ಗುಜರಾತ್ ಚುನಾವಣಾ ಸೋಲಿನ ಭೀತಿಯಲ್ಲಿ ಬಿಜೆಪಿ, ರಾಜಪುತ್ ವೋಟ್ ಬ್ಯಾಂಕ್ ಮೇಲೆ ಕಣ್ಣು ?.

ಅಹಮದಾಬಾದ್, ನವೆಂಬರ್ 03: ಗುಜರಾತಿನಲ್ಲಿ ವಿಧಾನಸಭೆ ಚುನಾವಣೆ ಮುಗಿಯುವ ತನಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಜೆಪಿ ಮನವಿ ಮಾಡಿದೆ.

ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕೂ ಮುನ್ನ ರಜಪೂತ ಸಮುದಾಯದ ಪ್ರತಿನಿಧಿಗಳ ಮುಂದೆ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ಕೋರಲಾಗಿದೆ. ರಜಪೂತರು, ಕ್ಷತ್ರೀಯ ಸಮುದಾಯದವರು ಈ ಚಿತ್ರಕ್ಕೆ ಆಕ್ಷೇಪ ವ್ಯಕ್ತ ಪಡಿದ್ದಾರೆ. ಇತಿಹಾಸವನ್ನು ತಿರುಚಲಾಗಿದ್ದು, ರಾಣಿ ಪದ್ಮಾವತಿಯ ಬಗ್ಗೆ ಆಕ್ಷೇಪಾರ್ಹ ಸನ್ನಿವೇಶಗಳಿವೆ, ಅಲ್ಲಾದ್ದೀನ್ ಖಿಲ್ಜಿಯನ್ನು ಪದ್ಮಾವತಿ ಒಮ್ಮೆ ಕೂಡಾ ಭೇಟಿ ಮಾಡಿರಲಿಲ್ಲ.

ಆದರೆ, ಚಿತ್ರದಲ್ಲಿ ಈ ಬಗ್ಗೆ ದೃಶ್ಯಗಳಿವೆ. ಸಮುದಾಯದ ಭಾವನೆಗೆ ಧಕ್ಕೆ ಉಂಟಾಗುವ ದೃಶ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ, ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ ಸಮುದಾಯದವರ ಮುಂದೆ ಪ್ರದರ್ಶನಗೊಳ್ಲಲಿ ಎಂದು ಗುಜರಾತ್ ಬಿಜೆಪಿ ವಕ್ತಾರ ಜಡೇಜ ಅವರು ಹೇಳಿದ್ದಾರೆ.

ಈ ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ 01 ಎಂದು ಹೇಳಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕಗಳು ಡಿಸೆಂಬರ್ 9 ಹಾಗೂ 14ರಂದು ಎಂದು ನಿಗದಿಯಾಗಿವೆ. ಹೀಗಾಗಿ, ಚುನಾವಣೆ ಮುಗಿಯುವ ತನಕ ಚಿತ್ರದ ಬಿಡುಗಡೆ ಸ್ಥಗಿತಗೊಳಿಸುವುದು ಉತ್ತಮ ಎಂದು ಜಡೇಜ ಹೇಳಿದರು

Leave a Reply