ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಸುಳ್ಳು ಸುದ್ದಿ ಬಿತ್ತರಿಸಿದ್ದ ಬಿಟಿವಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇನೆ : ರವಿ ಡಿ. ಚೆನ್ನಣ್ಣನವರ್‌

 

ಮೈಸೂರು :  ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್‌ ಪೊಲೀಸ್ ಹುದ್ದೆಯನ್ನು ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಬಿಟಿವಿ ವರದಿ ಮಾಡಿದ್ದು, ಅನುಮತಿ ಹಾಗೂ ಮಾಹಿತಿ ಇಲ್ಲದೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಬಿಟಿವಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರವಿ ಚೆನ್ನಣ್ಣನವರ್‌ ಹೇಳಿದ್ದಾರೆ.

ಸುದ್ದಿಯಿಂದ ನನಗೆ ಅತೀವ ನೋವಾಗಿದೆ. ನನ್ನ ಅನುಮತಿ ಪಡೆಯದೇ, ಯಾವುದೇ ಮಾಹಿತಿ ಇಲ್ಲದೆ ಸುದ್ದಿ ಪ್ರಸಾರ ಮಾಡಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯ ಮಾಲೀಕ ಹಾಗೂ ಸ್ಥಳೀಯ ವರದಿಗಾರನ ಮೇಲೆ ಕ್ರಿಮಿನಲ್ ದೂರು ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ನಾನು ನನ್ನ ವೃತ್ತಿ ಜೀವನದ ಕೊನೆಯವರೆಗೂ  ಪೊಲೀಸ್ ಅಧಿಕಾರಿಯಾಗಿಯೇ ಇರುತ್ತೇನೆ. ರಾಜಕೀಯಕ್ಕೆ ಬರುವ ಆಸಕ್ತಿ ನನಗಿಲ್ಲ. ಮೈಸೂರಿನಲ್ಲಿ ಸಂತೋಷದಿಂದ ಕೆಲಸ ಮಾಡುತ್ತಿದ್ದೇನೆ. ತಪ್ಪು ಮಾಹಿತಿ ಬಿತ್ತರಿಸಿದ್ದಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆ ಎಂದಿದ್ದಾರೆ.

5 thoughts on “ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಸುಳ್ಳು ಸುದ್ದಿ ಬಿತ್ತರಿಸಿದ್ದ ಬಿಟಿವಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇನೆ : ರವಿ ಡಿ. ಚೆನ್ನಣ್ಣನವರ್‌

  1. Thirthe gowda Bengalor says:

    Super sir

  2. Mahalingappa k g says:

    Ur a youth icon and real roll madol

  3. Pl. do not leave Police Dept. Your type of officers are very required there.

  4. Encounter madi btv news head na

Leave a Reply