ಪ್ರೇಮದ ಅಂಕುರವಾಯಿತೇ ಬಿಗ್ ಬಾಸ್ ನ ಚಂದನ್ ಶೆಟ್ಟಿ ಗೇ..

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೇಮಾಂಕುರ ಆಗುವುದು ಸಹಜ. ಈಗ ಬಿಗ್ ಬಾಸ್ ಐದನೇ ಆವೃತ್ತಿಯಲ್ಲಿ ಚಂದನ್ ಗೆ ಲವ್ ಆಗುವ ಸೂಚನೆಗಳು ಹೆಚ್ಚಾಗಿ ಕಾಣುತ್ತಿವೆ. ಅವರೇ ಸ್ವತಃ ಜಗನ್ ಮತ್ತು ಆಶಿತಾ ಬಳಿ ಪ್ರೀತಿ ಹುಟ್ಟಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಅಂದಹಾಗೆ ಚಂದನ್ ಅವರಿಗೆ ಯಾರ ಮೇಲೆ ಪ್ರೀತಿಯಾಗಿದೆ ಗೊತ್ತಾ ..?

ಬಿಗ್ ಬಾಸ್ ಚಂದನ್ ಅವರಿಗೆ ನಿವೇದಿತಾ ಗೌಡ ಅವರ ಮೇಲೆ ಪ್ರೀತಿ ಹುಟ್ಟಿದೆ ಎಂದು ಹೇಳಿದ್ದಾರೆ. ಆದರೆ ಈ ವಿಷಯವನ್ನು ಅಷ್ಟಾಗಿ ತೆಗೆದುಕೊಂಡಿರುವುದಿಲ್ಲ. ಅವರ ಮಾತಿಗೆ ಜಗನ್ ಮತ್ತು ಆಶಿತಾ ನಗಲು ಆರಂಭಿಸಿದರು. ಯಾಕೆಂದರೆ ಚಂದನ್ ಅವರ ಮಾತುಗಳು ಆ ರೀತಿಯಾಗಿದ್ದವು.

ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸಹ ಕಿಚ್ಚ ಸುದೀಪ್ ಅವರು ಜೆಕೆ ಮತ್ತು ಜಗನ್ ಅವರ ಕಾಲು ಎಳೆದಿದ್ದಾರೆ. ಅಲ್ಲದೇ ಬಿಗ್ ಬಾಸ್ ಲವ್ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ ಎಂದಿದ್ದಾರೆ. ಒಟ್ಟಿನಲ್ಲಿ ಚಂದನ್ ಅವರಿಗೆ ನಿವೇದಿತಾ ಅವರ ಮೇಲೆ ಲವ್ ಆಗಿರುವುದು ನಿಜನಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply