‘ಯೋಗಿ – ಸಾಹಿತ್ಯ’ ಮದುವೆಗೆ ಭರ್ಜರಿ ತಯಾರಿ

ಸ್ಯಾಂಡಲ್‍ವುಡ್ ನ ಯಂಗ್ ಸ್ಟಾರ್ ಲೂಸ್ ಮಾದ ಖ್ಯಾತಿಯ ಯೋಗಿ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲ್ಯದ ಗೆಳತಿ ಸಾಹಿತ್ಯ ಅರಸ್ ಅವರೊಂದಿಗೆ ಇದೇ ನವೆಂಬರ್ 02ರಂದು ಹಸೆಮಣೆ ಏರಲಿದ್ದಾರೆ.

ಯೋಗಿ ಮತ್ತು ಸಾಹಿತ್ಯ ಜೂನ್ 11ರಂದು ಸರಳವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡಿದ್ದರು. ಇದೇ ನವೆಂಬರ್ 02 ರಂದು ನಗರದ ಬನಶಂಕರಿ ಹಂತದಲ್ಲಿರುವ ಶ್ರೀ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಎರಡು ಕುಟುಂಬಗಳು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿವೆ. ಲೂಸ್ ಮಾದ ಅವರ ಮದುವೆ ಕರೆಯೋಲೆಯ ಆಮಂತ್ರಣ ಪತ್ರಿಕೆ ತಯಾರಾಗಿದೆ.

ಗುರುವಾರದಂದು ಬೆಳಗ್ಗಿನ ಜಾವ 5 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. 1 ರಿಂದ 10ನೇ ತರಗತಿ ವರೆಗೆ ಯೋಗೇಶ್ ಮತ್ತು ಸಾಹಿತ್ಯ ಯಡಿಯೂರಿನ ಎಸ್‍ಎಸ್‍ವಿಕೆ ಶಾಲೆಯಲ್ಲಿ ಒಟ್ಟಿಗೆ ಓದಿದ್ದು, ಸ್ನೇಹ ಪ್ರೀತಿಯಾಗಿ, ಪ್ರೇಮಾಂಕುರಿಸಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ. ಸಾಹಿತ್ಯ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

Leave a Reply