ಹಿಂದೂಗಳನ್ನು ಅಲ್ಪ ಸಂಖ್ಯಾತರನ್ನಾಗಿ ಪರಿಗಣಿಸಿ ಎಂದು ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಎಂಟು ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪ ಸಂಖ್ಯಾತರು ಎಂದು ಪರಿಗಣಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜನ್ ಗಗೋಯಿ ನೇತೃತ್ವದ ನ್ಯಾಯಪೀಠವು ಈ ವಿಷಯದ ಬಗ್ಗೆ ನಿರ್ಧರಿಸಬೇಕಾಗಿರುವುದು ಅಲ್ಪ ಸಂಖ್ಯಾತರ ರಾಷ್ಟ್ರೀಯ ಆಯೋಗ. ಈ ಬಗ್ಗೆ ಆಯೋಗವನ್ನು ಸಮೀಪಿಸಿ ಎಂದು ಹೇಳಿದೆ.

ಬಿಜೆಪಿ ನೇತಾರ ಮತ್ತು ನ್ಯಾಯವಾದಿಯಾದ ಅಶ್ವಿನಿ ಕುಮಾರ್ ಉಪಾಧ್ಯಾಯ್ ಎಂಬವರು ಈ ಬಗ್ಗೆ ಸುಪ್ರೀಂ ಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಲಕ್ಷದ್ವೀಪ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ , ಮೇಘಾಲಯ, ಜಮ್ಮು ಕಾಶ್ಮೀರ, ಮಣಿಪುರ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಇತರ ಧರ್ಮೀಯರಿಗೆ ಹೋಲಿಸಿದರೆ ಹಿಂದೂಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಹಿಂದೂಗಳನ್ನು ಅಲ್ಪ ಸಂಖ್ಯಾತರನ್ನಾಗಿ ಪರಿಗಣಿಸಬೇಕು.

 

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ₹20000 ಸ್ಕಾಲರ್‍‍ಶಿಪ್ ನೀಡುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಶೇ.68.30 ಮುಸ್ಲಿಮರಿದ್ದಾರೆ. ಇಲ್ಲಿರುವ 753 ಮುಸ್ಲಿಮರಲ್ಲಿ 717 ಮುಸ್ಲಿಮರಿಗೆ ಸರ್ಕಾರ ಸ್ಕಾಲರ್‍‍ಶಿಪ್ ನೀಡಿದೆ. ಆದರೆ ಒಂದೇ ಒಂದು ಹಿಂದೂ ವಿದ್ಯಾರ್ಥಿಗೆ ನೀಡಿಲ್ಲ ಎಂದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Leave a Reply