ನಟಿ ರಚಿತಾ ರಾಮ್ ಗೆ ಲವ್ ಆಗಿದೆಯಾ..??

ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಹೊಂದಿರುವ ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಗೆ ಲವ್ ಆಗಿದೆಯಂತೆ. ಹೀಗಂತ ಸುದ್ದಿಯೊಂದು ಬಂದಿದೆ. ಹರಣ್ ರಾಜ್ ಎಂಬುವವರ ಜೊತೆಗೆ ರಚಿತಾ ರಾಮ್ ಗೆ ಆಫೇರ್ ಇರುವ ಸಾಧ್ಯತೆ ದಟ್ಟವಾಗುತ್ತಿದೆ.

ಎರಡು ದಿನಗಳ ಹಿಂದೆ ನಡೆದ ‘ಭರ್ಜರಿ’ ಚಿತ್ರದ 50ನೇ ದಿನದ ಸಂಭ್ರಮದಂದು ಈತ ರಚಿತಾ ಜೊತೆಗಿದ್ದ. ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಹರಣ್ ರಾಜ್ ರ‍್ಯಾಂಕ್ ಸ್ಟುಡೆಂಟ್ . ರಾಜಕಾರಣಿಯೊಬ್ಬರ ಕುಟುಂಬಕ್ಕೆ ಹತ್ತಿರದ ಸಂಬಂಧಿಯಾಗಿರುವ ಹರಣ್ ರಾಜ್‍ಗೆ ರಚಿತಾ ಮಾತ್ರ ಅಲ್ಲ, ಇನ್ನು ಕೆಲವು ನಟಿಯರ ಪರಿಚಯವೂ ಇದೆಯಂತೆ. ರಚಿತಾಗಿಂತ ಈತ ಮೂರು ನಾಲ್ಕು ವರ್ಷ ಚಿಕ್ಕವ.

Image result for kannada actress rachita ram

ಇನ್ನು ಈ ಹಿಂದೆ ‘ಭರ್ಜರಿ’ ಖ್ಯಾತಿಯ ನಟ ಧ್ರುವ ಸರ್ಜಾ ಜೊತೆಗೂ ರಚಿತಾರ ನಂಟು ಇದೆ ಎಂಬ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಇನ್ನೇನು ಇವರಿಬ್ಬರು ಮದುವೆಯಾಗುತ್ತಾರೆ ಎನ್ನಲಾಗಿತ್ತು.

ಇನ್ನು ಹೊಸ ಆಫೇರ್ ಕುರಿತು ರಚಿತಾ ರಾಮ್ ಹೇಳುವುದು ಹೀಗೆ – ‘ ನಾನು ಆ ಇಶ್ಯೂ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಹುಡುಗ ನನ್ನ ಒಳ್ಳೆ ಸ್ನೇಹಿತ. ನನಗಿಂತ 4 ವರ್ಷ ಚಿಕ್ಕವನು. ನನ್ನ ತಂದೆ-ತಾಯಿ ಕೂಡ ತುಂಬಾ ಬೋಲ್ಡ್ ಆಗಿ ಇಂಥ ವಿಷ್ಯ ರಿಸೀವ್ ಮಾಡುತ್ತಾರೆ’ ಎನ್ನುತ್ತಾರೆ.

ಕೃಪೆ : ಮೂವಿ ಮಂತ್ರ

Leave a Reply