ಮಮತಾ – ಕಮಲ್ ಭೇಟಿ , ಕುತೂಹಲ ಕೆರಳಿಸಿದೆ

ಕೊಲ್ಕತ್ತಾ : ಖ್ಯಾತ ನಟ ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ತಮ್ಮ ಹುಟ್ಟು ಹಬ್ಬದಂದೇ ಮೊಬೈಲ್ ಆಪ್ ಹಾಗೂ ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ.

ರಾಜಕೀಯ ಪಕ್ಷ ಘೋಷಣೆ ಮಾಡುವ ಮುನ್ನ ತಮಿಳುನಾಡಿನಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿರುವ ಕಮಲ್ ಹಾಸನ್, ಜನ ಸಾಮಾನ್ಯರ ಸೇವೆಯೇ ರಾಜಕೀಯವೆಂದು ತಾವು ಭಾವಿಸಿರುವುದಾಗಿ ಹೇಳಿದ್ದಾರೆ.

ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರನ್ನು ಭೇಟಿ ಮಾಡಿದ್ದ ಕಮಲ್ ಹಾಸನ್, ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಗಮಿಸಿರುವ ಕಮಲ್ ಹಾಸನ್, ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿದ್ದು, ಈ ವೇಳೆ ತಾವು ಮಮತಾ ಬ್ಯಾನರ್ಜಿಯವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ರ ನಡೆಯನ್ನು ಗಮನಿಸುತ್ತಿರುವ ರಾಜಕೀಯ ಪಂಡಿತರು, ಬಿಜೆಪಿ ಹೊರತುಪಡಿಸಿ ಇತರೆ ಪಕ್ಷಗಳ ಜೊತೆ ಕಮಲ್ ಹಾಸನ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇರುವಂತಿದೆ ಎಂದಿದ್ದಾರೆ.

 

Leave a Reply