26ರ ಗುರುದತ್ ಗಣಿಗ ರವರ ಆಕ್ಷನ್ ಕಟ್ ಗೆ ಕಿಚ್ಚ ಸುದೀಪ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್.

ಹೊಸ ಪ್ರತಿಭೆಗಳ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಸುದೀಪ್ ಈ ಹೊಸ ಚಿತ್ರಕ್ಕಾಗಿ ನಿರ್ದೇಶಕರನ್ನ ಹುಡುಕುತ್ತಿದ್ದರು. ಬಹುಶಃ ಸ್ಟಾರ್ ಡೈರೆಕ್ಟರ್ ಗೆ ಈ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಶಾಕ್ ಕೊಟ್ಟಿರುವ ಸುದೀಪ್, 26 ವರ್ಷದ ಯುವ ನಿರ್ದೇಶಕನಿಗೆ ಚಾನ್ಸ್ ನೀಡಿದ್ದಾರಂತೆ. ಆ ಸಿನಿಮಾಗೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಎಂಬ ಟೈಟಲ್ ಕೂಡ ಇಡಲಾಗಿದೆ ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದರು.

ಹೌದು, ಸುದೀಪ್ ಮತ್ತು ಅಂಬಿ ಜೊತೆಗೂಡಿರುವ ಚಿತ್ರಕ್ಕೆ 26 ರ ಯುವ ನಿರ್ದೇಶಕ ಗುರುದತ್ ಗಣಿಗ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಕಿಚ್ಚನ ಮನೆಯಿಂದ ಹೊರಬಿದ್ದಿದೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಯಂಗ್ ಡೈರೆಕ್ಟರ್ ಕಾಲಿಡುತ್ತಿದ್ದಾರೆ. ಗುರುದತ್ ಗಣಿಗ ಅಲಿಯಾಸ್ ಗುರು ಸುಮಾರು 9 ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 6 ವರ್ಷದಿಂದ ಸುದೀಪ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ತಮ್ಮ ಸಹ ನಿರ್ದೇಶನ ಮೇಲೆ ನಂಬಿಕೆ ಇಟ್ಟು ಸುದೀಪ್ ಈ ಸಿನಿಮಾ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

Related image

‘ಅಂಬಿ ನಿಂಗ್ ವಯಸಾಯ್ತೋ’ ಚಿತ್ರದಲ್ಲಿ ಅಂಬರೀಶ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುದೀಪ್ ಅವರ ಕಾಣಿಸಿಕೊಳ್ಳುತ್ತಿದ್ದು, ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಬರುವ ಅಂಬರೀಶ್ ಪಾತ್ರವನ್ನ ಸುದೀಪ್ ನಿರ್ವಹಿಸಲಿದ್ದಾರೆ. ಅಂಬರೀಷ್ ಅವರಿಗೆ ನಾಯಕಿಯಾಗಿ ಸುಮಲತಾ ಅಂಬರೀಷ್ ಅಭಿನಯಿಸುತ್ತಿದ್ದಾರೆ. ಆದ್ರೆ, ಸುದೀಪ್ ಅವರಿಗೆ ನಾಯಕಿ ಯಾರಾಗ್ತಾರೆ ಎಂಬುದು ಕುತೂಹಲವಾಗಿದೆ. ಯಾಕಂದ್ರೆ, ಚಿತ್ರತಂಡ ಕಿಚ್ಚನ ನಾಯಕಿಗಾಗಿ ಹುಡುಕುತ್ತಿದೆ.

ಸದ್ಯ, ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿರುವ ಚಿತ್ರತಂಡ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ನಲ್ಲಿ ಶೂಟಿಂಗ್ ಶುರು ಮಾಡುವ ತಯಾರಿಯಲ್ಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದು, ಉಳಿದ ತಾಂತ್ರಿಕ ತಂಡವನ್ನ ಸದ್ಯದಲ್ಲೇ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ‘ಅಂಬಿ ನಿಂಗ್ ವಯಸಾಯ್ತೋ’ ಚಿತ್ರ ತಮಿಳಿನ ‘ಪವರ್ ಪಾಂಡಿ’ ಚಿತ್ರದ ರೀಮೇಕ್ ಎನ್ನಲಾಗಿದೆ. ಕನ್ನಡದ ನೆಟಿವಿಟಿಗೆ ತಕ್ಕಂತೆ ಬದಲಾವಣೆಯೊಂದಿಗೆ ಸಿನಿಮಾ ಮಾಡಲಿದ್ದಾರೆ.

Leave a Reply