‘ಕಾಮಿಡಿ ಕಿಲಾಡಿ’ ನಯನಗೆ ಖುಲಾಯಿಸಿದ ಅದೃಷ್ಟ..

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಜನತೆಗೆ ಪರಿಚಯವಾದ ಪ್ರತಿಭೆ ನಯನ. ಈಗಾಗಲೇ ಕನ್ನಡದ ದೊಡ್ಡ ನಟನ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿರುವ ನಯನಗೆ ಈಗ ಮತ್ತೊಂದು ಅದೃಷ್ಟದ ಆಫರ್ ಬಂದಿದೆ. ರಾಯಲ್ ಸ್ಟಾರ್ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ‘ಅನಂತು ವರ್ಸಸ್ ನುಸ್ರತ್’ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು, ಈಗಾಗಲೇ ನಯನ ಶೂಟಿಂಗ್ ಗೆ ಹಾಜರಾಗಿದ್ದಾರೆಯಂತೆ. ಇನ್ನು ನಯನ ಜೊತೆ ಕನ್ನಡದ ಖ್ಯಾತ ಖಳನಟ ಕೂಡ ವಿನಯ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Image result for comedy khilaadigalu nayana

ಚಿತ್ರದ ಖಳ ನಾಯಕನಾಗಿ ಖ್ಯಾತ ನಟ ಅಭಿನಯಸಲ್ಲಿದ್ದು, ರಾಜ್ ಕುಮಾರ್ ಅವರ ‘ಅನಂತು ವರ್ಸಸ್ ನುಸ್ರತ್’ ಚಿತ್ರದಲ್ಲಿ ನಯನ ಹಾಸ್ಯ ಕಲಾವಿದೆಯಾಗಿ ಅಭಿನಯಿಸುತ್ತಿದ್ದು, ಶಾಂತಲಕ್ಷ್ಮಿ ಎಂಬ ಲಾಯರ್ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಕನ್ನಡದ ಖ್ಯಾತ ಖಳನಟ ರವಿಶಂಕರ್ ಕೂಡ ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದು, ವಿಭಿನ್ನ ಪಾತ್ರವನ್ನ ನಿರ್ವಹಿಸಲಿದ್ದಾರೆ.

ಈ ಚಿತ್ರ ಮಾತ್ರವಲ್ಲದೇ, ಯಶ್ ಅಭಿನಯದ ‘ಕೆ.ಜಿ.ಎಫ್’ ಚಿತ್ರದಲ್ಲಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ನಿರ್ದೇಶನದ ‘ಜಂತರ್ ಮಂಥರ್’ ಚಿತ್ರದಲ್ಲೂ ನಯನ ಕಮಾಲ್ ಮಾಡಲಿದ್ದಾರೆ.

Leave a Reply