ತಿಕೋನ ಪ್ರೇಮಕಥೆಯ ಗುಂಗಲ್ಲಿ ಕನ್ನಡದ ಬಿಗ್ ಬಾಸ್ 5

ಹದಿನೇಳು ಎಪಿಸೋಡ್ ಗಳ ನಂತರ ಬಿಗ್ ಬಾಸ್ ಕನ್ನಡ ಸೀಸನ್ 5 ತ್ರಿಕೋನ ಪ್ರೇಮಕತೆಗೊಂದು ತೆರೆ ಎಳೆದಿದೆ. ಹಿಂದಿನ ಎಪಿಸೋಡ್‌ಗಳಲ್ಲಿ ಚಂದನ್‌ ಶೆಟ್ಟಿ ಯವರು ತಮಗೆ ಲವ್‌ನ ಅಂಕುರವಾಗುತ್ತಿದೆ ಎಂಬ ವಿಷಯವನ್ನು ಆಶಿತಾ, ಜಗನ್‌ ಮತ್ತು ಕೃಷಿಯೊಂದಿಗೆ ಹೇಳಿಕೊಂಡಿದ್ದು, ಯಾರ ಮೇಲೆ ಲವ್‌ ಎಂಬ ಸ್ಪಷ್ಟ ಚಿತ್ರಣ ನೀಡಿರಲಿಲ್ಲ. ಇದೀಗ ಈ ವಿಚಾರಕ್ಕೆ ತೆರೆ ಎಳೆದಂತಾಗಿದೆ.

ಚಂದನ್‌ಗೆ ಹಾಗಾದ್ರೆ ಗಮನ ಸೆಳೆಯುತ್ತಿರುವುದು ಬೆಳಗಾವಿ ಬೆಡಗಿ ಶ್ರುತಿನಾ? ಹೀಗೊಂದು ಸಂಶಯ ಅನುಪಮಾ ಗೌಡ ರವರಿಗೆ ಮೂಡಿದ್ದು, ತಮ್ಮ ಚಾಣಕ್ಷಯ್ಯಾ ಮಾತಿನಿಂದ ಈ ಪ್ರೇಮಕಥೆಗೆ ತೆರೆ ಎಳೆದಿದ್ದಾರೆ. ಎಲ್ಲರ ಸಮೂಹದಲ್ಲಿ ಅನುಪಮಾ ರವರು ಚಂದನ್‌ಗೆ ಶ್ರುತಿ ಎಂದರೆ ಇಷ್ಟ ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಾಗದ ಅನುಪಮಾ, ಆದರೆ ಶ್ರುತಿಗೆ ಜೆಕೆ ಇಷ್ಟವಾಗುತ್ತಾರೆ ಎಂದು ಕಾಲೆಳೆದರು.

ಅನುಪಮಾರ ಈ ಮಾತಿಗೆ ಪ್ರತಿಕ್ರಿಯಿಸಿದ ಶ್ರುತಿ, ಇಷ್ಟಪಡುವುದು ಹಾಗೂ ಲವ್‌ ಮಾಡುವುದಕ್ಕೆ ವ್ಯತ್ಯಾಸವಿದೆ, ಅವೆರಡೂ ಒಂದೇ ಅಲ್ಲ ಎಂದು ಹೇಳಿ ಜಾರಿಕೊಂಡರು. ಇದರಿಂದ ಪ್ರೇಕ್ಷಕರಿಗೆ ಚಂದನ್‌ ಲವ್‌ ಸ್ಪಷ್ಟವಾಯಿತು. ಒಟ್ಟಾರೆ ಬಿಗ್‌ಬಾಸ್‌ ಮನೆಯಲ್ಲಿ ತ್ರಿಕೋನ ಪ್ರೇಮವೊಂದು ನಡೆಯುತ್ತಿದೆ ಎಂಬ ಸುಳಿವು ಸಿಕ್ಕಿದೆ.

Leave a Reply