ಗೌರಿ ಲಂಕೇಶ್ ಹಂತಕರ ಪತ್ತೆ?

ಬೆಂಗಳೂರು, ಅಕ್ಟೋಬರ್ 31 : ಸೆಪ್ಟೆಂಬರ್ ೫ ರಂದು ನೆಡದ ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಜಾಡನ್ನು ಎಸ್‌ಐಟಿ ಪತ್ತೆ ಮಾಡಿದೆ ಎಂದು ಟಿವಿ 9 ವರದಿ ಮಾಡಿದೆ.

ಹಂತಕರು ಯಾವುದೇ ಸಂಘಟನೆಗೆ ಸೇರಿದವರಲ್ಲ ಮತ್ತು ನಾಲ್ಕು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಓಡಾಡುತ್ತಿರುವುದಾಗಿ ಎಸ್‌ಐಟಿಗೆ ಮಾಹಿತಿ ಸಿಕ್ಕಿದೆ ಎನ್ನುತ್ತದೆ ವರದಿ. ಆದರೆ ಕೊಲೆಯ ಹಿಂದಿನ ರಹಸ್ಯ ಇನ್ನು ಬಯಲಾಗಿಲ್ಲ.

ಕೆಲವು ದಿನಗಳ ಹಿಂದೆ ಎಸ್‌ಐಟಿ ಹಂತರಕ ರೇಖಾಚಿತ್ರವನ್ನು ಬಿಡುಗಡೆ ಮಾಡಿತ್ತು. ಈಗ ಹಂತಕರ ಬಗ್ಗೆ ಹೆಚ್ಚಿನ ವರದಿ ಪತ್ತೆಯಾಗಿದೆ ಎಂಬ ವರದಿ ಬಂದಿದೆ.

Leave a Reply