​ದಯವಿಟ್ಟು ನಮ್ಮನ್ನು ಕ್ಷಮಿಸಿ ಕುಮಾರಣ್ಣ,ನೀವೇ ಮುಂದಿನ ಸಿಎಂ…


ಹೌದು ನಾನ್ನೊಬ್ಬ ರೈತನ ಮಗನಾಗಿ ಒಬ್ಬ ಕನ್ನಡಿಗನಾಗಿ ನಿಮ್ಮಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ.. ಕ್ಷಮೆ ಕೇಳುವ ತಪ್ಪು ನಾ ಏನು ಮಾಡಿಯೇ ಎಂದು ತಮಗೆ ಆಶ್ಚರ್ಯವಾಗಬಹುದು, ಹೌದು ನಾ ಅಂತಹ ತಪ್ಪು ಮಾಡಿದ್ದೇನೆ!
ನಾ ಉತ್ತರ ಕರ್ನಾಟಕ ಭಾಗದ ಒಂದು ಸಣ್ಣ ಹಳ್ಳಿಯಿಂದ  ಬಂದ ಬಡ ಲಿಂಗಾಯಿತ ಕುಟುಂಬದವ. 2006 ನೇ ಇಸವಿಯಲ್ಲಿ ನಾ ಅನೇಕ ಕಷ್ಟಗಳನ್ನು ಎದುರಿಸಿ ನನ್ನ ಪಿಯುಸಿ ಸೇರಿದ್ದೇ,  ಅದೇ ಸಮಯದಲ್ಲಿ ನೀವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು  ಮುಖ್ಯಮಂತ್ರಿ ಗದ್ದುಗೆ ಏರಿದ್ದು. ಅಲ್ಲಿಯವರೆಗೂ ನನಗೆ ರಾಜಕೀಯ ಬಗ್ಗೆ ಅಂತ ಆಸಕ್ತಿ ಇರಲಿಲ್ಲ, ನಿಜ ಹೇಳಬೇಕು ಅಂದ್ರೆ ನಮ್ಮ ಭಾಗದದಲ್ಲಿ ಕುಮಾರಸ್ವಾಮಿ ಯಾರು ಅಂತ ಕೂಡ ಎಷ್ಟೋ ನನ್ನಂತ ಯುವಕರಿಗೆ ಗೊತ್ತಿರಲಿಲ್ಲ.  ಆದರೆ ಅದೇ ನಿಮ್ಮ 20 ತಿಂಗಳ ಆಡಳಿತದ ನಂತರ ಕೇವಲ ಉತ್ತರ ಕರ್ನಾಟಕ ಮಾತ್ರ ಅಲ್ಲ ನೆರೆ ಹೊರೆ ರಾಜ್ಯದ ಯುವಕರಿಗೂ ಈ ಕುಮಾರಸ್ವಾಮಿ ಯಾರು ಅನ್ನೋ ಮಟ್ಟದ ಆಡಳಿತ ತಾವು ಕೊಟ್ಟಿರಿ ಎಂದರೆ ಅದು ಸುಳ್ಳಲ್ಲ. ನನ್ನಂತ ಎಷ್ಟೋ ಯುವಕರು ರಾಜಕೀಯ ಆಸಕ್ತಿ ಬೆಳೆಸಿಕೊಂಡದ್ದು ನಿಮ್ಮಿಂದ ಕುಮಾರಣ್ಣ, ಇದನ್ನು ಯಾವ ವೇದಿಕೆಯಲ್ಲಿ ನಿಂತು ಎಷ್ಟು ಕೋಟಿ ಜನರ ಮುಂದೆ ಬೇಕಿದ್ರೂ ನಾ ಹೇಳಲು ಸಿದ್ದ. 

ತಮ್ಮ 20 ತಿಂಗಳ ಆಡಳಿತ ಅಷ್ಟು ಮನೋಜ್ಞವಾಗಿತ್ತು.  ಆದರೆ ಅಂದು ಮಾತಿನ ಪ್ರಕಾರ ತಮ್ಮ ಅಧಿಕಾರ ಅವಧಿ ಮುಗಿದ ನಂತರ ಎಷ್ಟೋ ಗೊಂದಲಗಳಾಯ್ತು, ತಾವು ಬಿಜೆಪಿ ಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ, ಯಡಿಯೂರಪ್ಪನವರಿಗೆ ದ್ರೋಹ ಬಗೆದಿರಿ ಎಲ್ಲೆಡೆ ಅಧಿಕಾರ ವಂಚಿತ ಬಿಜೆಪಿ ನಾಯಕರು ಪ್ರಚಾರ ಮಾಡಿದರು. ಒಬ್ಬ ವೀರಶೈವ ಮುಖಂಡ ಮುಖ್ಯಮಂತ್ರಿ ಆಗೋದನ್ನ ಕುಮಾರಸ್ವಾಮಿ ತಡೆದರು ಅಂತ ಅದಕ್ಕೆ ಜಾತಿ ಬಣ್ಣ ಕೂಡ ಬಳಿಯಲಾಯ್ತು!  ಆ ಕ್ಷಣದಲ್ಲಿ ನನಗೆ ನಿಮ್ಮ ಮೇಲಿದ್ದ ಅಷ್ಟು ಅಭಿಮಾನ ಒಂದೇ ಸಾರಿ ಕುಸಿದು ಬಿತ್ತು, ಛೆ ನಾನು ನಂಬಿದ ನಾಯಕ ಈ ರೀತಿ ನಮ್ಮ ಜಾತಿಯ ನಾಯಕನಿಗೆ ಮೋಸ ಮಾಡಿದ್ರ ಅನ್ನೋ ಮಟ್ಟಕ್ಕೆ ನನ್ನ ಚಿಂತನೆ ಇಳಿದಿತ್ತು. ಜಾತಿ ಎಂಬ ಮಂಕು ಬೂದಿ ನಮ್ಮನ್ನು ಆವರಿಸಿ ನಿಮ್ಮ ಆ 20 ತಿಂಗಳ ಆಡಳಿತ ಮರೆಮಾಚುವಂತೆ ಬಿಜೆಪಿ ನಾಯಕರು ನಮ್ಮ ತಲೆ ಕೆಡಿಸಿದರು. ಅಂದಿನಿಂದ ಇಂದಿನವರೆಗೂ ನಮಗೆ ತಿಳಿಯದಂತೆ ನಿಮ್ಮ ಮೇಲೆ ಒಂದು ದ್ವೇಷ ಭಾವನೆ ಶುರುವಾಯ್ತು. 

ತದನಂತರದ ದಿನಗಳಲ್ಲಿ ಅನುಕಂಪದ ಅಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು, ೫ ವರ್ಷ ಅವರು ಮಾಡಿದಾದ್ರು ಏನು ಅಂತ ನಾ ಹೇಳಲು ಬಯಸೊಲ್ಲ ಅದು ಎಲ್ಲರಿಗೂ ಗೊತ್ತಿರೋ ವಿಚಾರ. ಆಮೇಲೆ ಸನ್ಮಾನ್ಯ ಯಡಿಯೂರಪ್ಪ ಅವರು ನಮ್ಮ ವೀರಶೈವ ಲಿಂಗಾಯಿತ ಜನಾಂಗವನ್ನು ಹೇಗೆ ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಂಡರು ಬಿಜೆಪಿ ಕೆಜೆಪಿ ಅಂತ ನಮ್ಮನ್ನು ಹೇಗೆ ಕವಡೆ ತರ ಆಡಿಸಿದರು ಎಂದು ಗೊತ್ತಿರೋ ವಿಚಾರ. ಆದ್ರೆ ಪ್ರಸ್ತುತ ವಿಷಯ ಅದಲ್ಲ, 2007 ರಲ್ಲಿ ತಾವು ವಚನ ಭ್ರಷ್ಟ ಎಂದು ಹೇಳಿ ಎಲ್ಲಾ ಕಡೆ ಅದನ್ನೇ ಪ್ರಚಾರ ಮಾಡಿದ ಯಡಿಯೂರಪ್ಪ ಅವರ ಒಂದು ಭಾಷಣದ ತುಣಕು ನಾ ಕಂಡೆ, ಅದರಲ್ಲಿ ಅವರು ಹೇಳುವರು  ” ಕೊಟ್ಟ ಮಾತಿನ ಪ್ರಕಾರ ಅಂದು ಕುಮಾರಸ್ವಾಮಿ ಪಾಪ ನನಗೆ ಅಧಿಕಾರ ಹಸ್ತಾಂತರ ಮಾಡುದ್ರು ಆದರೆ, ನನ್ನ ಏಳಿಗೆ ಸಹಿಸಲಾಗದ ನಮ್ಮ ಪಕ್ಷದ ನಾಯಕರಾದ ಈಶ್ವರಪ್ಪ,  ಅನಂತ್ ಕುಮಾರ್  ಅವರು ಸರ್ಕಾರಕ್ಕೆ ಇಲ್ಲಸಲ್ಲದ ಷರತ್ತು ವಿಧಿಸಿದರು. ಅಂದು ಜೆಡಿಎಸ್ ಈ ಹಿಂದೆ ಅನುಷ್ಠಾನಗೊಂಡಿದ್ದ ಯೋಜನೆಗಳನ್ನು ಪೂರ್ಣಗೊಳಿಸುವ ಸಲುವಾಗಿ ಕೆಲವು ಪ್ರಮುಖ ಖಾತೆಗಳನ್ನು ತನ್ನಲೇ ಉಳಿಸಿಕೊಳ್ಳುವ ಮನವಿ ಮಾಡಿತು, ಆದರೆ ಅನಂತ್ ಕುಮಾರ್ ಹಾಗು ಇತರೆ ನಾಯಕರು ಇದಕ್ಕೆ ಕ್ಯಾತೆ ತೆಗೆದು ಮೈತ್ರಿ ಮುರಿಯುವ ಹಾಗೆ ಮಾಡುವಲ್ಲಿ ಯಶಸ್ವಿಯಾದರು” ಎಂದು. 
ಅಲ್ಲ ಸ್ವಾಮಿ ಯಡಿಯೂರಪ್ಪ ಅವ್ರೆ, ತಾವು ಮಾಡಿದ್ದೂ ಸರಿಯೇ? ತಮ್ಮ ಪಕ್ಷದ ನಾಯಕರೇ ಕಾರಣ ಎಂದು ಗೊತ್ತಿದ್ದೂ ಕರ್ನಾಟಕ ಕಂಡಂತ ಒಬ್ಬ ಪ್ರಜ್ಞಾವಂತ ನಾಯಕನ ರಾಜಕೀಯ ಜೀವನವನ್ನು ತಮ್ಮ ಒಂದು ಸುಳ್ಳಿನಿಂದ 10  ವರ್ಷ ಮೂಲೆ ಗುಂಪು ಮಾಡಿದ್ದು ಹುಸಿಯ ನುಡಿಯಬೇಡ ಎಂದು ಪ್ರತಿಪಾದಿಸಿದ್ದ ಅಣ್ಣ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ ಮೆಚ್ಚುವರೇ?? 
ಕುಮಾರಣ್ಣ, ದಯಮಾಡಿ ಸಾಧ್ಯವಾದರೆ ನನ್ನನ್ನು ಕ್ಷಮಿಸಿಬಿಡಿ. ಜಾತಿಯೆಂಬ ಮೂಢತೆಗೆ ಬಲಿಯಾಗಿ ನಿಮ್ಮಂತ ಶ್ರೇಷ್ಠ ನಾಯಕನನ್ನು 10 ವರ್ಷ ಅಧಿಕಾರದಿಂದ ದೂರವಿಟ್ಟು ತಪ್ಪು ಮಾಡಿದ್ದೇನೆ! ನನ್ನಂತೆ ಎಷ್ಟೋ ಯುವಕರಿಗೆ ಇಂದು ಅವರ ತಪ್ಪಿನ ಅರಿವಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ನಮಮ್ ಕ್ಷೆತ್ರಕ್ಕೆ ಕೊಟ್ಟ ಪದವಿ ಕಾಲೇಜಿನಲ್ಲೇ ನಾ ಓದಿದೆ, ತಾವು ಕೊಟ್ಟ ಸೈಕಲ್ ಅಲ್ಲೇ ನನ್ನ ಸಹೋದರಿ ಶಾಲೆಗೆ ಹೋದಳು, ಆದರೂ ಇದ್ಯಾವುದು ಅಂದು ನನ್ನ ಕಣ್ಣು ತೆರೆಸಲಿಲ್ಲ ಈಗ ೧೦ ವರ್ಷದ ನಂತರ ಎರಡು ರಾಷ್ಟೀಯ ಪಕ್ಷಗಳ ಈ ಸುಳ್ಳು ಭರವಸೆ ಹಾಗು ಭ್ರಷ್ಟ ಆಡಳಿತ ನೋಡಿದ ಮೇಲೆ ನನಗೆ ನೀವು ಕೊಟ್ಟಂತ ಅಂದಿನ ಆಡಳಿತ ಕಾಡುತ್ತಿದೆ.  ಒಂದು ಸುಳ್ಳಿನ ಪ್ರಚಾರಕ್ಕೆ ನಾನು ನಂಬಿದ ನಾಯಕನನ್ನು ನಾನೇ ದ್ವೇಷ ಮಾಡುವ ಮಠಕ್ಕೆ ನಾನು ಮೂರ್ಖನಾದೆನೇ ಎಂದು ನನ್ನ ಮೇಲೆ ನಾನೇ ಅಸಹ್ಯ ಪಟ್ಟದ್ದು ಸುಳ್ಳಲ್ಲ. 
ಕುಮಾರಣ್ಣ ದಯವಿಟ್ಟು ನನ್ನನು ಕ್ಷಮಿಸಿ, ಏನೇ ಆಗಲಿ ಈ ಬಾರಿ ನಿಮ್ಮ ಅಗತ್ಯ ನಮ್ಮ ರಾಜ್ಯಕ್ಕಿದೆ. ನಾ ಯಾವುದೇ ಜಾತಿ ಧರ್ಮ ಕುಲದ ಮಾತುಗಳಿಗೆ ಈ ಬಾರಿ ಮರುಳಾಗೋಲ್ಲ, ನಮಮ್ ಜನರನ್ನು ಆಗೋಕೆ ಬಿಡೋದಿಲ್ಲ. ಅಖಂಡ ಕರ್ನಾಟಕದ ಅಭಿವೃದ್ಧಿ ಕೇವಲ ನಿಮ್ಮಿಂದ ಮಾತ್ರ ಸಾಧ್ಯ!  ನಾ ಇಂದು ಸರಕೃ ಕೆಲಸದಲ್ಲಿ ಇರುವೆ, ಹಾಗಾಗಿ ನಾನು ನನ್ನ ಹೆಸರು ಹೇಳುವಂತಿಲ್ಲ, ಆದರೂ ಚಿಂತೆಯಿಲ್ಲ ನಿಮಗಾಗಿ ನಾ ಹಗಲು ರಾತ್ರಿ ಶ್ರಮಿಸಿ ನಾ ಅಂದು ನಿಮಗೆ ೧೦ ವರ್ಷ ರಾಜಕೀಯ ವನವಾಸ ಕೊಟ್ಟ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸದವಕಾಶ ದೊರಗಿದೆ. ನೀವೇ ನಮ್ಮ ಮುಂದಿನ ಮುಖ್ಯಮಂತ್ರಿ, ನೀವೇ ಯುವಕರ ದಾರಿದೀಪ.  ತಮ್ಮ ಕ್ಷಮೆ ಇರಲಿ, 
ಇಂತಿ,

ನಿಮ್ಮವ

5 thoughts on “​ದಯವಿಟ್ಟು ನಮ್ಮನ್ನು ಕ್ಷಮಿಸಿ ಕುಮಾರಣ್ಣ,ನೀವೇ ಮುಂದಿನ ಸಿಎಂ…

 1. Pemmareddy says:

  We want 2006 government back 20 20 HDK anna 2018

 2. Karnataka uddara agbeku andre jathi rajakarana tholugbeku andre kumarannane barbeku 2018 my boss is back

 3. Gangaraju says:

  Jayavagali Kumaranna ge.

 4. Nuthan MS says:

  Very true. . Finally truth came out. . People should understand. . This time vote for JDS

 5. Nagendra thumbnalli says:

  Jds ge jayavagalli

Leave a Reply