ಹೊಸದಿಲ್ಲಿ: ಅಧಿಕಾರಶಾಹಿಗಳ ಅಸಡ್ಡೆ, ಸುದೀರ್ಘ ಪ್ರಕ್ರಿಯೆಗಳು, ವಾಣಿಜ್ಯ ಮತ್ತು ತಾಂತ್ರಿಕ ಅಡಚಣೆಗಳು, ಜತೆಗೆ ರಾಜಕೀಯ ಒತ್ತಾಸೆಯ ಕೊರತೆಯಿಂದ ಮಹತ್ವಾಕಾಂಕ್ಷೆಯ 3.5 ಲಕ್ಷ ಕೋಟಿ ರೂ.ಗಳ ‘ಮೇಕ್ ಇನ್ ಇಂಡಿಯಾ’ ರಕ್ಷಣಾ ಯೋಜನೆಗಳು ನೆನೆಗುದಿಗೆ ಬಿದ್ದಿವೆ.
ಮೂರು ವರ್ಷಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದರೂ, ಜಾರಿಗೊಳಿಸುವ ಅಧಿಕಾರಿಗಳ ಅಸಡ್ಡೆ ಮುಂದುವರಿದಿದೆ.
ಒಟ್ಟು 3.5 ಲಕ್ಷ ಕ್ಕೂ ಹೆಚ್ಚು ಮೌಲ್ಯದ 6 ಮೆಗಾ ಯೋಜನೆಗಳು ನಾನಾ ಹಂತಗಳಲ್ಲಿ ಸ್ಥಗಿತಗೊಂಡಿದ್ದು, ಅಂತಿಮ ಗುತ್ತಿಗೆಗಳಿಗೆ ಇನ್ನೂ ಸಹಿ ಬಿದ್ದಿಲ್ಲ.
ಭವಿಷ್ಯದ ಕಾಲ್ದಳದ ಯುದ್ಧ ವಾಹನಗಳು (ಎಫ್ಐಸಿವಿ), ಹಗುರ ಹಗುರ ಯುಟಿಲಿಟಿ ಹೆಲಿಕಾಪ್ಟರ್ಗಳು ಮತ್ತು ನೌಕಾದಳದ ಬಹೂಪಯೋಗಿ ಹೆಲಿಕಾಪ್ಟರ್ಗಳು, ನೆಲಬಾಂಬ್ ನಿರೋಧಕ ವಾಹನಗಳು, (MCMVs) ಐದನೇ ತಲೆಮಾರಿನ ಫೈಟರ್ ಏರ್ಕ್ರಾಫ್ಟ್ (FGFA) ಯೋಜನೆಗೂ ಬಾಯಿ ಉಳಿದಿವೆ. ಪ್ರಕ್ರಿಯೆಗೆ ಚುರುಕು ನೀಡುವ ಉದ್ದೇಶದಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿ 15 ದಿನಗಳಿಗೊಮ್ಮೆ ಕೇಸುಗಳ ಆಧರಿತ ಸಭೆ ನಡೆಸುತ್ತಿದ್ದಾರೆ.
ಇವುಗಳು ಅತ್ಯಂತ ಸಂಕೀರ್ಣ ಯೋಜನೆಗಳಾಗಿದ್ದು, ವಿಶೇಷ ಕೌಶಲ್ಯದ ಅಸ್ತ್ರಗಳನ್ನು ದೇಶ ಉತ್ಪಾದಿಸಲಾರದು. ಹೀಗಾಗಿ ಸ್ವಲ್ಪ ಕಾಲಾವಕಾಶ ಬೇಕಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಸ್ವದೇಶಿ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ (ಐಡಿಡಿಎಂ) ವಿಚಾರದಲ್ಲಿ ಭಾರತ ಬಹಳಷ್ಟು ಪ್ರಗತಿ ಸಾಧಿಸಬೇಕಿದೆ.
60,000 ಕೋಟಿ ರೂ.ಗಳ ಎಫ್ಐಸಿವಿ ಯೋಜನೆಗೆ ಮೊದಲು 2009ರಲ್ಲಿ ಅನುಮೋದನೆ ನೀಡಲಾಗಿತ್ತು. ಅದೀಗ ಗುತ್ತಿಗೆ ಅರ್ಜಿ ಹಾಕಿಕೊಂಡ ಎಲ್ಲ ಐದು ಭಾರತೀಯ ಕಂಪನಿಗಳಿಗೂ ಅನುಮತಿ ನೀಡಬೇಕೆ ಅಥವಾ ಎರಡೇ ಕಂಪನಿಗಳಿಗೆ ಅನುಮತಿ ನೀಡಿದರೆ ಸಾಕೆ ಎಂಬ ವಿಚಾರ ಕಗ್ಗಂಟಾಗಿದೆ. ಅಲ್ಲದೆ ವಾಐಉಪಡೆ ಕೂಡ ಈ ಸ್ಟೆಲ್ತ್ ಯುದ್ಧ ವಿಮಾನಗಳ ಕ್ಷಮತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ.
2010ರ ಒಪ್ಪಂದದ ಪ್ರಕಾರ ಭಾರತ- ರಷ್ಯಾ 295 ಶತಕೋಟಿ ಡಾಲರ್ ಮೌಲ್ಯದ ಯೋಜನೆಗೆ ಸಹಿ ಹಾಕಿದ್ದವು. ಅದರನ್ವಯ ಅಂತಹ 127 ಸಿಂಗಲ್ ಸೀಟ್ ಜೆಟ್ಗಳನ್ನುಭಾರತದಲ್ಲಿ ಉತ್ಪಾದಿಸಬೇಕಿತ್ತು.