ಕಾಡು ಪ್ರಾಣಿ ನೋಡಿ ಹೆದರ್ತಿದ್ದ ಜನ ಈಗ ಮೋದಿ ದೆಸೆಯಿಂದ ಹಸು ನೋಡಿ ಹೆದರ್ತಿದ್ದಾರೆ : ಲಾಲೂ

ಪಾಟ್ನಾ, ನವೆಂಬರ್ 20 : ಇಷ್ಟು ದಿನ ಸಿಂಹ, ಹುಲಿಗಳನ್ನು ನೋಡಿ ಭಯಪಡುತ್ತಿದ್ದ ಜನರು ಇಂದು ಗೋವನ್ನು ನೋಡಿದರೂ ಹೆದರುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪ್ರಧಾನಿ ಮೋದಿಯೇ ಕಾರಣ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್‌ ಹೇಳಿದ್ದಾರೆ.

ಪಾಟ್ನಾದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಲಾಲೂ ಮೋದಿ ವಿರುದ್ದ ಹರಿಹಾಯ್ದಿದ್ದಾರೆ. ಮೊದಲೆಲ್ಲ ಕ್ರೂರ ಪ್ರಾಣಿಯಾದ ಸಿಂಹವನ್ನು ನೋಡಿದರೆ ಹೆದರುತ್ತಿದ್ದರು. ಆದರೆ ಈಗ ಮೋದಿಯಿಂದಾಗಿ ಹಸುವನ್ನು ನೋಡಿದರೂ ಹೆದರುವಂತಾಗಿದೆ. ಮೋದಿ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವುದಾಗಿ ಟೀಕಿಸಿದ್ದಾರೆ.

2014ರಲ್ಲಿ ಚುನಾವಣೆ ವೇಳೆ ಮೋದಿ ಭರವಸೆಗಳ ಸುರಿಮಳೆ ಹರಿಸಿದ್ದರು. ಆದರೆ ಇದುವರೆಗೂ ಒಂದನ್ನೂ ಈಡೇರಿಸಿಲ್ಲ. ಜಿಎಸ್‌ಟಿ, ನೋಟು ನಿಷೇಧದಂತಹ ಕೆಲಸಗಳಿಂಗ ಜನರು ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮಾತ್ರ ಅಧಿಕಾರಕ್ಕೆ ಬರುವುದಿಲ್ಲ. ಚುನಾವಣೆ ಯಾವಾಗ ನಡೆದರೂ ಬಿಜೆಪಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ನಾವು ಕೋಮುವಾದಿ ಪಕ್ಷವನ್ನು ಸೋಲಿಸಿಯೇ ಸಿದ್ದ ಎಂದಿದ್ದಾರೆ ಜೊತೆಗೆ, ಮಾಧ್ಯಮಗಳು ಬಿಜೆಪಿಯ ಬಣ್ಣವನ್ನು ಬಯಲು ಮಾಡಬೇಕು. ಆದರೆ ಮಾಧ್ಯಮಗಳು ವಿರೋಧ ಪಕ್ಷಗಳ ವಿರುದ್ದವೇ ಹೋರಾಡುತ್ತಿವೆ ಎಂದು ಟೀಕಿಸಿದ್ದಾರೆ.

One thought on “ಕಾಡು ಪ್ರಾಣಿ ನೋಡಿ ಹೆದರ್ತಿದ್ದ ಜನ ಈಗ ಮೋದಿ ದೆಸೆಯಿಂದ ಹಸು ನೋಡಿ ಹೆದರ್ತಿದ್ದಾರೆ : ಲಾಲೂ

  1. Govindaraju M says:

    Thief always afraid ……

Leave a Reply