ಕೇಂದ್ರ ಬಿಜೆಪಿ ಟಾರ್ಗೆಟ್ HDK

ಅತಿ ಶೀಘ್ರದಲ್ಲೇ ಚುನಾವಣೆಗೆ ಇರುವ ಬಿಜೆಪಿ ತೆಕ್ಕೆಯಲ್ಲಿ ಇಲ್ಲದಿರುವ ದೊಡ್ಡ ರಾಜ್ಯ ಅಂದ್ರೆ ಕರ್ನಾಟಕ. ಕರ್ನಾಟಕ ರಾಜ್ಯವನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರ, ಕಾಂಗ್ರೆಸ್ ವೋಟ್ ಬ್ಯಾಂಕ್ ವೊಡೆಯಲು ಸಾಧ್ಯವಾಗದೇ ತನ್ನ ದೃಷ್ಟಿ ಮಾನ್ಯ ಹೆಚ್ ಡಿ ಕೆ ಮೇಲೆ ನೆಟ್ಟಿದೆ. ಅದು ವಿನಾಕಾರಣ ಹೆಚ್ ಡಿ ಕೆ ಹೆಸರನ್ನು ಹಾಳುಮಾಡುವ ಮೂಲಕ

ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸರ್ಕಾರ ಬಂದರೆ, ಎಲ್ಲರ ಖಾತೆಗೂ 15 ಲಕ್ಷ ದುಡ್ಡು ಸಿಗುತ್ತೆ, ಪೆಟ್ರೋಲ್ ಬೆಲೆ 20 ರೂಪಾಯಿಗೆ ಇಳಿಯುತ್ತೆ, ಎಲ್ಲಾ ಕಡೆ ಬುಲ್ಲೆಟ್ ಟ್ರೈನ್ ಬರುತ್ತೆ – ಹೀಗೆ ಸುಳ್ಳುಗಳ ಸರಮಾಲೆಯನ್ನೇ ಜನರ ಮುಂದಿಟ್ಟು ಮೋಸ ಮಾಡಿದರು. ಈಗ ಈ ಕುತಂತ್ರಿಗಳ ಗಮನ ಕರ್ನಾಟಕದ ಮೇಲೆ ಬಿದ್ದಿದೆ. ಕನ್ನಡಿಗರನ್ನು ಆರಾಮವಾಗಿ ಮರಳು ಮಾಡಬಹುದು ಎಂದುಕೊಂಡೆ ತಮ್ಮ ಮುಂದಿನ ಹೆಜ್ಜೆ ಇಡುತ್ತಿದ್ದಾರೆ. ಇವರ ಮುಂದಿನ ಟಾರ್ಗೆಟ್ – ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರು ಹಾಳು ಮಾಡುವುದು!

ಕರ್ನಾಟಕದಲ್ಲಿ , ಅದರಲ್ಲೂ ಯುವಕರಲ್ಲಿ ಒಂದು ಹೊಸ ಸಂಚಲನವನ್ನೇ ಮೂಡಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಂಡು ಹೆದರಿದೆ , ಹೇಗಾದರೂ ಮಾಡಿ ಇವರ ಹೆಸರಿಗೆ ಮಸಿ ಬಳಿದು ಕನ್ನಡಿಗರನ್ನು ಮೂರ್ಖರನ್ನಾಗಿ ಮಾಡಬಹುದು ಎಂದು ಹೊಸ ಸ್ಕೆಚ್ ಹಾಕಿದೆ ಬಿಜೆಪಿ. ಇದರ ಭಾಗವಾಗಿಯೇ ಹೆಚ್.ಡಿ.ಕೆ ಹೆಸರನ್ನು ಸುಮ್ಮನೆ ಹಲವು ಪ್ರಕರಣಗಳಲ್ಲಿ ಸೇರಿಸುವುದು, ನಂತರ ಎಲ್ಲಾ ಮಧ್ಯಮಗಳಲ್ಲೂ ಕೂಡ ಹೆಚ್.ಡಿ.ಕೆ ನಾಮಹರಣ ಮಾಡುವುದು ಅವರ ಪ್ಲಾನ್!

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಯಾವುದಾದರೂ ಒಂದು ಕೇಸು ಓಪನ್ ಮಾಡಿಸಿ, ಸುಮ್ಮನೆ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರಿಸುವುದು. ಇದನ್ನೇ ಎಲ್ಲಾ ಮಾಧ್ಯಮಗಳಲ್ಲಿ ಹೆಚ್.ಡಿ.ಕೆ ಆರೋಪಿ ಎಂದು ಬಿಂಬಿಸುವುದು. ಇತ್ತ ಕಡೆ ಏನೂ ತಿಳಿಯದ ಹೆಚ್.ಡಿ.ಕುಮಾರಸ್ವಾಮಿ ಅವರು ಎಷ್ಟೇ ಜನರ ಸೇವೆ ಮಾಡಿದರೂ, ಅವರ ಹೆಸರು ಹಾಳು ಮಾಡುವುದು. ಇದೇ ಬಿಜೆಪಿ ಯ ಕುತಂತ್ರ!.

Leave a Reply