ಮೋದಿಜಿ, ಈ ಒಂದು ಕಾರಣಕ್ಕಾಗಿ ನನ್ನ ಹಾಗೂ  ಬಿಜೆಪಿಯ ಸಂಬಂಧ ಮುರಿದುಬಿತ್ತು! – ಇಂತಿ ನಿಮ್ಮ ಅಭಿಮಾನಿ.

ನಾನು ನಿಮ್ಮ ಅಪ್ಪಟ ಅಭಿಮಾನಿ! ಬಿಜೆಪಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಬಹಳ ಸಂತಸದ ವಿಚಾರವೆಂದರೆ ನೀವು ಹಿಂದೆಂದಿಗಿಂತಲೂ ಹೆಚ್ಚು ಲವಲವಿಕೆಯಿಂದಿರುವುದು. ಗುಜರಾತಿನಲ್ಲಿ ೨೦ ವರ್ಷ ಆಡಳಿತ ನಡೆಸಿದರೂ ಅಲ್ಲಿಯ ಚುನಾವಣೆ ಗೆಲ್ಲಲು ವಾರಕ್ಕೆ ಮೂರು ಬಾರಿ ಪ್ರಚಾರಕ್ಕೆ ಹೋಗುತ್ತಿರುವ ನಿಮ್ಮ ಆ ಎನರ್ಜಿ ಬಹಳ ಪ್ರಶಂಸನೀಯ ಮೋದಿಜಿ!

ನಿಮ್ಮದು ದಕ್ಷ ಆಡಳಿತ ಎಂದು ವಾದಿಸಿದ್ದೇನೆ ಗೆಳೆಯರ ಹತ್ತಿರ. ಭ್ರಷ್ಟಾಚಾರಿಗಳಿಗೆ ಖಂಡಿತವಾಗಿಯೂ ಶಿಕ್ಷೆ ಕೊಡಿಸುವವರು ಮೋದಿಜಿ ಮಾತ್ರ ಎಂದು
ಬಲವಾಗಿ ನಂಬಿಕೆ ಇಟ್ಟು ಜಗಳವನ್ನೂ ಆಡಿದ್ದೇನೆ.. ನೀವು ವಯಕ್ತಿಕವಾಗಿ ಭ್ರಷ್ಟರು ಅಲ್ಲ.. ಆದರೆ, ಇಂದು ನಿಮ್ಮ ಆಡಳಿತದಲ್ಲಿ ಆಗುತ್ತಿರುವುದೇನು ಪ್ರಿಯ ಮೋದಿಜಿ ?!

ಭ್ರಷ್ಟಾಚಾರಿಗಳಿಗೆ ಬೆಂಬಲ ಕೊಟ್ಟರೆ ಅದು ತಪ್ಪಲ್ಲವೇ..? ಮನಮೋಹನ್ ಸಿಂಗ್ ಕೂಡ ವಯಕ್ತಿಕವಾಗಿ ಭ್ರಷ್ಟಾಚಾರ ಮಾಡಿಲ್ಲ ಆದ್ರೆ ಭ್ರಷ್ಟಾಚಾರಿಗಳ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಅವರ ಹಾಗೂ ಪಕ್ಷದ ಕಥೆ ಏನಾಗಿದೆ ಇಂದು..
ನಾನು ಜಾತಿಯಾಧಾರಿತವಾಗಿ ಆರ್ಎಸ್ಎಸ್ ಮೂಲಕ ನಿಮ್ಮನ್ನು ಬೆಂಬಲಿಸಿದೆನೋ ಅಥವಾ ದೇಶದ ಭ್ರಷ್ಟ ರಾಜಕೀಯ ವ್ಯವಸ್ಥೆ ನೋಡಿ ನೀವು ಭ್ರಷ್ಟಾಚಾರದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಕೊಟ್ಟ ಭರವಣೆಗಳನ್ನು ನೋಡಿ ಬೆಂಬಲಿಸಿದೆನೋ.. ಒಟ್ಟಾರೆಯಾಗಿ ಬಿಜೆಪಿ/ಆರ್ಎಸ್ಎಸ್ ಎಂದರೆ ನನಗೆ ‘ನಮ್ಮದು’ ಎನ್ನುವ ಅಭಿಮಾನ, ಹೆಮ್ಮೆ, ಕೆಲವೊಮ್ಮೆ ದರ್ಪವೂ ಕೂಡ ಇತ್ತು! ಆದರೆ.. ನಿಮ್ಮ ಹತ್ತಿರ ಮನದಿಂಗಿತವನ್ನು ಹೇಳಲೇಬೇಕೆಂದೆನಿಸುತ್ತಿದೆ. ಅದಕ್ಕಾಗಿ ಈ ಪತ್ರ.

1. ಭ್ರಷ್ಟಾಚಾರದ ಆರೋಪದಲ್ಲಿ ಜೈಲು ವಾಸ ಅನುಭವಿಸಿದ ಯಡ್ಡಿಯೂರಪ್ಪ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದಿರಿ! ಹಾಗಾದರೆ, ನೀವು ಪದೇ ಪದೇ ನಮ್ಮೆದುರಲ್ಲಿಯೇ ಹೇಳುತ್ತಿದ್ದ ಪ್ರಾಮಾಣಿಕ ಆಡಳಿತದ ಸಿದ್ಧಾಂತವಿದೆಯೇ? ಒಬ್ಬ ಭ್ರಷ್ಟಾಚಾರದ ಆರೋಪದಲ್ಲಿ ಮೂವತ್ತು ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ ನೀವು ಭ್ರಷ್ಟಾಚಾರದ ವಿರುದ್ದ ನಿಲುವಿಗೆ ಈ ಥರ ಎಳ್ಳು ನೀರು ಬಿಟ್ಟಿರಾ ಮೋದಿಜಿ.?!

2. ಅದು ಹೋಗಲಿ.. ರಾಜ್ಯದ ಭೂಮಿ ಬಗೆದು, ಗಡಿ ನಕಾಶೆಯನ್ನೇ ಬದಲಿಸಿ, ಗುಡ್ಡ ಗುಡ್ಡಗಳನ್ನೇ ಬರಿದು ಮಾಡಿ, ಜೈಲು ವಾಸ ತಪ್ಪಿಸಿಕೊಳ್ಳಲು ನ್ಯಾಯಾಧೀಶರಿಗೆ ಲಂಚ ಕೊಡಲು ಹೋಗಿ ಸಿಕ್ಕಿಬಿದ್ದು ಮೂರು ವರ್ಷ ಸೆರೆವಾಸ ಅನುಭವಿಸಿದ ಜನಾ ರೆಡ್ಡಿ ಅವರ ಕೇಸ್ ಅನ್ನು ಈಗ ಸಿಬಿಐ ಸಾಕ್ಷಿಯಿಲ್ಲವೆಂದು ಮುಚ್ಚಿಹಾಕಲು ಹೊರಟಿದೆ. ಕರ್ನಾಟಕ ಚುನಾವಣೆ ಗೆಲ್ಲಲು ರೆಡ್ಡಿ ಸಹೋದರದ ಹಣಬಲ ಬೇಕು ಎಂದು ನೀವು ಭ್ರಷ್ಟಾಚಾರದ ವಿಚಾರದಲ್ಲಿ ನಿಮ್ಮ ನಿಲುವನ್ನು ಬದಲಿಸಿಕೊಂಡಿರಾ ಮೋದಿಜಿ.?!

3.ಅಕಸ್ಮಾತ್, ಬಿಜೆಪಿ ಸರಕಾರವೇ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಬಹುಷಃ ಅಂದು ಬಿಜೆಪಿ ಐದು ವರ್ಷ ರಾಜ್ಯದಲ್ಲಿ ಮಾಡಿದ ಭ್ರಷ್ಟಾಚಾರ ಅನಾಚಾರವನ್ನೇ ಕರ್ನಾಟಕದಲ್ಲಿ ಮತ್ತೆ ಮತ್ತೆ ಮುಂದುವರೆಸಲು ನಿಮ್ಮ ಅಭ್ಯಂತರವಿಲ್ಲ ಎಂದಾಯಿತು! ಭ್ರಷ್ಟಾಚಾರ ರಹಿತ ಆಡಳಿತ ಕನಸು ಕಂಡ ಕರುನಾಡಿನ ಜನರ ಬದುಕು ಏನಾದೀತು ?

ಇವತ್ತು, ನಿಜಕ್ಕೂ ನನ್ನ ನಂಬಿಕೆ ಮುರಿದು ಹೋಗಿದೆ. . ಯಾಕೆಂದರೆ ನಾನೂ ಕೂಡ ದಕ್ಷ ಹಾಗೂ ಪ್ರಾಮಾಣಿಕ ಕಾರ್ಯಕರ್ತ!

4. ತುಂಬಿದ ಪ್ರಚಾರ ಸಭೆಗಳಲ್ಲಿ ನೀವು ಪರ ಪಕ್ಷಗಳ ನಾಯಕರ ಮೇಲೆ ಆರೋಪವನ್ನು ನೀವು ಹೊರಿಸುತ್ತಿದ್ದಿರಿ. ಪ್ರಶ್ನೆಗಳನ್ನು ಎಸೆಯುತ್ತಿದ್ದಿರಿ. ಆಗೆಲ್ಲ, ಹೆಮ್ಮೆ ಅನ್ನಿಸುತ್ತಿತ್ತು ನನಗೆ.. ಮೋದಿಜಿಗೆ ಅಧಿಕಾರ ಸಿಕ್ಕರೆ ಅವರನ್ನೆಲ್ಲ ಜೈಲಿಗೆ ಕಳಿಸುತ್ತಾರೆ ಅನ್ನೋ ಭಾವನೆಯಿತ್ತು. ಆದರೆ, ನಿಮಗೆ ಅಧಿಕಾರ ಸಿಕ್ಕಿ ನಾಲ್ಕು ವರ್ಷ ಆದ್ರೂ ಭ್ರಷ್ಟಾಚಾರಿಗಳಿಗೆ ಶಿಕ್ಷೆ ಆಗಲೇ ಇಲ್ಲ..
5. ಬೇರೆ ಪಕ್ಷದ ಭ್ರಷ್ಟಾಚಾರಿ ನಾಯಕರು ತುಂಬಿದ ಸೂಟ್ ಕೇಸ್ ನೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆದ ನಂತರ ಕೂಡಲೇ ಅವರ ವಿರುದ್ಧ ಕೇಸ್ ಪ್ರಗತಿಯೇ ನಿಧಾನ ಮಾಡಿಸಿದ್ರಿ. ನಿಮ್ಮಲ್ಲಿ ಅಧಿಕಾರ ಇದ್ದರೂ ಯಾವುದೇ ಭ್ರಷ್ಟಾಚಾರಿಗಳನ್ನು ನೀವು ಬೆನ್ನಟ್ಟಿ ಶಿಕ್ಷೆಗೆ ಗುರಿ ಪಡಿಸಲೇ ಇಲ್ಲ. ಇದನ್ನು ಕಣ್ಣಾರೆ ನೋಡಿಯೂ ನಾನು ಸುಮ್ಮನಿದ್ದೆ. ಯಾಕೆಂದರೆ, ನಾನು ನಿಮ್ಮ ಹತ್ತಿರದ ಅಭಿಮಾನಿಯಾಗಿದ್ದೆ!
6. ನೋಟು ಅಮಾನ್ಯ ಮಾಡಿ ನೀವು ದೊಡ್ಡ ದೊಡ್ಡ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಅವರ ಕಪ್ಪು ಹಣ ವೈಟ್ ಮಾಡಿಕೊಳ್ಳಲು ಒಂದು ಉತ್ತಮ ಅವಕಾಶ ಕೊಟ್ಟಿರಿ ಎಂದು ನಮ್ಮ ಬಿಜೆಪಿಯ ಕೆಲ ನಾಯಕರು ಹೇಳುವಾಗ ಸತ್ಯವಾಗಿದ್ದರೂ ನಾನು ವಿರೋಧಿಸಿದ್ದೆ. ಪಕ್ಷದವರೇ ಹೀಗೆ ಹೇಳಕ್ ಶುರು ಹಚ್ಚಾವ್ರೆ ನಿಂದೇನು ಮತ್ತೆ ಎಂದಾಗಲೂ ನಾನು ನಿಮ್ಮ ಪರ ಇದ್ದೆ. ಯಾಕೆ ಗೊತ್ತಾ? ನಾನು ಆರ್ಎಸ್ಎಸ್ ಹಾಗೂ ನಿಮ್ಮ ಅಭಿಮಾನಿಯಾಗಿದ್ದೆ!
7. ಮೋದಿಜಿ, ನಿಮಗೆ ನೆನಪಿರಬಹುದು. ಯಡ್ಡಿಯೂರಪ್ಪನವರು ಬಿಜೆಪಿ ಪಕ್ಷ ಬಿಡುವ ಮೊದಲು ಸಿಬಿಐನಿಂದ ಬಚಾವ್ ಆಗಲು ಸೋನಿಯಾಗಾಂಧಿಯನ್ನು ಬಹಿರಂಗವಾಗಿ ಹೊಗಳಿ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರನ್ನು ಕೊಟ್ಟಿದ್ದರು. ಅದು ಆರ್ಎಸ್ಎಸ್ ಹಾಗೂ ಬಿಜೆಪಿಗೆ ಮಾಡಿದ ಬಹುದೊಡ್ಡ ಅವಮಾನ ಎಂದು ಗೊತ್ತಿದ್ದರೂ ಮತ್ತೆ ನಿಮ್ಮ ಮುಖ ನೋಡಿ ಶಿವಮೊಗ್ಗದಲ್ಲಿ ಅವರಿಗೆ ವೋಟು ಹಾಕಿದ್ದೆ. ಯಾಕೆಂದರೆ, ನಾನು ನಿಮಗೆ ಅಧಿಕಾರ ಸಿಕ್ಕರೆ ಸಾಕು ಆಮೇಲೆ ಅವರನ್ನೆಲ್ಲ ದೂರ ಇಡುತ್ತೀರಿ ಅಂದುಕೊಂಡಿದ್ದೆ.
8. ಪಾಕಿಗಳು ನಮ್ಮ ಸೈನಿಕರನ್ನು ಗಡಿಯಲ್ಲಿ ಮೋಸದಿಂದ ಸಾಯಿಸುವಾಗ ನೀವು ನವಾಜ್ ಷರೀಫ್ ಮೊಮ್ಮಗಳ ಮದುವೆ ಊಟ ಮಾಡಿಕೊಂಡು ಬಂದಾಗ ಅದೆಷ್ಟೇ ಕೆರಳಿದರೂ ಸಹ ಸುಮ್ಮನೇ ಇದ್ದೆ. ಮತ್ತೆ ನಿಮ್ಮ ಪರ ಮಾತಾಡಿದ್ದೆ. ಯಾಕೆಂದರೆ ನಾನು ಬಿಜೆಪಿ ಹಾಗೂ ನಿಮ್ಮನ್ನು ಕುರುಡನಂತೆ ನಂಬಿದ್ದೆ.
9. ನಾವು ಬಿಜೆಪಿಯವರು ನಮ್ಮದು ದೇಶಪ್ರೇಮಿ ಪಕ್ಷ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರದಲ್ಲಿ ಕೇವಲ ಅಧಿಕಾರಕ್ಕಾಗಿ ಉಗ್ರರನ್ನು ನೇರವಾಗಿ ಬೆಂಬಲಿಸುವ ಪಿಡಿಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಾಗ, ನಮ್ಮ ಪಕ್ಷದ ಡಬಲ್ ಸ್ಟ್ಯಾಂಡರ್ಡ್ ಅನ್ನು ಎಲ್ಲರೂ ಟೀಕೆ ಮಾಡಿದಾಗ ನಾನು ನಿಮ್ಮ ನಿರ್ಧಾರ ಬೆಂಬಲಿಸಿದ್ದೆ.
ರಾಜಕೀಯದಲ್ಲಿ ಇದೆಲ್ಲ ಮಾಮೂಲು ಎಂದೆಲ್ಲ ವಾದಿಸಿ ಸಮರ್ಥಿಸಿಕೊಂಡಿದ್ದೆ. ಯಾಕೆಂದರೆ, ನಿಮ್ಮ ಅಧಮ್ಯ ಅಭಿಮಾನಿಯಾಗಿದ್ದೆ ನಾನು.

10. ಹಿಂದೂ ಧರ್ಮದ ಮೇಲೆ ಅಪ್ಪಟ ಅಭಿಮಾನ ಇರುವ ನಾನು ಗೋವನ್ನು ಸಾಕ್ಷಾತ್ ದೇವರು ಎಂದು ನಂಬಿದ್ದೆ. ಆದ್ರೆ ಯಾವಾಗ ನಮ್ಮ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೋವಾದಲ್ಲಿ ಗೋಹತ್ಯೆ ಸಮರ್ಥನೆ ಮಾಡಿದ್ರೂ ಮತ್ತು ಈಶಾನ್ಯ ರಾಜ್ಯದಲ್ಲಿ ಗೋವನ್ನು ಕಡಿದು ತಿನ್ನಲು ನಮ್ಮ ಅಭ್ಯನಂತರವಿಲ್ಲ ಎಂದು ಬಿಜೆಪಿ ಪಕ್ಷವೇ ಹೇಳಿದ್ರೂ ನೀವು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಾಗ ನನಗೆ ಬಿಜೆಪಿ ಪಕ್ಷದ ನಿಜವಾದ ಹಿಂದೂ ಪರ ನೀತಿಯ ಬಗ್ಗೆಯೇ ಅನುಮಾನ ಉಂಟಾಯ್ತು. ಆದ್ರೂ ನಾನು ನಿಮ್ಮ ಪರ ಇದ್ದೆ. ಯಾಕೆ ಗೊತ್ತಾ? ನಾನು ಆರ್ಎಸ್ಎಸ್ ಕಾರ್ಯಕರ್ತನಾಗಿದ್ದೆ!
11. ಮೋದಿಯವರು ಪಕ್ಷದ ನಾಯಕತ್ವ ವಹಿಸಿಕೊಂಡರೆ ಬಿಜೆಪಿಗೆ ಅವಮಾನ ಮಾಡಿದ ನಾಯಕರನ್ನು ಹೊರಗೆ ಅಟ್ಟುತ್ತಾರೆ ಎಂದುಕೊಂಡಿದ್ದ ನನಗೆ ನಿರಾಶೆ ಮಾಡಿದ್ರಿ.
ಬಿಜೆಪಿಯ ನಾಯಕರು ಸದನದಲ್ಲಿ ನೀಲಿ ಚಿತ್ರ ನೋಡಿ ಕನ್ನಡ ಮಣ್ಣಿಗೆ ಅವಮಾನ ಮಾಡಿದಾಗಲೂ ಮುಚ್ರೋ ಬಾಯಿ ಮೋದಿ ಪ್ರಧಾನಿ ಆದ್ರೆ ಅವರನ್ನೆಲ್ಲ ಹೊರಗೆ ಅಟ್ಟುತ್ತಾರೆ ಅಂತಲೇ ಟೀಕಾಕಾರರಿಗೆ ಧಮಕಿ ಹಾಕಿದ್ದೆ. ಯಾಕೆಂದರೆ ನಾನು ನಿಮ್ಮ ಬಹಳದೊಡ್ಡ ಅಭಿಮಾನಿಯಾಗಿದ್ದೆ.

ಹೀಗೆ ಏನೇನೋ ಆಗಿ ಹೋಯಿತು ಮೋದಿಜಿ! ಆದರೂ ಸುಮ್ಮನಿದ್ದೆ ನಾನು! ಆದರೆ, ಇನ್ನು ಸಹಿಸಲಿಕ್ಕೆ ಸಾಧ್ಯವೇ ಇಲ್ಲ. ಯಾಕೆ ಗೊತ್ತಾ? ನನ್ನ ರಾಜ್ಯದ ಒಡಲು ಲೂಟಿ ಮಾಡಿ, ಗಣಿ ಮಣ್ಣಿನ ಆಸೆಗೆ ದೇವಾಲಯವನ್ನು ಕೆಡವಿ, ರೆಸಾರ್ಟ್ ರಾಜಕೀಯ ಪ್ರಾರಂಭ ಮಾಡಿ, ರಾಜ್ಯದ ರಾಜಕೀಯ ವಾತಾವರಣವನ್ನೇ ಕಲುಷಿತ ಮಾಡಿದ ಬಳ್ಳಾರಿಯ ರೆಡ್ಡಿ ಸಹೋದರರ ಕೇಸ್ ಅನ್ನು ಸಿಬಿಐ ಸಾಕ್ಷಿ ಎಂದು ಸಬೂಬು ಹೇಳಿ ಮುಚ್ಚಿ ಹಾಕಲು ಹೊರಟಿದೆ. ರೆಡ್ಡಿ ಸಹೋದರರು ೨೦೧೮ ಚುನಾವಣೆ ಖರ್ಚು ನೋಡಿಕೊಳ್ಳುತ್ತೇವೆ ಅಂದು ಹೇಳಿದ್ದಕ್ಕೆ ಅವರ ಕೇಸ್ ಮುಚ್ಚಿ ಹಾಕಿ ಹೇಗಾದ್ರೂ ಮಾಡಿ ಕರ್ನಾಟಕದ ಚುನಾವಣೆ ಗೆಲ್ಲಲು ಹೊರಟಿರುವ ನಿಮ್ಮ ನಡೆ ನನಗೆ ಅಘಾತ ಉಂಟುಮಾಡಿದೆ.
ಸತ್ಯ ಹೇಳುತ್ತೇನೆ! ಬಿಜೆಪಿಗೆಗೆ ತೀರಾ ಎನ್ನುವಷ್ಟು ಕೆಲಸ ಮಾಡಿದ್ದೇನೆ. ಮೋದಿಜಿ ಅಂದ್ರೆ ದೇವರೆನ್ನುವಷ್ಟು ಅಭಿಮಾನವಿರಿಸಿಕೊಂಡಿದ್ದವನು ನಾನು. ಆದರೆ, ಇವತ್ತು ನನ್ನ ಹಾಗೂ ಬಿಜೆಪಿಯನ ಅದೆಷ್ಟೋ ವರ್ಷಗಳ ಸಂಬಂಧ ಮುರಿದು ಬಿದ್ದಿದೆ.
ಯಾಕೆ ಗೊತ್ತಾ? ನಾನು ನನ್ನ ರಾಜ್ಯ ಭ್ರಷ್ಟಾಚಾರದ ಕೂಪವಾಗಲು, ಸದನದ ಘನತೆ ಹಾಳು ಮಾಡಿದ ನಾಯಕರಿಗೆ ವೋಟು ಹಾಕಲು, ರಾಜ್ಯದ ಓಡಲು ಲೂಟಿ ಮಾಡಿದ, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿರುವ ಪಕ್ಷದ ಕಾರ್ಯಕರ್ತನಾಗಿರಲು ಒಬ್ಬ ಸ್ವಾಭಿಮಾನಿಯಾದ ದಕ್ಷ ಹಿಂದೂವಾಗಿ ಸಹಿಸಲು ಸಾಧ್ಯವೇ ಇಲ್ಲ!
ಹಾಗಂತ ನಿಮ್ಮ ಪಕ್ಷಕ್ಕೆ ರಾಜ್ಯದಲ್ಲಿ ಬೆಂಬಲ ಕೊಡಲ್ಲ ಅಂದ ತಕ್ಷಣ ಪಕ್ಷಕ್ಕೆ ಓಡಿ ಹೋಗಿ ಆಸರೆ ಕೇಳಿಕೊಂಡು ಹೋಗುವ ಬಯಕೆಯೂ ಇಲ್ಲ. ಬೇರೆ ಪಕ್ಷದವರು ಪ್ರಾಮಾಣಿಕ ಆಡಳಿತ ಕೊಡುತ್ತಾರೆಂದು ಮನವರಿಕೆಯಾದರೆ ಹೋಗುತ್ತೇನೆ. ಇಲ್ಲದಿದ್ದರೆ ನಾನು ನನ್ನ ಕೆಲಸ ನೋಡಿಕೊಂಡು ಸುಮ್ಮನಿರುತ್ತೇನೆ. ಆದರೆ.. ರಾಜ್ಯ ಬಿಜೆಪಿಗೆ ಇನ್ನೆಂದೂ ಬೆಂಬಲಿಸುವುದಿಲ್ಲ.

ಕೆ. ವೃಷಾಂಕ್ ಜೋಯ್ಸ್, ಶಿವಮೊಗ್ಗ

27 thoughts on “ಮೋದಿಜಿ, ಈ ಒಂದು ಕಾರಣಕ್ಕಾಗಿ ನನ್ನ ಹಾಗೂ  ಬಿಜೆಪಿಯ ಸಂಬಂಧ ಮುರಿದುಬಿತ್ತು! – ಇಂತಿ ನಿಮ್ಮ ಅಭಿಮಾನಿ.

 1. gajendra h s says:

  Super👌👌👌👌👌👌👌

  1. Yake thanna Gujarat a oba mantrige ivatthe 3 vars had jailagide khanija raft maduva bagge

 2. Finally bhaktas are understanding the reality how modi and bjp fooling people of Karnataka and india. I am happy that i am not trusting this Modi from the day of demonitisation itself. But still there are some fools who believes modi will bring acche din.

 3. ರಾಬರ್ಟ್ ವಾದ್ರಾ ರನ್ನ ಜೈಲಿಗೆ ಕಲಿಸುಯ್ತ್ತೇನೆ ಎಂದ ಮೋಡಿಜಿ ಯಾಕೆ ಕಲಿಸಲಿಲ್ಲ
  ಎಂಬ ಕಾರಣಕ್ಕೆ ನಾನು ದ್ವೇಷಿಸುತ್ತೇನೆ

 4. Mallikarjuna Reddy says:

  Super and fenstic speach abt the BJP.
  Really max no especially farmers of India people’s r blaming for the Mr . N Modi
  ( prime minister of India ).

 5. super
  this is reall
  Brother

 6. U got the real picture abt modi….now ur expressed humanity…..

 7. Roop gowda says:

  That’s the reality of BJP &modi ji

 8. After knowing all this if people still support BJP, its not thair falt. Because very people think so deeply before voting. About BJP, Modiji, RG, SG, Siddaramaaya, ect.

 9. Good Points, just to add few more –

  1. Clean Ganga project
  2. Bringing back black money
  3. Smart cities
  4. Ensuring all those who were part of corruption in previous Government are sent to jail..

  Many more..

  All are still remaining as promises.

 10. Naanu obba Bjp karyakratha modi abhimani yagidde but evaththina paristhithi nodi thumba bejaragide mundina election ge Bjp ge support madodilla

 11. Avrella onde matharam bidi
  Jail kalsalla yellig nu kalsalla.
  Nam desha hegithu hage eruthe nayi bala donku antaralla hage

 12. Yeshwanth Kumar S. says:

  Very very good Information.

 13. Desha anno vishayakke bandre bharata antini ,rajyad vishayakke bandre Karnataka antini,ade jilleya vishayakke bandre dharwad antini,ade oorina vishayakke bandre hubballi nammooru.
  Dodd dodd nadigalan jodista idare pradhani naav keliddu ondu chikk nadi jodane ,adakke pratipala poolicer laati hetu
  Avatte teerman maadidivi kumarswami cm anta

 14. I am not belongs to any party…….

  Nimage common sense iddare first k j George bagge mathadi….. yakendre Ganapathi case na samadhi madidaralla adu vishaya adara bagge charche agali…..

  1. 4varsha inda ide madtidira… nim thappu torsidre, avru thappu madilva ivru thappu madilla anta… bjp nu congress enu difference illa anta heltidira aste…

 15. Dinesh Sriram Bangalore says:

  Then tell us to whoom you are supporting in feature……?
  Who is the best and un currept leader in India ..?
  According to you who can can lead India .other than Modhi…?.
  Give answer from your heart..!

 16. Nodari nimaga yallrigu na ondda parastene kelatan nimma maniyaga ni yajamana agokinta munchhe nimma maniyalli yaro obbr yajamana eratara avaga nimma annano tammno mattyaro tappa madiratara avga ni yajamana ada mela avarnna yalla jayalige kalasathio yene maniyaga etgondda buddi helathio

 17. Santhosh bappu says:

  ವೃಶಾಂಕ್ ಜೋಯ್ಸ್ ಅವರೆ ನಿಮ್ಮ ಮನದಾಳದ ಮಾತು ಅದ್ಬುತವಾಗಿದೆ ಆದರೆ ಕೆಲವು ವಿಚಾರಗಳನ್ನು ನೀವು ಗಮನಿಸಿಲ್ಲಾ ಅಂತ ಕಾಣಿಸುತ್ತಿದೆ. ಮೊನ್ನೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ ಭ್ರಷ್ಟಾಚಾರದ ವಿಚಾರದಲ್ಲಿ ಕೇಸ್ ಇದ್ದರೆ ಅವರು ಚುನಾವಣೆಗೆ ನಿಲ್ಲುವಂತಿಲ್ಲಾ… ಈ ರೀತಿಯ ಆದೇಶ ಇದ್ದಕ್ಕಿದ್ದಂತೆ ಯಾಕೆ ಬಂತು ಅಂತ ಯೋಚನೆ ಮಾಡಿದ್ದಿರಾ… ಈ ಆದೇಶ ಬರುವ ಹಿಂದೆಯೇ ಅನಂತ ಕುಮಾರ್ ಹೆಗಡೆ c.m ಅಭ್ಯರ್ಥಿ ಆಗಬಹುದು ಎಂಬ ಸಂದೇಶ ನಿಮಗೆ ತಲುಪ್ಪಿಲ್ಲವೇ… ಹೀಗೆ ಮೇಲೆ ನೀವು ಕೇಳಿರುವ ಪ್ರೆಶ್ನೆಗಳಿಗೆ ಸ್ವಲ್ಪ ಸಮಾಧಾನದಿಂದ ಕುಳಿತು ಆಲೋಚಿಸಿ ಅದಕ್ಕೆಲ್ಲಾ ಚಾಣಕ್ಯತನದ ಉತ್ತರ ಸಿಗುತ್ತೆ ಹಾಗೂ ಅವರು ಕುಳಿತ್ತಿರುವುದು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ನೀವು ಹೇಳಿದಹಾಗೆ ಏಕಾ ಏಕಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಆಗುವುದು ಇಲ್ಲಾ ಹಾಗಂತ ಅವರು ಸುಮ್ಮನೆನು ಕುಳಿತ್ತಿಲ್ಲಾ ಇವತ್ತು ನಮ್ಮ ಭಾರತ ಜಾಗತಿಕ ಮಟ್ಟದಲ್ಲಿ ಮುಂದುವರಿಯುತ್ತ ಇದ್ದೆವೆ ಅಂದ್ರೆ ಅದಕ್ಕೆ ಯಾರು ಕಾರಣ, ಹಾಗೆ ಮೋದಿಯವರ ಆಡಳಿತ ಬಂದಮೇಲೆ ಯಾವುದಾದರೂ ಭ್ರಷ್ಟಾಚಾರದ ಕೇಸ್ ಆಗಿದೆಯಾ..? ಇಲ್ಲಾ ಕೆಲವೊಂದನ್ನ ಆಳವಾಗಿ ಯೋಚಿಸಬೇಕು.

Leave a Reply