‘ದಿ ಎಕ್ಸ್‌ಟ್ರಾರ್ಡನರಿ ಜರ್ನಿ ಆಫ್‌ ಫಕೀರ್‌’ ನಲ್ಲಿ ತಮಿಳಿನ ನಟ ಧನುಷ್…

ತಮಿಳಿನ ಖ್ಯಾತ ನಟ ಧನುಷ್‌ ಈಗ ಹಾಲಿವುಡ್‌ಗೆ ಕಾಲಿಟ್ಟಿದ್ದಾರೆ. ‘ದಿ ಎಕ್ಸ್‌ಟ್ರಾರ್ಡನರಿ ಜರ್ನಿ ಆಫ್‌ ಫಕೀರ್‌’ ಎಂಬ ಚಿತ್ರದಲ್ಲಿ ಓಘಸ್‌ ರಾಥೋಡ್‌ ಎಂಬ ಫಕೀರ್‌ ಪಾತ್ರವನ್ನು ಧನುಷ್‌ ನಿರ್ವಹಿಸಿದ್ದಾರೆ.ಈ ಚಿತ್ರವೂ ಅಮೆರಿಕಾದ್ಯ್ಹಾಂತ ಸದ್ದು ಮಾಡುತ್ತಿದೆ. ದಕ್ಷಿಣ ಭಾರತೀಯ ನಟನೊಬ್ಬನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಮಹತ್ವದ ಸಂಗತಿಯಾಗಿದೆ.

Image result for the extraordinary journey of the fakir

ಸೋನಿ ಪಿಕ್ಚರ್‌ ಇದನ್ನು ಬಿಡುಗಡೆ ಮಾಡುತ್ತಿದ್ದು, ಕೆನ್‌ ಸ್ಕಾಟ್‌ ರವರ ನಿರ್ದೇಶನದಲ್ಲಿ ಮೂಡಿಬಂದಿದೆ. ವಿವಿಧ ದೇಶಗಳು ಸೇರಿದಂತೆ ಸ್ಪೇನ್‌, ಆಸ್ಪ್ರೇಲಿಯಾ, ಜಪಾನ್‌, ಪೋಲೆಂಡ್‌, ಗ್ರೀಸ್‌, ಇಸ್ರೇಲ್‌, ಟರ್ಕಿ, ಪೋರ್ಚುಗಲ್‌ ದೇಶಗಳಲ್ಲಿ ರಿಲೀಸ್‌ ಮಾಡಲಾಗುತ್ತಿದೆ. ಹನ್ನೊಂದು ಮಂದಿ ವಿತರಕರು ಹಂಚಿಕೆಗೆ ಮುಂದೆ ಬಂದಿದ್ದಾರೆ.

ಈ ಚಿತ್ರ ನಾಲ್ಕು ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮುಂಬಯಿಯಲ್ಲಿ ಶೂಟಿಂಗ್‌ ಮಾಡಲಾಗಿದೆ. ಫ್ರೆಂಚ್‌ ಲೇಖಕ ರೋಮೇನ್‌ ಬರೆದಿರುವ ದಿ ಎಕ್ಸ್‌ಟ್ರಾರ್ಡನರಿ ಜರ್ನಿ ಆಫ್‌ ಫಕೀರ್‌ ಎಂಬ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ಚಿತ್ರ ಮಾಡಲಾಗುತ್ತಿದೆ. ಈ ಕಾದಂಬರಿ 35 ಭಾಷೆಗಳಿಗೆ ತರ್ಜುಮೆ ಆಗಿದ್ದು, 2014ರಲ್ಲಿ ಬೆಸ್ಟ್‌ ಸೆಲ್ಲಿಂಗ್‌ ಕೃತಿ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಧನುಷ್‌ ಜತೆ ಬಾರ್ಖಾಂಡ್‌, ಎರಿನ್‌, ಸೀಮಾ ಬಿಸ್ವಾಸ್‌ ಸೇರಿ ಕೆಲ ಹಾಲಿವುಡ್‌ ನಟರು ನಟಿಸಿದ್ದಾರೆ.

Leave a Reply