ನಟಿ ಅಮೂಲ್ಯ ರಾಜಕೀಯಕ್ಕೆ ಪ್ರವೇಶ ಕೊಟ್ಟಿದ್ದಾರಾ???

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಸ್ಯಾಂಡಲ್‍ವುಡ್ ನಟ-ನಟಿಯರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದು, ಕಳೆದ ವಾರವಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಹೊಸ ಕೆಪಿಜೆಪಿ ಪಕ್ಷಕ್ಕೆ ಚಾಲನೆ ನೀಡಿದ್ದರು.

ಈ ನಡುವೆ ಸ್ಯಾಂಡಲ್‍ವುಡ್‍ನ ನಟಿ ಅಮೂಲ್ಯ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿಗಳು ಸಾಕಷ್ಟು ಹೆಚ್ಚಾಗುತ್ತಿವೆ. ಈ ನಡುವೆ ಇದಕ್ಕೆ ಸಂಬಂಧಪಟ್ಟಂತೆ ಅವರು ಸಾಮಾಜಿಕ ಕಾರ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಎಲ್ಲಾ ಅಂತೆ ಕಂತೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

Image result for amulya jagadeesh photos

ಇತ್ತೀಚೆಗೆ ಆರ್.ಆರ್.ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ ತಮ್ಮ ಪತಿ ಜೊತೆ ಕಾಣಿಸಿಕೊಂಡಿದ್ದರು. ಜೊತೆಗೆ ಮದುವೆ ನಂತರ ಅವರು ಯಾವುದೇ ಸಿನಿಮಾದಲ್ಲೂ ಕೂಡ ಕಾಣಸಿಕೊಳ್ಳುತ್ತಿಲ್ಲ ಹೀಗಾಗಿ ಒಂದರ್ಥಕ್ಕೆ ಅವರು ಸಿನಿಮಾ ರಂಗದಿಂದ ದೂರ ಸರಿದು ಈಗಾಗಲೇ ಆರ್.ಆರ್. ನಗರದ ಬಿಜೆಪಿಯ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಅಮೂಲ್ಯರ ಮಾವ ರಾಮಚಂದ್ರ ಅವರ ಹಾದಿಯನ್ನು ತುಳಿಯವುದರಲ್ಲಿ ಸಂಶಯವಿಲ್ಲ.

ಆದರೆ ಈ ನಡುವೆ ಅಮೂಲ್ಯ ಅವರ ರಾಜಕೀಯ ನಡೆ ಬಗ್ಗೆ ಸಾಕಷ್ಟು ಕೂತುಹಲ ಮೂಡಿಸಿದ್ದ ಇವೆಲ್ಲದಕ್ಕೂ ಕಾಲವೇ ಉತ್ತರಿಸಿಬೇಕಾಗಿದೆ.

Leave a Reply