ಶಿವನ ಭಕ್ತ ನಾನು : ರಾಹುಲ್ ಗಾಂಧಿ.

ಅಹ್ಮದಾಬಾದ್, ನವೆಂಬರ್ 13: ಗುಜರಾತ್ ನಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದರ್ ಯಾದವ್, ಇದೆಲ್ಲ ಚುನಾವಣೆ ಗಿಮಿಕ್ ಎಂದಿದ್ದರು. “ನಾನು ಶಿವನ ಭಕ್ತ. ಬಿಜೆಪಿ ಏನು ಬೇಕಾದರೂ ಹೇಳಿಕೊಳ್ಳಲಿ. ಆದರೂ ನಾನು ಪ್ರಾಮಾಣಿಕನಾಗೇ ಇರ್ತೇನೆ” ಎಂದು ರಾಹುಲ್ ಗಾಂಧಿ ಮಾಧ್ಯಮದವರಿಗೆ ಉತ್ತರಿಸಿದ್ದಾರೆ.

“ರಾಹುಲ್ ಗಾಂಧಿಗೆ ಚುನಾವಣೆ ಸಮಯದಲ್ಲಿ ದೇವಾಲಯ ನೆನಪಾಗುತ್ತೆ” “ಕಾಂಗ್ರೆಸ್ ನ ಸ್ಟಾರ್ ಪ್ರಚಾರಕ ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಭಾಗವಾದ ಇದು ಒಳ್ಳೆಯದು. ಆದರೆ ಇದು ಯಾವುದೇ ವ್ಯಕ್ತಿಗೆ ಸಹಜವಾಗಿ ಬರಬೇಕು ಮತ್ತು ಚುನಾವಣೆ ವೇಳೆಯಲ್ಲಿ ಮಾತ್ರವಲ್ಲ” ಎಂದಿದ್ದರು.

ಗುಜರಾತ್ ನ ಅಂಬಾಜಿ ದೇಗುಲ ಹಾಗೂ ಅಕ್ಷರಧಾಮಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಇಂಥ ಅಭಿಪ್ರಾಯ ವ್ಯಕ್ತವಾಗಿತ್ತು. ಅಕ್ಷರ ಧಾಮ ದೇವಾಲಯಕ್ಕೆ ಪಟೇಲ್ ಸಮುದಾಯದವರು ನಡೆದುಕೊಳ್ಳುತ್ತಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ.

 

Leave a Reply