‘ಪ್ರಿಯಾಂಕಾ ಉಪೇಂದ್ರ’ ರವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ???

ರಿಯಲ್ ಸ್ಟಾರ್ ಉಪೇಂದ್ರ ರವರ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಇಂದು ಉದಯವಾಗಿದೆ. ರಾಜಕಾರಣದ ಬದಲು ಪ್ರಜಾಕಾರಣಕ್ಕೆ ಧುಮುಕಿರುವ ಉಪೇಂದ್ರ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಹೀಗಿರುವಾಗಲೇ, ಉಪೇಂದ್ರ ರವರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ. ಈ ಪ್ರಶ್ನೆಗೆ ಸ್ವತಃ ಉಪೇಂದ್ರ ಇಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದರು.

”ಪ್ರಿಯಾಂಕಾ ಉಪೇಂದ್ರ ಫೇಮಸ್ ನಿಜ. ಹಾಗಂತ ಕಣಕ್ಕಿಳಿಸಲ್ಲ. ರಾಜಕಾರಣ, ಕ್ಷೇತ್ರ, ವಿಚಾರ… ಹೀಗೆ ಎಲ್ಲವನ್ನೂ ಪ್ರಿಯಾಂಕಾ ತಿಳಿದುಕೊಳ್ಳಬೇಕು. ಯಾವುದೋ ಒಂದು ಕ್ಷೇತ್ರದಲ್ಲಿ ಫೇಮಸ್ ಆದವರೆಲ್ಲ ರಾಜಕಾರಣದಲ್ಲಿ ಫೇಮಸ್ ಆಗುವುದಿಲ್ಲ. ಒಂದು ವೇಳೆ ಜನರ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಪ್ರಿಯಾಂಕಾ ತಿಳಿದುಕೊಂಡರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನೋಡೋಣ” ಎಂದರು ಉಪೇಂದ್ರ.

ಅಲ್ಲಿಗೆ, ಸದ್ಯಕ್ಕೆ ಪ್ರಿಯಾಂಕಾ ಉಪೇಂದ್ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವುದು ಪಕ್ಕಾ ಆದ ಹಾಗೆ ಲೆಕ್ಕ.

Leave a Reply