ಮೊಟ್ಟೆಗಾಗಿ ಸಿಡಿದೆದ್ದ ಕನ್ನಡ ‘ಬಿಗ್ ಬಾಸ್ ಸೀಸನ್ 5’ ಸದಸ್ಯರು…

ಪ್ರಾರಂಭಿಕ ವಾರದಲ್ಲಿ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರು ಪ್ರೀತಿಯಿಂದ ಮಾತನಾಡುತ್ತ, ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು, ಭಿನ್ನಾಭಿಪ್ರಾಯಗಳಿದ್ದರೂ ಅದು ದೊಡ್ಡ ಮಟ್ಟಕ್ಕೆ ಹೋಗಿರಲಿಲ್ಲ.ಆದರೆ ಈ ವಾರ ಮಾತ್ರ ಬಿಗ್‌ಬಾಸ್‌ ಮನೆ ಶಾಂತತೆಯನ್ನು ಕಳೆದುಕೊಂಡಿದೆ.

ಹೇಳುವುದಾದರೆ ಬಿಗ್‌ ಮನೆಯ ಸ್ಪರ್ಧಿಗಳು ಪರಸ್ಪರ ಜಗಳವಾಡುತ್ತಿದ್ದು, ಸೆಲೆಬ್ರಿಟಿ ಹಾಗೂ ಸಾಮಾನ್ಯ ಸ್ಪರ್ಧಿಗಳ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಬುಧವಾರದ ಎಪಿಸೋಡ್‌ನಲ್ಲಂತೂ ಮೊಟ್ಟೆಗಾಗಿ ಭಾರಿ ಯುದ್ಧವೇ ನಡೆಯಿತು ಎನ್ನಬಹುದಾಗಿದೆ.

chandru11

ಈ ವಾರದ ಲಕ್ಷುರಿ ಬಜೆಟ್‌ ಟಾಸ್ಕ್‌ ‘ಒಂದು ಮೊಟ್ಟೆಯ ಕಥೆ’ ಬುಧವಾರವೂ ಮುಂದುವರೆಯಿತು. ಈ ಟಾಸ್ಕ್ನಲ್ಲಿ ಸದಸ್ಯರನ್ನು ಎರಡು ತಂಡಗಳನ್ನಾಗಿ ವಿಂಗಡಿಸಲಾಯಿತು, ಅದೇ ದಯಾಳ್ ಹಾಗು ಶ್ರುತಿ ಪ್ರಕಾಶ್ ತಂಡಗಳು. ಟಾಸ್ಕ್‌ ನಿಯಮದಂತೆ ಮೊಟ್ಟೆಗಳನ್ನು ಕಾಪಾಡಿಕೊಳ್ಳುವ ವೇಳೆ ಉಭಯ ತಂಡಗಳ ನಡುವೆ ದೊಡ್ಡ ಜಗಳವೇ ನಡೆಯಿತು. ದಿವಾಕರ್ ಮತ್ತು ಸಿಹಿ ಕಹಿ ಚಂದ್ರು ನಡುವೆ ಮಾತಿಗೆ ಮಾತು ಬೆಳೆದು ಮನೆಯಲ್ಲಿ ಅಶಾಂತಿಯ ವಾತಾವರಣ ಮೂಡಿದ್ದಂತೂ ಸುಳ್ಳಲ್ಲ.

ಅಷ್ಟೇ ಅಲ್ಲದೆ ಕೋಪದಿಂದ ಕಂಗೆಟ್ಟಿದ್ದ ಚಂದ್ರು, ದಿವಾಕರ್‌ ಮೇಲೆ ಕೈಯೆತ್ತಲು ಹೋಗಿದ್ದರು. ಇದೇ ವೇಳೆ ತಾಳ್ಮೆ ಕಳೆದುಕೊಂಡ ಜೆಕೆ, ದಿವಾಕರ್‌ ಮೇಲೆ ರೇಗಾಡಿದರು. ಬಳಿಕ ಮನೆಯ ಸದಸ್ಯರ ಮಧ್ಯ ಪ್ರವೇಶದಿಂದ ಎಲ್ಲವೂ ತಿಳಿಯಾಯಿತು.

Leave a Reply