ಗೆಲ್ಲಲು ಹಾರ್ದಿಕ್ ಪಟೇಲ್ರನ್ನು ಜೈಲಿಗೆ ಅಟ್ಟಳು ಷಡ್ಯಂತ್ರ ಮಾಡಿತೇ ಬಿಜೆಪಿ??

ಅಹಮದಾಬಾದ್: ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಮತ್ತು ಇನ್ನೂ ಇಬ್ಬರು ನಾಯಕರ ವಿರುದ್ಧ ಇಲ್ಲಿನ ವಿಸನಗರ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.

ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ 2015ರ ಜುಲೈನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಆಗ ಬಿಜೆಪಿ ಶಾಸಕ ಋಶಿಕೇಶ್ ಪಟೇಲ್ ಅವರ ಕಚೇರಿ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಕಚೇರಿಯನ್ನು ಧ್ವಂಸ ಮಾಡಿದ್ದರು. ಈ ಸಂಬಂಧ ಹಾರ್ದಿಕ್ ಪಟೇಲ್, ಲಾಲ್‌ಜಿತ್ ಪಟೇಲ್ ಮತ್ತು ಅತುಲ್ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕಳೆದ ಮೂರು ವಿಚಾರಣೆಗೆ ಹಾರ್ದಿಕ್ ಗೈರಾಗಿದ್ದರು. ಜತೆಗೆ ಬುಧವಾರದ ವಿಚಾರಣೆಗೆ ಉಳಿದ ಇಬ್ಬರು ನಾಯಕರೂ ಗೈರಾಗಿದ್ದರು. ಹೀಗಾಗಿ ನ್ಯಾಯಾಲಯ ಮೂವರ ವಿರುದ್ಧ ವಾರಂಟ್ ಹೊರಡಿಸಿದೆ.

‘ಕೇವಲ ಒಂದು ದಿನ ವಿಚಾರಣೆಗೆ ಗೈರಾಗಿದ್ದಕ್ಕೆ ವಾರಂಟ್ ಹೊರಡಿಸಲಾಗಿದೆ. ಬಿಜೆಪಿ ವಿರುದ್ಧದ ನಮ್ಮ ಹೋರಾಟವನ್ನು ಮತ್ತಷ್ಟು ಹೆಚ್ಚಿಸುತ್ತೇವೆ’ ಎಂದು ಲಾಲ್‌ಜಿತ್ ಪಟೇಲ್ ಹೇಳಿದ್ದಾರೆ.

Leave a Reply