ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ಡಿ.29 ಬಹಳ ಸ್ಪೆಷಲ್ ಡೇ ಎನ್ನಲಾಗಿದೆ. ಇದಕ್ಕೆ ಕಾರಣವೇನೆಂದರೆ ಹನ್ನೆರಡು ವರ್ಷಗಳ ಹಿಂದೆ ಡಿ. 29 ರಂದು ಮುಂಗಾರುಮಳೆ ಸಿನಿಮಾ ತೆರೆ ಕಂಡು ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ಗಣೇಶ್ ರವನ್ನು ಓರ್ವ ಸ್ಟಾರ್ ನಟನನ್ನಾಗಿ ಮಾಡಿತ್ತು.
ಹೀಗಾಗಿ ಬಹುನೀರಿಕ್ಷಿತ ಸಿನಿಮಾ ಚಮಕ್ ಕೂಡ ಡಿ. 29 ರಂದು ತೆರೆ ಕಾಣುತ್ತಿದೆ ಎನ್ನಲಾಗಿದೆ. ಸಿಂಪಲ್ ಸುನಿ ಚಮಕ್ ಸಿನಿಮಾವನ್ನು ನಿರ್ದೇಶಿಸಿದ್ದು, ನಾಯಕನಾಗಿ ಗಣೇಶ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.
ಎರಡು ಡಿಫರೆಂಟ್ ಶೇಡ್ ಗಳಲ್ಲಿ ಇಬ್ಬರು ಕಾಣಿಸಿಕೊಂಡಿದ್ದು, ಡಿಸೆಂಬರ್ 29 ರಂದು ತೆರೆ ಮೇಲೆ ಬರುತ್ತಿದೆ.