ಬಾಹುಬಲಿ 2 ರೆಕಾರ್ಡ್ ಹಿಂದಿಕ್ಕಿದ ಸಲ್ಮಾನ್ ನ ಟೈಗರ್ ಜಿನ್ದಾ ಹೇ

ಮುಂಬೈ: ಸಲ್ಮಾನ್ ಖಾನ್ ನಾಯಕನಟನಾಗಿ ಅಭಿನಯಿಸುತ್ತಿರುವ ಆಕ್ಷನ್ ಪ್ರಧಾನ ಚಿತ್ರ ‘ಟೈಗರ್ ಜಿಂದಾ ಹೈ’. ಈ ಚಿತ್ರದ ನಾಯಕಿ ಕತ್ರಿನಾ ಕೈಫ್. ಅಲಿ ಅಬ್ಬಾಸ್ ಜಾಫರ್ ನಿರ್ದೇಶನವಿರುವ ಚಿತ್ರ. ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಟ್ರೇಲರ್‌ಗೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅದು ಯಾವ ಮಟ್ಟದಲ್ಲಿ ಎಂದರೆ ಹಿಂದಿಯಲ್ಲಿ ‘ಬಾಹುಬಲಿ 2’ ಟ್ರೇಲರ್ ದಾಖಲೆಯನ್ನು ಮೀರಿ ಲೈಕ್‌ಗಳನ್ನು ಪಡೆದುಕೊಂಡಿದೆ. ಇತ್ತೀಚೆಗಿನ ಅಂಕಿಅಂಶಗಳ ಪ್ರಕಾರ ‘ಟೈಗರ್ ಜಿಂದಾ ಹೈ’ ಟ್ರೇಲರನ್ನು 7 ಲಕ್ಷಕ್ಕಿಂತ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ‘ಬಾಹುಬಲಿ 2’ ಹಿಂದಿ ಚಿತ್ರಕ್ಕೆ ಇದುವರೆಗೆ ಇದ್ದ ಲೈಕ್ಸ್ 5 + ಲಕ್ಷ ಮಾತ್ರ.

‘ಟೈಗರ್ ಜಿಂದಾ ಹೈ’ ಚಿತ್ರಕ್ಕೆ ಯಶ್ ರಾಜ್ ಫಿಲಂಸ್ ಲಾಂಛನದಲ್ಲಿ ಆದಿತ್ಯ ಚೋಪ್ರಾ ನಿರ್ಮಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಈ ಸಿನಿಮಾವನ್ನು ಕ್ರಿಸ್ಮಸ್ ವೇಳೆಗೆ ಅಂದರೆ ಡಿಸೆಂಬರ್ 22ರಂದು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಶ್ರಮಿಸುತ್ತಿದೆ.

ಇದಕ್ಕೂ ಮುನ್ನ ತುಂಬಾ ನಿರೀಕ್ಷೆಗಳಿಂದ ಬಿಡುಗಡೆಯಾದ ಸಲ್ಮಾನ್ ಅಭಿನಯದ ‘ಟ್ಯೂಬ್‌ಲೈಟ್’ ಚಿತ್ರ ಬಾಕ್ಸ್ ಆಫೀಸಲ್ಲಿ ಗೋತಾ ಹೊಡೆದದ್ದು ಗೊತ್ತೇ ಇದೆ. ಆ ಸಂದರ್ಭದಲ್ಲಿ ಬಾಹುಬಲಿ ದಾಖಲೆಗಳನ್ನು ಟ್ಯೂಬ್‌ಲೈಟ್ ಮುರಿಯುತ್ತಾ ಎಂದು ಕೇಳಿದ್ದಕ್ಕೆ ‘ಅನುಮಾನ’ ಎಂದಿದ್ದರು ಸಲ್ಲು.

 

Leave a Reply