ತೆಲುಗಿನ ಅಲ್ಲು ಸಿರೀಶ್ ಅಭಿನಯಿಸುತ್ತಿರುವ ‘ಒಕ ಕ್ಷಣಂ’ ಚಿತ್ರದ ಶೂಟಿಂಗ್ ಸೆಟ್ ಗೆ ಪವರ್ ಸ್ಟಾರ್ ಪುನೀತ್ ಭೇಟಿ ನೀಡಿದ್ದಾರೆ. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಟಗರು’ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಲ್ಲು ಸಿರೀಶ್, ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ. ಅದು ಪುನೀತ್ ರಾಜ್ ಕುಮಾರ್ ಅಥವಾ ಶಿವರಾಜ್ ಕುಮಾರ್ ಅವರ ಜೊತೆ ಡೆಬ್ಯೂ ಮಾಡಬೇಕು ಎಂದು ಹೇಳಿಕೊಂಡಿದ್ದರು. ಹೀಗಾಗಿ, ಈ ಭೇಟಿ ಸಹಜವಾಗಿ ಕುತೂಹಲ ಮೂಡಿಸಿದೆ.
ಅಲ್ಲು ಸಿರೀಶ್ ಅಭಿನಯಿಸುತ್ತಿರುವ ‘ಒಕ ಕ್ಷಣಂ’ ಚಿತ್ರದಲ್ಲಿ ಪುನೀತ್ ಏನಾದರೂ ವಿಶೇಷ ಪಾತ್ರ ಮಾಡಿರಬಹುದಾ? ಎಂಬ ಪ್ರಶ್ನೆ ಈಗ ಉದ್ಬವಿಸಿದ್ದು, ಚಿತ್ರತಂಡವೇ ಉತ್ತರಿಸಬೇಕಾಗಿದೆ.
ಇನ್ನು ಭಾನುವಾರ ಕನ್ನಡ ನಟಿಯರು ಅಯೋಜಿಸಿದ್ದ ಬಟ್ಟೆ ಮಾರಾಟ ಸ್ಥಳಕ್ಕೆ ನಟ ಅಲ್ಲು ಸಿರೀಶ್ ಕೂಡ ಹೋಗಿದ್ದರು. ಈ ವೇಳೆ ಶ್ರುತಿ ಹರಿಹರನ್, ಸಂಯುಕ್ತ ಹೊರನಾಡು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸಿರೀಶ್ ಅವರು ಚಿತ್ರದ ಚಿತ್ರೀಕರಣ ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಡೀ ಚಿತ್ರತಂಡ ಶೂಟಿಂಗ್ ನಲ್ಲಿ ಭಾಗವಹಿಸಿತ್ತು. ಈಗ ಬೆಂಗಳೂರು ಶೆಡ್ಯೂಲ್ ಯಶಸ್ವಿಯಾಗಿ ಮುಗಿಸಿದೆ ಎನ್ನಲಾಗಿದೆ.
ಕೃಪೆ :ಮೂವಿ ಮಂತ್ರ