ರಾಜ್ಯೋತ್ಸವದಂದು ‘ಮಫ್ತಿ’ ನೀರಿಕ್ಷೆಯಲ್ಲಿ ಕನ್ನಡಿಗರು..

‘ಮಫ್ತಿ’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು ಕನ್ನಡ ಜನರಲ್ಲಿ ಬಾರಿ ನೀರಿಕ್ಷೆಯನ್ನು ಮೂಡಿಸಿದೆ. ಚಿತ್ರದಲ್ಲಿ ಹೀರೋ ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಜೊತೆಯಾಗಿದ್ದು ‘ಮಫ್ತಿ’ ಚಿತ್ರದ ಹೈಲೈಟ್ ಆಗಿದ್ದು, ಯೂಟ್ಯೂಬ್‌ನಲ್ಲಿ ಭಾರಿ ಸದ್ದನ್ನು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ಶ್ರೀಮುರಳಿ ಒಂದಾಗಿದ್ದು, ಮಫ್ತಿ ಚಿತ್ರ ರೆಡಿಯಾಗಿದೆ.

Related image

ಜಯಣ್ಣ ಭೋಗೇಂದ್ರ ರವರ ನಿರ್ಮಾಣದಲ್ಲಿ ಚಿತ್ರ ಮೂಡಿಬರುತಿದ್ದು, ಸಾನ್ವಿ ಶ್ರೀವಾತ್ಸವ್, ವಸಿಷ್ಠ ಎನ್ ಸಿಂಹ ಚಿತ್ರದ ಪಾತ್ರವರ್ಗದಲ್ಲಿದ್ದು ಭರ್ಜರಿ ಮೇಕಿಂಗ್, ಹಿನ್ನೆಲೆ ಧ್ವನಿ, ಭೂಗತ ಜಗತ್ತಿನ ಸನ್ನಿವೇಶಗಳು ಜನರ ಗಮನಸೆಳೆಯುತ್ತಿವೆ.

ಶೀಘ್ರದಲ್ಲೇ ಚಿತ್ರದ ಆಡಿಯೋ ಸಹ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ದೆಶಕ ನರ್ತನ್ ಎಂ ಹೇಳಿದ್ದಾರೆ. ಒಟ್ಟಾರೆಯಾಗಿ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಿರುವ ಮಫ್ತಿ ಟ್ರೇಲರ್ ಸಿನಿಮಾಲ್ಲಿ ಏನೋ ವಿಶೇಷತೆ ಇದೆ ಎಂಬುದರ ಸುಳಿವು ನೀಡಿದೆ. ರೆಗ್ಯುಲರ್ ಫಾರ್ಮ್ಯಾಟ್‌ಗೆ ಭಿನ್ನವಾಗಿ ಟ್ರೇಲರನ್ನು ರೂಪಿಸಿದ್ದು ಸಿನಿಮಾ ಬಗ್ಗೆ ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿವೆ.

Leave a Reply