ಬಿಜೆಪಿ, ಕೈ ಮುಖಂಡರ ಚಿತ್ತ ತೆನೆಯತ್ತ. ರಾಜಕೀಯದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸುತ್ತಾರಾ ದೇವೇಗೌಡರು.

   ಬೆಂಗಳೂರು: ಶಾಸಕರಾಗಬಲ್ಲ ಸಾಮರ್ಥ್ಯವಿರುವ ಅನೇಕ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಇನ್ನೊಂದು ತಿಂಗಳಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಶುಕ್ರವಾರ ತಿಳಿಸಿದ್ದಾರೆ.

ನರಸೀಪುರದಲ್ಲಿ ಹಲವು ಆಕಾಂಕ್ಷಿಗಳ ಪಟ್ಟಿ ಸಿದ್ಧಮಾಡಿದ್ದೇನೆ. ಎಲ್ಲರೂ ಕಾರ್ಯಕರ್ತರೊಂದಿಗೆ ಬೆರೆತು ಪಕ್ಷ ಸಂಘಟನೆಯಲ್ಲಿ ತೊಡಗಿ ಎಂದು ದೇವೇಗೌಡ ಸಲಹೆ ನೀಡಿದರು.
ಜೆ.ಪಿ. ಭವನದಲ್ಲಿ ಶುಕ್ರವಾರ ಟಿ. ನರಸೀಪುರದ ದಲಿತ ಮುಖಂಡ ಹಾಗೂ ಮೈಸೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್. ಶಂಕರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಶಂಕರ್ ಅವರನ್ನು ಸೇರಿಸಿಕೊಂಡ ತಕ್ಷಣವೇ ಅವರ ಬೆಂಬಲಿಗರು ಟಿ. ನರಸೀಪುರದಲ್ಲಿ ಟಿಕೆಟ್ ನೀಡುವಂತೆ ಒತ್ತಾಯ ಮಾಡಲು ಆರಂಭಿಸಿದರು. ಕೆಲವರು ತಾವೇ ಜೆಡಿಎಸ್ ಅಭ್ಯರ್ಥಿ ಎನ್ನುತ್ತಿದ್ದು, ಶಂಕರ್ ಅವರ ಹೆಸರನ್ನು ಘೋಷಿಸುವಂತೆ ಮನವಿ ಮಾಡಿದರು.
ರಾಜ್ಯದ ವಿವಿಧೆಡೆ ಕಾಂಗ್ರೆಸ್, ಬಿಜೆಪಿಯ ಅನೇಕ ಮುಖಂಡರು ಸೇರ್ಪಡೆಯಾಗಲಿದ್ದಾರೆ. ನೀವೂ ನಾಯಕರನ್ನು ಸೆಳೆಯುವ ಕೆಲಸ ಮಾಡಿ. ಟಿಕೆಟ್ ಯಾರಿಗೆ ನೀಡಬೇಕೆಂದು ಪಕ್ಷ ನಿರ್ಧರಿಸುತ್ತದೆ ಎಂದು ದೇವೇಗೌಡ ಹೇಳಿದರು.
ಎಸ್. ಶಂಕರ್ ಮಾತನಾಡಿ, ಯಾವುದೇ ಅಧಿಕಾರ ಬಯಸದೆ ಕಾಂಗ್ರೆಸ್​ಗೆ ಎಲ್ಲರೂ ದುಡಿದಿದ್ದೆವು. ಸಮಾವೇಶವನ್ನೂ ಮಾಡಿದ್ದೆವು. ಆದರೆ ದಲಿತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲ ಎಂದು ಹೇಳಿದರು. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

One thought on “ಬಿಜೆಪಿ, ಕೈ ಮುಖಂಡರ ಚಿತ್ತ ತೆನೆಯತ್ತ. ರಾಜಕೀಯದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸುತ್ತಾರಾ ದೇವೇಗೌಡರು.

  1. Jai jds. kumarswami abhimani

Leave a Reply