ಹದಿನಾರು ವರ್ಷದ ನಂತರ ಮತ್ತೆ ಅಂಬರೀಶ್ ಹಾಗೂ ಮಾಲಾಶ್ರೀ ಒಟ್ಟಿಗೆ ರೋಮಿಯೋ ಸಾಂಗ್ ಗೆ ಡ್ಯಾನ್ಸ್…

ಸ್ಯಾಂಡಲ್ ವುಡ್ ನ ‘ಉಪ್ಪು ಹುಳಿ ಖಾರ’ ಸಿನಿಮಾದ ಇಂಟ್ರೊಡಕ್ಷನ್ ಟೀಸರ್ ಇಂದು ಬಿಡುಗಡೆಯಾಗಿದೆ. ತಿಂಗಳ ಕೊನೆಯಲ್ಲಿ ಈ ಚಿತ್ರವು ತೆರೆಗೆ ಬರಲಿದ್ದು ಸಕತ್ ನೀರೀಕ್ಷೆಯನ್ನು ಜನರಲ್ಲಿ ಹುಟ್ಟುಹಾಕಿದೆ. ಟೀಸರ್ ಲಾಂಚ್ ಮಾಡುವುದರ ಜೊತೆಯಲ್ಲಿ ಮಾಲಾಶ್ರೀ ಜೊತೆ ಅಂಬಿ ರೋಮಿಯೋ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

Image result for ambarish dance with malashree

ಸಿನಿಮಾದ ಟೀಸರ್ ರಿಲೀಸ್ ಮಾಡಿ ಶುಭಾಶಯ ಕೋರುವುದರ ಜೊತೆಯಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿ ‘ಉಪ್ಪು ಹುಳಿ ಖಾರ’ ಸಿನಿಮಾಗೆ ಪ್ರಮೋಷನ್ ಕೂಡ ಮಾಡಿದ್ದಾರೆ ಅಂಬರೀಶ್. ಹದಿನಾರು ವರ್ಷದ ನಂತರ ಮತ್ತೆ ಅಂಬರೀಶ್ ಹಾಗೂ ಮಾಲಾಶ್ರೀ ಒಟ್ಟಿಗೆ ಡ್ಯಾನ್ಸ್ ಮಾಡಿರುವುದು ಸಂತಸ ಮೂಡಿಸಿದೆ.

ಇಮ್ರಾನ್ ಸರ್ದಾರಿಯಾ ನಿರ್ದೇಶನದ ‘ಉಪ್ಪು ಹುಳಿ ಖಾರ’ ಇದೇ ತಿಂಗಳ 24 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು ಅನುಶ್ರೀ, ಮಾಲಾಶ್ರೀ, ಜಯಶ್ರೀ, ಶರತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ರೋಮಿಯೋ ಹಾಡು ಈಗಾಗಲೇ ಸಖತ್ ವೈರಲ್ ಆಗಿದ್ದು ಅಂಬಿ ಕೂಡ ಆ ಹಾಡಿಗೆ ಹೆಜ್ಜೆ ಹಾಕಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.

Leave a Reply