ಶಾಸಕ ಬಸವರಾಜ್ ಹೊರಟ್ಟಿಯವರಿಗೆ ಬೆದರಿಕೆ ಪತ್ರ

ನವೆಂಬರ್ 8: ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿಗೆ ಗುಂಡಿಟ್ಟು ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಪೋಸ್ಟ್ ಮೂಲಕ ಹೊರಟ್ಟಿಯವರ ಹುಬ್ಬಳ್ಳಿ ಕಚೇರಿಗೆ ಅನಾಮಧೇಯ ಪತ್ರ ರವಾನಿಸಲಾಗಿದ್ದು, ಮುಂಬೈಯಿಂದ ಹುಬ್ಬಳ್ಳಿಗೆ ಐವರು ಶಾರ್ಪ್ ಶೂಟರ್‌ಗಳ ತಂಡ ಬಂದಿರುವುದಾಗಿ ಎರಡು ದಿನಗಳಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗುವುದಾಗಿ ಎಂಬ ಬೆದರಿಕೆಯೊಡ್ಡಲಾಗಿದೆ ಎನ್ನಲಾಗಿದೆ.

ಬೆದರಿಕೆ ಪತ್ರ ಬಂದಿರುವ ಬಗ್ಗೆ ಹೊರಟ್ಟಿ ಕಚೇರಿಯ ಸಿಬ್ಬಂದಿ ಖಚಿತಪಡಿಸಿದ್ದಾರೆ ಮತ್ತು ಅನಾಮಧೇಯ ಪತ್ರವನ್ನು ಡಿಸಿಪಿಯವರಿಗೆ ರವಾನಿಸಿದ್ದು ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

Leave a Reply