ನಕಲಿ “ಸೆಕ್ಸ್ ಸಿಡಿ” ಬಗ್ಗೆ ಸುಳಿವು ಕೊಟ್ಟ: ಹಾರ್ದಿಕ್ ಪಟೇಲ್

ಅಹಮದಾಬಾದ್, ನವೆಂಬರ್ 5: ಗುಜರಾತ್ ವಿಧಾನಸಭಾ ಚುನಾವಣಾ ಮುನ್ನ ನನ್ನ ತೇಜೋವಧೆಗೆ ಬಿಜೆಪಿ ನಕಲಿ ಸೆಕ್ಸ್ ಸಿಡಿ ಬಳಸಿಕೊಳ್ಳಬಹುದು ಎಂದು ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಗೊಂದಲಗಳಿಗೆ ತೆರೆಯೆಳೆದ ಹಾರ್ದಿಕ್ ಪಟೇಲ್ ಕಾಂಗ್ರೆಸಿಗೆ ಬೆಂಬಲ ಸೂಚಿಸಿದಾರೆ , ಇದರಿಂದ ಬಿಜೆಪಿಯ ಕೀಳು ಕಾರ್ಯತಂತ್ರ ರೂಪಿಸಿದೆ. “ಬಿಜೆಪಿ ತಿರುಚಿದ ಸೆಕ್ಸ್ ಸಿಡಿಯನ್ನು ತಯಾರಿಸಿದೆ”. ಚುನಾವಣೆಗೂ ಮುನ್ನ ಈ ಸಿಡಿ ಬಿಡುಗಡೆಯಾಗಬಹುದು.ಹಾಗಾಗಿ ಸ್ವಲ್ಪ ತಡೆದುಕೊಳ್ಳಿ, ನೋಡಿ, ಎಂಜಾಯ್ ಮಾಡಿ,” ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಬಿಜೆಪಿಗೆ ಪ್ರತಿಷ್ಠೆಯ ಕಣ ವಾಗಿರುವ ಗುಜರಾತ್ , ಚುನಾವಣೆಗೂ ಮುನ್ನ ಕೋಮು ಭಾವನೆ ಕೆರಳಿಸುವುದಲ್ಲದೆ ಗಲಭೆಯನ್ನೂ ಹುಟ್ಟು ಹಾಕಬಹುದು ಎಂದು ಹಾರ್ದಿಕ್ ಎಚ್ಚರಿಸಿದ್ದಾರೆ.

Leave a Reply