ಸ್ಯಾಂಡಲ್ ವುಡ್ ನಲ್ಲಿ ಶ್ರೀಮನ್ ನಾರಾಯಣನಾಗಿ ರಕ್ಷಿತ್ ಶೆಟ್ಟಿ..

ನಟ ರಕ್ಷಿತ್ ಶೆಟ್ಟಿಯವರು ಈಗ ಸ್ಯಾಂಡಲ್ ವುಡ್ ನಲ್ಲಿ ಶ್ರೀಮನ್ ನಾರಾಯಣನಾಗಿ ಕಾಣಿಸಿ ಕೊಳಲ್ಲು ಸಿದ್ಧವಾಗಿದ್ದಾರೆ. ಹೌದು, ‘ಅವನೇ ಶ್ರೀಮನ್ ನಾರಾಯಣ್’ ಎಂಬ ಹೊಸ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ 80 ರ ದಶಕದ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Image result for avane srimannarayana

ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರಕ್ಷಿತ್ ಶೆಟ್ಟಿಯ ಈ ಹೊಸ ಸಿನಿಮಾದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಲಿದ್ದಾರೆ. ಅಚ್ಚುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಮರಾವತಿ ಎಂಬ ಕಾಲ್ಪನಿಕ ಪಟ್ಟಣದಲ್ಲಿರುವ ಭ್ರಷ್ಟ ಪೊಲೀಸ್ ಆಫೀಸರ್ ಕತೆ ಈ ಚಿತ್ರದ್ದಾಗಿದೆ.

ಒಟ್ಟಿನಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಗಮನ ಸೆಳೆದಿದ್ದ ನಟ ರಕ್ಷಿತ್ ಶೆಟ್ಟಿ ಈಗ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

Leave a Reply