62 ರಲ್ಲಿ ತಂದೆಯಾಗಿರುವ ‘ಮಿಸ್ಟರ್ ಬೀನ್ ‘ ಖ್ಯಾತಿಯ ರೋವನ್ ಅಟ್ಕಿನ್‍ಸನ್

‘ಮಿಸ್ಟರ್ ಬೀನ್’ ಪಾತ್ರದ ಮೂಲಕ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ ರೋವನ್ ಅಟ್ಕಿನ್‍ಸನ್. ಇದೀಗ ತನ್ನ 62ನೇ ವಯಸ್ಸಿನಲ್ಲಿ ಈ ಹಾಲಿವುಡ್ ನಟ ಶೀಘ್ರದಲ್ಲೇ ಮೂರನೇ ಸಲ ತಂದೆಯಾಗುತ್ತಿದ್ದಾನೆ.

ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿರುವ ರೋವನ್, ಸದ್ಯಕ್ಕೆ 33 ವರ್ಷದ ಲೂಯಿಸ್ ಫೋರ್ಡ್ ಜತೆ ಸಹಜೀವನ ನಡೆಸುತ್ತಾರೆ. ಕಳೆದ ಭಾನುವಾರ ಉತ್ತರ ಲಂಡನ್‌ನಲ್ಲಿನ ಒಂದು ಶಾಪಿಂಗ್ ಮಾಲ್‌ನಲ್ಲಿ ಲೂಯಿಸ್ ಕಾಣಿಸಿಕೊಂಡಿದ್ದು ಆಕೆ ಗರ್ಭಿಣಿ ಎಂಬುದು ಇಡೀ ಜಗತ್ತಿಗೆ ಜಾಹೀರಾಗಿದೆ.

Image result for mr.bean

ಆದರೆ ಈ ಬಗ್ಗೆ ರೋವನ್, ಲೂಯೀಸ್ ಈ ಸುದ್ದಿಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ರೋವನ್‌ಗೆ ಈಗಾಗಲೆ 25 ವರ್ಷದ ಮಗ, 21 ವರ್ಷದ ಮಗಳು ಇದ್ದಾರೆ. ರೋವನ್ ಮೊದಲ ಪತ್ನಿ ಹೆಸರು ಸುನೇತ್ರಾ ಶಾಸ್ತ್ರಿ ಆಂಗ್ಲೋ ಇಂಡಿಯನ್ ಎಂಬುದು ವಿಶೇಷ.

ಇಂಗ್ಲೆಂಡಿನ ಆಕ್ಸ್‌ಫರ್ಡ್ ಶೈರ್‌ನಲ್ಲಿ 18.94 ದಶಲಕ್ಷ ಡಾಲರ್ ವೆಚ್ಚದಲ್ಲಿ ತನ್ನ ಮೊದಲ ಪತ್ನಿ ಸುನೇತ್ರಾ ಜತೆ ಜಂಟಿಯಾಗಿ ನಿರ್ಮಿಸುತ್ತಿದ್ದ ಐಶಾರಾಮಿ ಮನೆಯ ವಿಚಾರದಲ್ಲಿ ಜಗಳ ಅಡಿಕೊಂಡ ಕಾರಣ ಇವರಿಬ್ಬರ ಮದುವೆ ಮುರಿದುಬಿದ್ದಿತ್ತು. 2014ರಲ್ಲಿ ಸುನೇತ್ರಾದಿಂದ ವಿಚ್ಛೇದಿತನಾದ ಬಳಿಕ ಲೂಯೀಸ್ ಜತೆ ರೋವನ್ ಡೇಟಿಂಗ್ ಆರಂಭಿಸಿ ಈಗ ಸಹಜೀವನ ನಡೆಸುತ್ತಿದ್ದಾರೆ.

ಕೃಪೆ : ವಿಜಯ ಕರ್ನಾಟಕ

Leave a Reply