ಶ್ರದ್ಧಾ ಈಗ ತುಂಬಾ ಬ್ಯುಸಿ ಯಾಗಿರುವ ನಟಿ ಎಂದು ಹೇಳಬಹುದಾಗಿದೆ. ಭಾರತದ ಹಲವು ಭಾಷೆಗಳಲ್ಲಿ ನಟಿಸಿರುವ ಶ್ರದ್ಧಾ ತೆಲುಗಿನಲ್ಲಿ ಆದಿ ಜೊತೆ ಈಡುಜೋಡು ಮತ್ತು ಹಾಯ್ ಕೃಷ್ಣ ಮುಕುಂದ ಮುರಾರಿ ಎಂಬ ಸಿನಿಮಾ ಗಳ ಶೂಟಿಂಗ್ ಅಂತಿಮ ಘಟ್ಟ ತಲುಪಿದೆ, ಕನ್ನಡ ಗೋದ್ರಾ ಸಿನಿಮಾದ ಶೂಟಿಂಗ್ ಇನ್ನು 5 ದಿನ ಬಾಕಿ ಉಳಿದಿದೆ.
”ನಿರ್ದೇಶಕರು ನಾನು ಬ್ಯುಸಿಯಾಗಿದ್ದೇನೆ ಎಂದುಕೊಳ್ಳುತ್ತಾರೆ, ಆದರೆ ನಾನು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗುತ್ತೀದ್ದೇನೆ, ಆಪರೇಷನ್ ಕನ್ನಡದ ಅಲಮೇಲಮ್ಮ ಮತ್ತು ತಮಿಳಿನ ವಿಕ್ರಮ್ ವೇದ ಸಿನಿಮಾಗಳು ನನ್ನ ಮನಸಿನ ಮೇಲೆ ಪರಿಣಾಮ ಬೀರಿವೆ, ಯಾವ ರೀತಿಯ ವಿಷಯವುಳ್ಳ ಪಾತ್ರಗಳನ್ನು ಆರಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತೆ ಮಾಡುತ್ತಿದ್ದೇನೆ.
ಹೊಸದನ್ನು ಪ್ರಯತ್ನಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಏಕೆಂದರೇ ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರ್ಯಾಂಪ್ ವಾಕ್ ಮಾಡಿದ್ದರು. ಅದೊಂದು ನಿಧಿ ಸಂಗ್ರಹ ಕಾರ್ಯಕ್ರಮವಾಗಿತ್ತು, ಹೀಗಾಗಿ ಅದರಲ್ಲಿ ಭಾಗವಹಿಸಿದ್ದೆ. ನಾನು ಯಾವುದೇ ಸಿನಿಮಾದಲ್ಲಿ ಒಂದು ಭಾಗವಾಗಿರಲು ಬಯಸುತ್ತೇನೆ, ನಾಯಕನಿಗೆ ನಾನು ಸ್ಪರ್ಧಿಯಲ್ಲ, ಆದರೆ ನಾಯಕನಷ್ಟೇ ನಾಯಕಿಗೂ ಕೂಡ ಸಮಾನ ಪ್ರಾಮುಖ್ಯತೆ ನೀಡಬೇಕು.
ಪರದೆ ಮೇಲೆ ಸಿಲ್ಲಿ ಥಿಂಗ್ಸ್ ಮಾಡುವುದು ನನಗೆ ಇಷ್ಟವಾಗುವುದಿಲ್ಲ, ಕಮರ್ಷಿಯಲ್ ಅಥವಾ ಸ್ವಾರಸ್ಯಕರ ಸಿನಿಮಾವೇ ಇರಲಿ, ನನ್ನ ಪಾತ್ರಕ್ಕೂ ಹೆಚ್ಚಿನ ಪ್ರಭಾವ ಬೀರಬೇಕು, ಸಿನಿಮಾದಲ್ಲಿ ಉತ್ತಮ ಪಾತ್ರ ನನ್ನದಾಗಿರಬೇಕು” ಎಂದು ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.