ಜನಮನ ಗೆಲ್ಲುತ್ತಿರುವ ಪುನೀತ್ ಹಾಡಿರುವ ಅಣ್ಣಾವ್ರ ಹಾಡು

ನಟ ಪುನೀತ್‌ ರಾಜ್‌ಕುಮಾರ್‌ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷವಾದ ವೀಡಿಯೋ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಕನ್ನಡಿಗರ ಮೆಚ್ಚಿನ ನಟ ರಾಜ್‌ ಕುಮಾರ್‌ ಹಾಡಿದ್ದ ‘ಚಲಿಸುವ ಮೋಡಗಳು’ (1982) ಚಲನಚಿತ್ರ ಗೀತೆ ‘ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ..’ ಹಾಡನ್ನು ಮತ್ತೆ ಪುನೀತ್‌ ಹಾಡಿದ್ದು, ಇದು ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ.

ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚಿನ ಜನರು ವೀಕ್ಷಿಸಿದ್ದಾರೆ. ಈ ಹಾಡಿನ ಜತೆ ರಾಜ್ಯದ ಜನತೆಗೆ ಪುನೀತ್‌ ಕನ್ನಡ ರಾಜ್ಯೋತ್ಸವ ಶುಭ ಕೋರಿದ್ದಾರೆ. ‘ಅಪ್ಪಾಜಿ ಹಾಡಿರುವ ಈ ಅದ್ಭುತ ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ನನ್ನದ್ದೊಂದು ಚಿಕ್ಕ ಉಡುಗೊರೆ! ಜೈ ಕರ್ನಾಟಕ ಮಾತೆ’ ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡು ವೀಡಿಯೋವನ್ನೂ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ಈ ಹಾಡು ಇದುವರೆಗೆ 6384 ಶೇರ್ ಆಗಿದ್ದು, 16 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. 700ಕ್ಕೂ ಅಧಿಕ ಕಾಮೆಂಟ್ಸ್ ಪಡೆದುಕೊಂಡಿದ್ದು ಎಲ್ಲೆಡೆಯಿಂದ ರಾಜ್ಯೋತ್ಸವ ಶುಭಾಶಯಗಳು ಹರಿದುಬಂದಿವೆ. ನೀವು ಒಮ್ಮೆ ನೋಡಿ ಆನಂದಿಸಿ.

ಕೃಪೆ : ವಿಜಯ ಕರ್ನಾಟಕ

Leave a Reply