ಒಂದೇ ದಿನಕ್ಕೆ ಬಿಜೆಪಿ ಪರಿವರ್ತನಾ ಬಸ್ಸು ಡ್ಯಾಮೇಜ್,ಬಿಜೆಪಿ ಕಾರ್ಯಕರ್ತರಿಂದ ನೇ ಕೃತ್ಯ .

  ತುರುವೇಕೆರೆ ಸಮಾವೇಶದ ಬಳಿಕ ಚಿಕ್ಕನಾಯಕನಹಳ್ಳಿಗೆ ಹೊರಟಿದ್ದ ಯಡಿಯೂರಪ್ಪ ಹಾಗೂ ರಾಜ್ಯದ‌ ನಾಯಕರು ಬಾಣಸಂದ್ರ ಬಳಿ ಏರ್ಪಡಿಸಿದ್ದ ವೇದಿಕೆ‌ ಕಾರ್ಯಕ್ರಮಕ್ಕೆ ಪಾಲ್ಗೊಳ್ಳದ ಕಾರಣ ರಥ ಯಾತ್ರೆಗೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಪರಿವರ್ತನಾ ಯಾತ್ರೆ ವಾಹನದ ಮುಭಾಗದ ಗಾಜಿಗೆ ಕಲ್ಲು ತೂರಲಾಗಿದೆ. ಯಡಿಯೂರಪ್ಪ ಅವ‌ರ ಕಾರಿಗೆ ಅಡ್ಡಲಾಗಿ ಮಲಗಿದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ತುರುವೇಕೆರೆ ತಾಲೂಕಿನ ಬಾಣಸಂದ್ರದಲ್ಲಿ ಬಿಜೆಪಿ ಅತೃಪ್ತ ಕಾರ್ಯಕರ್ತರು ಪರಿವರ್ತನಾ ಯಾತ್ರೆ‌ಗೆ ಕಲ್ಲು ತೂರಾಟ ನಡೆಸಿ ಅಡ್ಡಿಪಡಿಸಿದ್ದಾರೆ. ಬಿಜೆಪಿ ಪಕ್ಷದಿಂದ ಉಚ್ಛಾಟಿತ ಮುಖಂಡ ಚೌದರಿ ನಾಗೇಶ್ ಬೆಂಬಲಿಗರಿಂದ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದೆ. ..

Leave a Reply