ಶಾಸಕ ಸಿ.ಪಿ.ಯೋಗೇಶ್ವರ್ಗೆ ತಿರುಗೇಟು ಕೊಟ್ಟ ಡಿ.ಕೆ.ಶಿವಕುಮಾರ್

ಬೆಂಗಳೂರು ನವೆಂಬರ್ 5: ಯೋಗೇಶ್ವರ್ ಅನುಭವಿಗಳು, ಕಲಾವಿದರು, ದೊಡ್ಡವರು ಅವರ ಮುಂದೆ ಸ್ಪರ್ಧಿಸುವಷ್ಟು ದೊಡ್ಡವ ನಾನಲ್ಲ. ಅವರ ಸಾಮರ್ಥ್ಯ ದೊಡ್ಡದಿದೆ ಎಂದು ತಿಳಿಸಿದ್ದಾರೆ.
ನನ್ನದು ರಾಜ್ಯದ ಮೂಲೆಯಲ್ಲಿರುವ ಸಣ್ಣ ಕ್ಷೇತ್ರ. ಸಣ್ಣ ಕ್ಷೇತ್ರದಲ್ಲಿ ಹೇಗೋ ಗೆದ್ದು ಶಾಸಕನಾಗಿ ಜೀವನ ಮಾಡುತ್ತಿದ್ದೇನೆ. ಅಂತಹ ದೊಡ್ಡವರ ಸಹವಾಸ ನಮಗ್ಯಾಕೆ ಎಂದು ಲೇವಡಿ ಮಾಡಿದ್ದಾರೆ
ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷದಲ್ಲಿದ್ದ ಅವರು ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರು ಏನೂ ಬೇಕಾದರೂ ಹೇಳಿಕೊಳ್ಳಲಿ. ಅವರಿಗೆ ಉತ್ತರ ನೀಡುವಷ್ಟು ನಾನು ದೊಡ್ಡವನಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಶಾಸಕ ಸಿ.ಪಿ.ಯೋಗೇಶ್ವರ್, ಸಚಿವ ಶಿವಕುಮಾರ್‌ಗೆ ತಾಕತ್ತಿದ್ರೆ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲ್ ಹಾಕಿದ್ದರು.

Leave a Reply