಾಡುತ್ತಿರುವುದು. ಈ ಧಾರಾವಾಹಿಯನ್ನು ತಾನು ಮನರಂಜನೆ ದೃಷ್ಟಿಯಿಂದ ಮಾಡುತ್ತಿದ್ದೇನೆ ಹೊರತು ಕೆಲವು ಬುದ್ಧಿಜೀವಿಗಳಿಗಾಗಿ ಅಲ್ಲ ಎಂದಿದ್ದಾರೆ.

ಈ ಧಾರಾವಾಹಿ ಬಗ್ಗೆ ನೆಗಟೀವ್ ಕಾಮೆಂಟ್ ಮಾಡುತ್ತಿರುವವರಲ್ಲಿ ಕೆಲ ವರ್ಗದ ಜನ ಹಾಗೂ ಮುಖ್ಯವಾಗಿ ಯುವಕರು ಇದ್ದಾರೆ, ಇವರೇ ಟ್ರೋಲ್ ಪೇಜ್‍ಗಳನ್ನು ಸೃಷ್ಟಿಸುತ್ತಿರುವವರು. ಆದರೆ ರೆಗ್ಯುಲರ್ ವೀಕ್ಷಕರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾಕೆಂದರೆ ಅವರಿಗೆ ಅಲ್ಲಿನ ಭಾವನೆಗಳು ಅರ್ಥವಾಗುತ್ತಿವೆ. ಒಂದು ವೇಳೆ ಅವರಿಗೆ ಇಷ್ಟವಾಗದೆ ಇದ್ದರೆ ಈ ಧಾರಾವಾಹಿ 5 ವರ್ಷಗಳ ಕಾಲ ಮುಂದುವರೆಯುತ್ತಿರಲಿಲ್ಲ ಎಂದಿದ್ದಾರೆ ರಾಮ್ ಜಿ.

Leave a Reply