ಬಿಜೆಪಿಯಾ ಕನಸು “ಕಾಂಗ್ರೆಸ್ ಮುಕ್ತ ಭಾರತದ” ಯಶಸ್ಸು ಎಷ್ಟು??

2014 ಚುನಾವಣಾ ಸಮಯದಲ್ಲಿ ಬಿಜೆಪಿ ಯವರು ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯೊಂದಿಗೆ ಚುನಾವಣಾ ಕಣಕ್ಕೆ ಇಳಿದರು ಬಿಜೆಪಿ.

2014ರ ಚುನಾವಣಾ ಬಿಜೆಪಿ 282 ಸೀಟ್ ಗೆದಿತ್ತು ಆದರೆ ಅದ್ರಲ್ಲಿ 100 ಚುನಾಯಿತರು ಕಾಂಗ್ರೆಸ್ನವರು. ಅದಿಕಾರದ ದಾಹಕ್ಕಾಗಿ ಚುನಾವಣಾ ಮುಂಚೆ ಪಕ್ಷ ಬದಲಿಸಿದವರು. ಇದರಿಂದ ನೀವು ತಿಳಿಬೇಕಾಗಿರುವುದು ಏನಂದರೆ ನಿಮ್ಮ ಮೇಲೆ ಅಧಿಕಾರ ಮಾಡುತಿರುವವರು ಅವರೇ ಆದರೆ ಪಕ್ಷ ಬದಲಾಗಿದೆ ಅಷ್ಟೇ.

ಇದಕ್ಕೆ ನಿದರ್ಶನ ಅರುಣಾಚಲ ಪ್ರದೇಶ , 2014 ರಲ್ಲಿ 60 ಸೀಟ್ಗಳ ಅಸ್ಸೆಂಬಲಿಯಲ್ಲಿ 42 ಕಾಂಗ್ರೆಸ್ನವರು ಇದ್ದರು ಆದರೆ ಇವತ್ತಿನ ಅಸೆಂಬ್ಲಿಯ 47 ಬಿಜೆಪಿ ನಾಯಕರು ಇದ್ದಾರೆ ಆದರೆ ಬಹುಪಾಲು ಕಾಂಗ್ರೆಸ್ ನಾಯಕರೇ.

ಅರುಣಾಚಲಪ್ರದೇಶ್ ಈಗಿನ ಮುಖ್ಯಮಂತ್ರಿ ಪೇಮ ಖಂಡು ರವರು 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರು.

2014ರ ಲೋಕಸಭಾ ಚುನಾವಣಾ ಮುಂಚೆ ಕಾಂಗ್ರೆಸ್ ನ ಮುಖ್ಯ ನಾಯಕರು ಚೌಧರಿ ವೀರೇಂದ್ರ ಸಿಂಗ್ , ರಾವ್ ಇಂಡೇರ್ಜಿತ್ ಸಿಂಗ್ , ಜಗದಂಬಿಕಾ ಪಲ್ , D. ಪುರಂದೇಶ್ವರಿ ಮತ್ತು ಕೃಷ್ಣ ತೀರಥ್ , ಇವರಲ್ಲಿ ಬಹುಜನ ಈಗಿನ ಮೋದಿಯವರ ಮಂತ್ರಿ ಮಂಡಲದಲ್ಲಿ ಇದ್ದಾರೆ.

ಇನ್ನ ಮಣಿಪುರಕ್ಕೆ ಬಂದರೆ , N ಬಿರೇನ್ ಸಿಂಗ್ರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಚಾರ ಮಾಡಿ, ಬಿಜೆಪಿ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಾರಿಗೆ ತಮ್ಮ ಬಾವುಟ ಹಾರಿಸಿದ್ದಾರೆ. N ಬಿರೇನ್ ಸಿಂಗ್ರವರು ಕೂಡ ಹಿಂದಿನ ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದವರು.

ಉತ್ತರಾಖಂಡದಲ್ಲಿ ಸತ್ಪಾಲ್ ಮಹಾರಾಜ್, ಅವರ ಹೆಂಡತಿ ಅಮೃತ ರಾವತ್ , ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ , ಮಾಜಿ ಸ್ಪೀಕರ್ ಯಶಪಾಲ್ ಆರ್ಯ, ಹರಕೆ ಸಿಂಗ್ ರಾವತ್, ಸುಬೋಧ್ ಯೂನಿಯಲ್ , ಪ್ರಣವ್ ಸಿಂಗ್, ಕೇದಾರ್ ಸಿಂಗ್ ರಾವತ್ , ಪ್ರದೀಪ್ ಭಟ್ರ ಮತ್ತು ರೇಖಾ ಆರ್ಯ ಎಲ್ಲರೂ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವ ಮುಂಚೆ. ಇದರಲ್ಲೂ ಹೆಚ್ಚಿನಾಂಶ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದಿದ್ದಾರೆ.

ಉತ್ತರಪ್ರದೇಶ , ಗೋವಾ ಇತರೆ ರಾಜ್ಯಗಳಲ್ಲೂ ಇಂತಹದೇ ನೆಡಿಯುತಿದೆ. “ಕೇಡರ್ ಬೇಸ್ಡ್” ಪಾರ್ಟಿ ಅನ್ನು ಬಿಜೆಪಿ , ಕಾಂಗ್ರೆಸ್ ನಿಂದ ನಾಯಕರನ್ನು ದತ್ತು ಪಡೆಯುತಿರುವುದು ನೋಡಿದರೆ , ನಾಯಕರನ್ನು ಹುಟ್ಟುಹಾಕುವುದರಲ್ಲಿ RSS ನ ಅಸಮರ್ಥತೆ ಎದ್ದು ಕಾಣಿಸುತ್ತದೆ ಮತ್ತು ಬಿಜೆಪಿಯಾ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸು ಆಗುವ ಯಾವ ಲಕ್ಷಣಗಳು ಕಾಣಿಸುತಿಲ್ಲ.

ಈ ಹೈ ಕಮಾಂಡ್ ನೆಡೆಯಿಂದ ಹೆಚ್ಚು ಪೆಟ್ಟು ತಿನ್ನುತ್ತಿರುವುದು ಪಾರ್ಟಿ ವರ್ಕರ್ಸ್, ಈ ಹಿಂದೆ ವಿರೋಧ ಪಕ್ಷದಲ್ಲಿ ಇದ್ದು ಈಗ ಬಿಜೆಪಿಗೆ ಬಂದು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ.

ಕಾಂಗ್ರೆಸ್ ಈ ಹಿಂದೆ ಕೂಡ ಇದೆ ರೀತಿ ಜನ ಸಂಘದ ಸಮಯದಲ್ಲೂ ಕಾಂಗ್ರೆಸ್ ನ ಪಕ್ಷ ಬಿಟ್ಟು ಮತ್ತೆ ಮರಳಿದ್ದಾರೆ. ಇದು ಮತ್ತೆ ಮರುಕಳಿಸಲಿದ್ದೀಯ?

ಕಾಂಗ್ರೆಸ್ ಮತ್ತು ಇತರೆ ಪಕ್ಷದಲ್ಲಿ ಇದ್ದ ಭ್ರಷ್ಟ ಮತ್ತು ರಾಷ್ಟ್ರೀಯ ವಿರೋಧಿಗಳು , ಬಿಜೆಪಿ ಸೇರಿದ ತಕ್ಷಣ ಶುದ್ಧರಾಗುವುದು ಹೇಗೆ ?.

Leave a Reply