ತಮಿಳು ನಟ ವಿಕ್ರಮ್ ಮಗಳ ಕೈಹಿಡಿದ ಕರುಣಾನಿಧಿ ಮೊಮ್ಮಗ

ತಮಿಳಿನ ಹೆಸರಾಂತ ನಟ ವಿಕ್ರಮ್ ಮಗಳು ಅಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಡುತಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ಮರಿ ಮೊಮ್ಮಗರಾದ ಮನು ರಂಜಿತ್‌ರ ಕೈಹಿಡಿದಿದ್ದಾರೆ ಅಕ್ಷಿತಾ.

ಚೆನ್ನೈನ ಕರುಣಾನಿಧಿ ಅವರ ಗೋಪಾಲಪುರಂ ಮನೆಯಲ್ಲಿ ಸೋಮವಾರ ಇವರ ವಿವಾಹ ಮಹೋತ್ಸವ ನೆರವೇರಿತು. ಕರುಣಾನಿಧಿಯವರು ಈ ನೂತನ ದಂಪತಿಗಳನ್ನು ಆಶೀರ್ವದಿಸಿದ್ದಾರೆ.

ಮಂಗಳವಾರ ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ತಮಿಳುನಾಡಿನ ಹಲವು ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ.

Leave a Reply