​ಕಿಚ್ಚನ ಬೆನ್ನಿಗೆ ನಿಂತ ಕುಮಾರಣ್ಣ??

ಕಳೆದ ವಾರ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಖಾಸಗಿ ಚಾನಲ್ ಒಂದರಲ್ಲಿ ನೀಡಿದ ಸಂದರ್ಶನದಲ್ಲಿ ದೇಶದ ಇಂದಿನ ಪರಿಸ್ಥಿತಿ, ಬೆಲೆ ಏರಿಕೆ, 

ರಾಷ್ಟೀಯ ರಾಜಕೀಯ ಪಕ್ಷಗಳ ಸುಳ್ಳು ಭರವಸೆಗಳ ಬಗ್ಗೆ ಧ್ವನಿ ಎತ್ತಿ ಸುದ್ದಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು,  ಇದನ್ನು ಅರಗಿಸಿಕೊಳ್ಳಲು ಆಗದ ಬಿಜೆಪಿ ಕಾರ್ಯಕರ್ತರು ಮನಸೋ ಇಚ್ಛೆ ಕಿಚ್ಚನ ಅವಹೇಳನ ಮಾಡಿ ತಮ್ಮ ಬಾಲಿಶತನವನ್ನು ಪ್ರದರ್ಶನಕ್ಕೆ ಇಟ್ಟರು.

ಮೂಲಗಳ ಪ್ರಕಾರ ಕಿಚ್ಚನ ಮಾತುಗಳನ್ನು ವಿಶ್ರಾಂತಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ಬಂದಿದ್ದು, ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿದು ಬಂದಿದೆ. ಕಿಚ್ಚನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ಅವರು ಇಂದು ದೇಶದಲ್ಲಿರುವ ಸತ್ಯವನ್ನೇ ಹೇಳಿದ್ದಾರೆ. ಸತ್ಯವನ್ನು ಹೇಳಿದ ಮಾತ್ರಕ್ಕೆ ಯಾರು ಯಾರನ್ನು ಟೀಕಿಸೋ ಹಕ್ಕಿಲ್ಲ, ಭಾರತ ಒಂದು ಪ್ರಜಾಪ್ರಭುತ್ವ ತತ್ವಗಳನ್ನು ಪಾಲಿಸೋ ದೇಶ, ಇಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ ಮಾತ್ರಕ್ಕೆ ಒಬ್ಬರ ಮೇಲೆ ವಯಕ್ತಿಕ ದಾಳಿ ನೆಡೆಸೋದು ಸರಿ ಇಲ್ಲ ಎಂದು ಕೆಲ ಆಪ್ತರ ಬಳಿ ಕುಮಾರಣ್ಣ ಮಾತನಾಡಿರೋದು ಸುದ್ದಿ ಸಮಾಚಾರಕ್ಕೆ ತಿಳಿದು ಬಂದಿದೆ. 
ಇಷ್ಟಕ್ಕೂ ಕಿಚ್ಚ ಸುದೀಪ್ ಆ ವಿಡಿಯೋ ಲಿ ಹೇಳಿರೋದಾದ್ರೂ ಏನು?

“ಜನ ಬದಲಾವಣೆ ಬಯಸಿ ಮತ ಹಾಕುದ್ರು, ಆದ್ರೆ ಏನು ಬದಲಾವಣೆ ಆಗಿಲ್ಲ.  ಒಂದೊಂದು ರಾಜ್ಯದಲ್ಲಿ ಒಂದೊಂದು ರಸ್ತೆ ತೆರಿಗೆ, ಪೆಟ್ರೋಲ್ ಡೀಸೆಲ್ ಬೆಲೆ ಇದೆ, ಇದು ಹೀಗೆ ಮುಂದುವರಿದರೆ ಕಷ್ಟ ಆಗತ್ತೆ. ನನ್ನ ದೇಶ, ನನ್ನ ರಾಜ್ಯ ಅತೀ ಸುಂದರವಾಗಿದೆ, ನನಗೆ ಆ ಬಗ್ಗೆ ತುಂಬಾ ಪ್ರೀತಿ ಇದೆ.  ಇಲ್ಲಿ ಒಬ್ಬ ಸಾಮಾನ್ಯ ಮನುಷ್ಯನನ್ನು ತೆರಿಗೆ ಹೆಸರಲ್ಲಿ ಸುಲಿಗೆ ಮಾಡಲಾಗುತ್ತಿದೆ, ಹೊರಗಡೆ ಊಟ ಮಾಡೋದಕ್ಕೂ ಯೋಚಿಸೋ ಪರಿಸ್ಥಿತಿಯಿದೆ. ಎಲ್ಲೋ ಒಂದು ಕಡೆ ಸರ್ಕಾರ ಜನರನ್ನು ಪ್ರೀತಿಸುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ.  ಜನ ಪ್ರತಿ ಬಾರಿ ಒಂದು ಭರವಸೆ ಇತ್ತು ಮತ ಹಾಕುವರು, ಆದರೆ ಯಾವ ವ್ಯವಸ್ಥೆಯು ಬದಲಾಗಿಲ್ಲ! ಇತ್ತೀಚೆಗೆ ಭಯ ಬೇರೆ ಮೂಡಿಸುತ್ತಿದ್ದಾರೆ, ಸರಕಾರದ ವಿರುದ್ಧ ಮಾತಡುದ್ರೆ  ಐಟಿ ರೇಡ್ ಮಾಡಿಸೋದು. 
ನೂರು ರೂಪಾಯಿ ದುಡಿದರೆ, ಅದರಲ್ಲಿ ೪೦ ರೂಪಾಯಿ ತೆರಿಗೆ ಹೋಗತ್ತೆ. ಉಳಿದ ಅರವತ್ತು ರೂಪಾಯಿ ಆದರೂ ಸಂಪೂರ್ಣ ನಿಮ್ಮದಾಗತ್ತೆ ಎಂದರೆ ಅದರಲ್ಲೂ ಕೂಡ ಮತ್ತೆ ಒಂದು ಊಟ ತಿಂಡಿ, ಗೃಹಉಪಯೋಗಿ ವಸ್ತು ಏನೇ ಕೊಂಡರು ಮತ್ತೆ ತೆರಿಗೆ ಕಟ್ಟಬೇಕು, ಕೊನೆಗೆ  ನೂರು ರೂಪಾಯಿ ದುಡಿದರೆ ನಮಗೆ ಅಂತ ಉಳಿಯೋದು ಕೇವಲ ಇಪ್ಪತ್ತು ರೂಪಾಯಿ! ಯಾರಾದ್ರೂ ಒಬ್ಬರು ಇದನ್ನು ಪ್ರಶ್ನೆ ಮಾಡಲೇ ಬೇಕಲ್ಲ? ”

ಇದಕ್ಕೆ ಕೆಂಡಾಮಂಡಲವಾದ ಬಿಜೆಪಿ ಕಾರ್ಯಕರ್ತರು, ಕಿಚ್ಚನ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸಲಾಗದೆ ಎಂದಿನಂತೆ ತಮ್ಮ ಕೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಅವರನ್ನು ಕೀಳು ಭಾಷೆ ಪ್ರಯೋಗಿಸಿ ತೆಗೆಳಿ ಕಾಮೆಂಟ್ ಮಾಡಿರುವರು.  ಏನೇ ಆದರೂ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರೋ ಒಬ್ಬ ವ್ಯಕ್ತಿ ಯಾರು ಧ್ವನಿ ಎತ್ತಲು ಮುಂದೆ ಬಾರದಾಗ ಮುಂದೆ ಬಂಡ ಕಿಚ್ಚನಿಗೂ ಹಾಗು ಅವರ ಬೆನ್ನಿಗೆ ನಿಂತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯದ ಜನ ಮೆಚ್ಚಿ ಬಹುಪರಾಕ್ ಹೇಳಿದ್ದಾರೆ. ಇದು ಮುಂದೆ ಕಿಚ್ಚನ ರಾಜಕೀಯ ಹಾದಿಯ ಮುನ್ಸೂಚನೆಯೇ ಎಂದು ಕಾದು ನೋಡಬೇಕು. ಎಲ್ಲದಕ್ಕೂ ಒಂದೇ ಉತ್ತರ “ಕಾಲಾಯ ತಸ್ಮೈ ನಮಃ”.

34 thoughts on “​ಕಿಚ್ಚನ ಬೆನ್ನಿಗೆ ನಿಂತ ಕುಮಾರಣ್ಣ??

 1. Manjunatha.K.R says:

  Sudeep sir we are with you.

  1. ಸುದೀಪ್ ಅವರು ಸದ್ಯ ಇರುವ ಪರಿಸ್ಥಿತಿ ಬಗ್ಗೆ ಹೇಳಿಕೆ ನೀಡಿದ್ದಾರೆ .ಬದಲಾವಣೆ ಬರಬಹುದು ಕಾಯೋಣ
   ಆದರೆ ಸುದೀಪ್ ಅವರು ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಅವರ ಅಭಿಪ್ರಾಯ ತಿಳಿಸಿದ್ದಾರೆ ಆಗಂತ ನೀನೊಬ್ಬ ನಟ ಆಗೆ ಈಗೆ ಅನ್ನೊದು ಎಷ್ಟು ಸರಿ ? ಸಾಮಾನ್ಯ ಪ್ರಜೆ ಇರಲಿ.ರಾಜಕಾರಣಿ ಇರಲಿ ಆಟಗಾರರೆ ಇರಲಿ ಸಿನಿಮಾ ನಟರೆ ಇರಲಿ ಅದು ಯಾರೆ ಆಗಿರಲಿ ನಮ್ಮ ದೇಶದ
   ಪ್ರಜೆ “ಅಲ್ಲವೇ……. ನಮ್ಮ ದೇಶದಲ್ಲಿ ಜನಾಭಿಪ್ರಾಯ ದಿಂದ ಎಷ್ಟೋ ಬಾರಿ ಸುಧಾರಣೆ ಗಳು ನಡಿದವೆ ಇಂತಹ ಪ್ರತಿಕ್ರಿಯೆ ಇಂದ ಅಭಿವೃದ್ಧಿ ಚುರುಕಾಗಬಹುದು ಆದರೆ
   ಒಬ್ಬೊಬ್ಬ ಪ್ರಜೆಯು ಮುಖ್ಯ ಕಳೆದುಕೊಳ್ಳಬೇಡಿ
   ಜೈ ಒಂದೇ ಮಾತರಂ

   1. R,Srinivas says:

    Howdhu ri namma modhi have maduthare age ege hantha and humidity some sariyagi sedu thirisidhare

  2. Plz sudeep sir thumba chennagi arthamafikondidira plz e election ge raitharigoskara HDK na support madi karnataka goskara

 2. ಇದ್ದುದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತ್ತೆ.

 3. bevarsigalu neevu adhu avara kelasa alla…. avaru eegina samanya janara paristhithi bagge heliddhare ashte avarige iro kaalaji namma bagge….enjalu nann makkalu neevu….nimm manegalalli, snehitharalli, hogi keli …..thingalige 10000 sampadhane maadourna keli adhara novu gotthagutthe…

 4. Ravishankar says:

  Both sudeep expressions and HDK sir depending sudeep is good intentions…..

 5. Sanjay Baraki says:

  “ಜನರ ಅಭಿಪ್ರಾಯ ಆಲಿಸುವುದು ಸರ್ಕಾರದ ಕರ್ತವ್ಯ, ತಪ್ಪು ಅಂತ ಕಂಡ್ರೆ, ಕಂಡಿಸುವುದು ಪ್ರತಿ ಒಬ್ಬ ಪ್ರಜೆಯ ಅಧಿಕಾರ..”…ಯಾರಾದರೇನು…

 6. Bjp le yaru yar baggenu mothadodilva jana samanyara jothe baduke gothaguthe basanna modudre saladu

 7. To reply your comments, use only parliamentary language. Don’t use unparlimentary language.

 8. Khichanna nivelodu 100 mathu sathyide anna

 9. ಒಬ್ಬ ಸಾಮಾನ್ಯ ಕುಲಿ ನಾಲಿ ಮಾಡ್ಕೊಂಡು ಜಿವನ ಮಾಡೊರು ಹೆಳ್ಬೆಕಾಗಿರೊ ಮಾತು ಸೆಲೆಬ್ರಿಟಿ ಆದಂತವ್ರು ಹೆಳ್ತಿದಾರೆ ಅಂದ್ರೆ ಜನಸಾಮಾನ್ಯರ ಮೆಲೆ.ಇರೊ ಕಾಳಜಿ ನಿಮಗೆ ಯಾಕಿಲ್ಲ

 10. Vasanth kichcha says:

  Right think sir
  Ur fans always with you

 11. ಇದ್ದದನ್ನ ಹೇಳಿದ್ರೆ ಹಾಗೆ ನಮ್ಮ ಜನ… ಕಿಚ್ಚಣ್ಣ ಇಸ್ ಅಲ್ವೇಸ್ ರೈಟ್… ಮೋದಿ-ಮೋದಿ ಅಂತ ಹೋಗ್ತಿರೋ ಜನಕ್ಕೆ… ಜನ ಸಾಮಾನ್ಯರ ಬಗ್ಗೆ ಏನು ಗೊತ್ತು??

 12. Right thinking Boss your fans always with you

 13. Jagadish natikar says:

  ಸರಿಯಾಗಿ ಹೇಳಿದಿರಿ ಅಣ್ಣ

 14. Nim kitogiro modi GE yeli black money tartini anda 3yrs aitu inu bandila Adana kelro bjp bucket Nan makala election munche yen Yelidano bhai or bheno 150days nali black money tartini Nana gelisi anda gube NIvu Adana Nambi vote Akadri avanu Ninge Tika koto oda nimgela Yavaga budi baroto Gotila. Nija yelidre Tika ooriyote oorkoli takatu idre Ans Maddi bjp bucket

 15. Manjunatha says:

  I hate political parties and politicians
  We want our home family man kumaranna

 16. Ramakrishna says:

  Irodanna id hage helidre tika uryutte modi ji bagge olledagi matadoru black 150 days alli horgade barutte ante modi helidru adre adyavdu prayojna agilla kastakke 1 month quee nalli nintiddu sakaytu ega gst ge bandre ella jastine agide kadime agilla yake tinno annad mele kudiyo coffee tea mele gst hakidare andre badavaru hege uta madtare yake badavaru hotelnalli uta madbarda coffee kudibarda footpath alle tinbeka india desha uddara agbeku antare modi eduction madi munde barbeku anno education loan 12% hakidare papa badavaru heg tagotare…medicine 12% hakidare halcohal drinks ge 8% hakidare yake yelru kudidu halagali antana medicine ge gst kadime madidre esto bada janara prana uliyutte sahaya agutte…sudeep avru matadirodralli tappe illa bada janarige kasta enadru sahaya agbeku anta matadidare aste …sudeep sir navu nim jote yavaglu irtivi

 17. Hige helok munche 1nd second think madi friends ivattina Jan jeevan yen agtide anta KICCHA ANNA helirodu nija ide avr Jan samanyar paravagi heltidare hortu tamma swantakkalvala yaro 1bru namm bagge olle think madi sari madak hontre avarigi support madod bittu ee Tara madod tappu friends ivattina varegu Jana samanyar bagge mattu avr para yaru nintilla iga kiccha anna nintidare nimg adre support madi illa Andre sumne irri kkkk

 18. Shashidhar Gowda R says:

  ಸರ್ ನೀವು ಹೇಳಿರುವುದು ನೂರಕ್ಕೆ ನೂರು ಸರಿ ಇದೆ, ಬಡ್ಡಿ ಮಕ್ಳು ಕೆಲವರು ಕುರುಡಾಬಿಮಾನಿಗಳು ಸುಮ್ಮನೆ ಅವರಿಗೆ ಕುರುಡಿದೆ ಅನ್ನುವುದನ್ನು ಮತ್ತೆ ಮತ್ತೆ ತೋರಿಸಿಕೊಳ್ಳುತ್ತಾರೆ, ಅದೇ ದೊಡ್ಡವರು ಹೇಳ್ತಾರಲ್ಲ ಇರೋದನ್ನ ಹೇಳಿದ್ರೆ ಎದ್ದು ಬಂದು ಎದೆಗೆ ಒದೀತಾರೆ ಅಂತ, ಅಂತಹ ಜನ ನಮ್ಮವರು ಎಷ್ಟೇ ಬದಲಾದರೂ ಎಂಡ & ತುಂಡು ಮುಂದೆ ಕಂಡರೆ ಅವರು ಎಲ್ಲಿಗೆ ಹೋದರಲ್ಲಿಗೆ ಇವರು ಹೋಗ್ತಿರ್ತಾರೆ, ಇನ್ನು ಕೆಲವರು ಆ ಸಮಯಕ್ಕೆ ದುಡ್ಡು ಸಿಗುತ್ತೆ ಅಂತ ಮತ ನೀಡುವವರಿದ್ದಾರೆ ಅದರಲ್ಲಿ ಕೆಲವು ಬಡ ಜನರಿದ್ದಾರೆ ಅವರಿಗೆ ಒಂದು ದಿನ ಆದ್ರು ಒಳ್ಳೆಯ ಊಟ ತಿಂತೀವಲ್ಲ ಅನ್ನೋ ಹಂಬಲ, ಇದನ್ನೇ ಬಂಡವಾಳ ಮಾಡಿಕೊಂಡು ನಮ್ಮ ರಾಜಕಾರಣಿ ಪುಡಾರಿಗಳು ಏನೂ ಸಿಗದಂತೆ ಮಾಡಿ ಅವರ ಮೇಲೆ ದಬ್ಬಾಳಿಕೆ ಮಾಡ್ತಿರ್ತಾರೆ, ಚುನಾವಣೆ ಬಂದಾಗ ಸ್ವಲ್ಪ ದುಡ್ಡು ಕೊಟ್ಟು ನಾವಿರ್ತೀವಿ ಅಂತ ಮತ ಹಾಕಿಸ್ಕೋತಾರೆ,…

 19. First as film actor you guys pay tax correctly and the most black money is within your business film industry of course gst will hurt people who where cheating gov by not paying tax and keeping black money . Sudeepa is another example for crying to pay tax.

 20. Karthik gowda says:

  ಸೂಪರ್ ಅಣ್ಣ ಯಾರು ಏನೇ ಎಳಲಿ ನೀವು ಹೇಳಿರುವ ಮಾತುಗಳು ನೂರಕ್ಕೆ ನೂರು ಸತ್ಯ .
  ಬೋಗಳೋ ನಾಯಿಗಳು ಬೋಗಳಲಿ.
  ನಾಯಿ ಬೋಗಳಿದರೆ ದೇವಲೋಕ ಹಾಳಾಗುತ್ತ.

  :- ವಂದೇ ಮಾತರಂ

 21. I am not your fan but your way is correct

  1. Srinivasa t r says:

   Super kiccha bro

 22. Adda sa adi says:

  ಹೋಗ್ಲಿ ಭಕ್ತರೇ ಸುದೀಪ್ ಸುಳ್ಳು ಹೇಳ್ಬೇಕಿತ್ತಾ
  ಏನೂಂತ ಸುಳ್ಳು ಹೇಳ್ಬೇಕು ವಸಿ ಹೇಳ್ರಪ್ಪೋ

 23. Viswanathaswamy says:

  We support to sudeep Sir and I do think same thing is happening after bjp rule in center and good is very low percentage 7.6% to Congress 10.6% at present circumstances . Modi ji promise to Swiss bank account and vijay Mallya to India these two promise was failed by bjp in centre. These is true fact that modi just travel 59 country and expenses is upto many thousands crores. Petrol rates different in India state is true.

 24. Sudeep is also one of the Indian who paying tax under GST so why can’t he talk about it….
  GST madod adre ella du GST agbeku petrol diesel LPG movie tickets Tobacco licker etc…. Are not under GST, why, why they are not under GST…. This is not the way to put tax this is just under ther necessary not to any indian common people’s necessary….. Both BJP and Congres are just looting people’s

 25. Nanjundaswamy says:

  ಸುದೀಪ್ ಈ ದೇಶದ ಪ್ರಜೆ ಅವರ ಅಭಿಪ್ರಾಯವನ್ನ ನಿಂದಿಸಿ ಕೆಟ್ಟಕೊಳಕಾಗಿ ಮಾತನಾಡುವ ಮಂದಿಗೆ ಯಾವುದರಲ್ಲಿ ಹೊಡೆಯಬೇಕು.

 26. ಬಿಜೆಪಿಯ ವರ ಬಗ್ಗೆ ಹಾಗೂ ಅವರ ಯೋಜನೆಯ ಬಗ್ಗೆ ಮಾತನಾಡಿದರೆ IT ರೆಡ ಮಾಡಬಹುದು ಈಗಾಗಿದೆ ಪರಿಸ್ಥಿತಿ !!!!!!

 27. ವಿಶ್ವ says:

  ಇಲ್ಲಿನ ಪರಿಸ್ತಿತಿ ಏನಂದ್ರೆ,, ನಮ್ಮ, ನಾವು, ಸಾಮಾನ್ಯ ಜನರಿಗೆ ಇದೆಲ್ಲ ತಿಳ್ಕೊಳ್ಳೋ ಸಮಯ ಇಲ್ಲ,, ಅದಲ್ದೇನೆ ಇವೆಲ್ಲವನ್ನೂ ಅವರಿಗೆ ಅರ್ಥಮಾಡ್ಸೋ ಪ್ರಯತ್ನ ನಡಿತಾ ಇಲ್ಲ,,, ಯಾಕಂದ್ರೆ ಸಾಮಾನ್ಯರಲ್ವೇ ನಾವು,,, ಬದ್ಕೋಕೆ ಕಷ್ಟಪಡೋರು ಬಾಯ್ಬಿಡೋದಿದ್ಯ,,?

Leave a Reply